Vastu Tips: ಮನಿ ಪ್ಲ್ಯಾಂಟ್ ಮನಿಯನ್ನು ಮನೆ ಒಳಗೆ ತರ್ಬೇಕಂದ್ರೆ ಈ ರೂಲ್ಸ್ ಫಾಲೋ ಮಾಡಿ..
ಜನರು ಸಾಮಾನ್ಯವಾಗಿ ಮನೆಯಲ್ಲಿ ಅಥವಾ ವೃತ್ತಿ ನಿಭಾಯಿಸುವ ಸ್ಥಳದಲ್ಲಿ ಮನಿ ಪ್ಲಾಂಟ್‌ಗಳನ್ನು ಬೆಳೆಸುತ್ತಾರೆ. ಈ ಸಸ್ಯಗಳು ಆಕರ್ಷಕವಾಗಿರುವುದು ಮಾತ್ರವಲ್ಲದೆ ಇವುಗಳ ನಿರ್ವಹಣೆ ಕೂಡಾ ಸರಳವಾಗಿದೆ. ಅಷ್ಟೇ ಅಲ್ಲ, ವಾಸ್ತು ಪ್ರಕಾರ, ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮನ್ನು ಸಾಲಮುಕ್ತರಾಗಿಸುತ್ತದೆ. ಹಾಗಾಗಿ, ಮನೆಯಲ್ಲಿ ತಪ್ಪದೇ ಮನಿಪ್ಲ್ಯಾಂಟ್ ಬೆಳೆಸಿ.
ಇದು ಯಾವುದೇ ಬಾಟಲ್ ಅಥವಾ ಹೂವಿನ ಕಂಟೇನರ್ ಒಳಗೆ ಹೊಂದಿಕೊಳ್ಳುತ್ತದೆ. ಮನಿ ಪ್ಲಾಂಟ್ ಬೆಳೆಯುವಾಗ ಪರಿಗಣಿಸಬೇಕಾದ ವಾಸ್ತು ಅಂಶಗಳನ್ನು ನೋಡೋಣ.
ನೆಲದೊಂದಿಗೆ ಸಂಬಂಧ ಬೇಡ
ಮನಿ ಪ್ಲಾಂಟ್ ತ್ವರಿತವಾಗಿ ಬೆಳೆಯುತ್ತದೆ. ಪರಿಣಾಮವಾಗಿ, ಸಸ್ಯದ ಬಳ್ಳಿಗಳು ನೆಲವನ್ನು ಸಂಪರ್ಕಿಸದಂತೆ ನೋಡಿಕೊಳ್ಳಿ. ಅವನ್ನು ಮೇಲಕ್ಕೆ ಹಬ್ಬಿಸಿ. ಅದರ ಕೊಂಬೆಗಳು ಮೇಲ್ಮುಖವಾಗಿ ಬೆಳೆಯುವಾಗ ಹಗ್ಗದಿಂದ ಆಸರೆ ಕೊಡಬೇಕು. ಬೆಳೆಯುತ್ತಿರುವ ಬಳ್ಳಿಗಳು, ವಾಸ್ತು ಪ್ರಕಾರ, ಸಮೃದ್ಧಿ ಮತ್ತು ಬೆಳವಣಿಗೆಯ ಸಂಕೇತವಾಗಿದೆ. ಮನಿ ಪ್ಲಾಂಟ್‌ಗಳು ಲಕ್ಷ್ಮಿ ದೇವಿಯ ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ, ಅದಕ್ಕಾಗಿಯೇ ಅವುಗಳಿಗೆ ನೆಲವನ್ನು ಸ್ಪರ್ಶಿಸಲು ಬಿಡಬಾರದು.
ಒಣಗಲು ಬಿಡಬೇಡಿ
ಒಣಗಿದ ಮನಿ ಪ್ಲಾಂಟ್, ವಾಸ್ತು ಪ್ರಕಾರ, ವಿನಾಶದ ಸಂಕೇತವಾಗಿದೆ. ಇದು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು, ಮನಿ ಪ್ಲಾಂಟ್‌ಗೆ ನಿಯಮಿತವಾಗಿ ನೀರು ಹಾಕಿ. ಎಲೆಗಳು ಒಣಗಲು ಪ್ರಾರಂಭಿಸಿದರೆ ಕತ್ತರಿಸಿ ತೆಗೆದು ಹಾಕಿ.
ಈ ದಿಕ್ಕಿನಲ್ಲಿ ನೆಡಬೇಡಿ
ಎಲ್ಲಾ ಸಮಯದಲ್ಲೂ ಸರಿಯಾದ ದಿಕ್ಕಿನಲ್ಲಿ ಮನಿ ಪ್ಲ್ಯಾಂಟ್ ನೆಡಬೇಕು. ಅದನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ನೆಡಬೇಡಿ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎನ್ನುವುದು ವಾಸ್ತು. ಅದರ ಹೊರತಾಗಿ, ಮನೆ ಹೆಚ್ಚು ನಕಾರಾತ್ಮಕವಾಗುತ್ತದೆ. ಮನಿ ಪ್ಲಾಂಟ್ಸ್‌ನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವರು ಗಣೇಶ ಇರುತ್ತಾನೆ. ಈ ದಿಕ್ಕಲ್ಲಿ ನೆಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ.
ಇತರರಿಗೆ ನೀಡಬೇಡಿ
ವಾಸ್ತು ಪ್ರಕಾರ ಮನಿ ಪ್ಲಾಂಟ್‌ಗಳನ್ನು ಇತರರಿಗೆ ಹಸ್ತಾಂತರಿಸಬಾರದು. ಇದು ಗ್ರಹ ಶುಕ್ರವನ್ನು ಕೆರಳಿಸುತ್ತದೆ. ಶುಕ್ರ ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಹಾಗೆ ಮಾಡುವುದರಿಂದ ಉಡುಗೊರೆಯಾಗಿ ಪಡೆದವರು ನಿಮ್ಮ ಅದೃಷ್ಟವನ್ನು ತೆಗೆದುಕೊಂಡು ಹೋಗುತ್ತಾರೆ.
ಮನೆಯೊಳಗೆ ಮಾತ್ರ ಇರಿಸಿ
ಎಲ್ಲಾ ಸಮಯದಲ್ಲೂ ಮನಿ ಪ್ಲಾಂಟ್ ಅನ್ನು ಮನೆಯೊಳಗೆ ಇರಿಸಿ. ಈ ಸಸ್ಯಕ್ಕೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿಲ್ಲದ ಕಾರಣ, ಅದನ್ನು ಒಳಗೆ ಇಡಬೇಕು. ಮನೆಯ ಹೊರಗೆ ಮನಿ ಪ್ಲಾಂಟ್ ನೆಡುವುದು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗಿದೆ. ಇದು ಬಿಸಿಲಿನಲ್ಲಿ ಬೇಗನೆ ಒಣಗುತ್ತದೆ ಮತ್ತು ಬೆಳೆಯುವುದಿಲ್ಲ. ಕುಂಠಿತಗೊಂಡ ಸಸ್ಯಗಳ ಬೆಳವಣಿಗೆ ಮನೆಗೆ ದುರದೃಷ್ಟಕರವಾಗಿ ಪರಿಣಮಿಸುತ್ತದೆ. ಇದು ಆರ್ಥಿಕ ಸಂಕಷ್ಟದ ಮೂಲವಾಗುತ್ತದೆ.