ರಾಶಿಯ ಅನುಸಾರ ಮನೆ ಖರೀದಿಸಿ... ಇಲ್ಲವಾದರೆ ದೋಷ ಕಾಡುತ್ತೆ
ವಾಸ್ತು ಶಾಸ್ತ್ರದಲ್ಲಿ ವಾಸಿಸುವ ಕಟ್ಟಡ ಬೇರೆ ಬೇರೆ ಅಂಶಗಳಾದ ಸಾಮರಸ್ಯ, ದೈಹಿಕ ಮತ್ತು ಮಾನಸಿಕ ಸುಖ ಇವುಗಳಲ್ಲದೆ ಗುರುತ್ವಾಕರ್ಷಣೆ ಬಲ, ವಿದ್ಯುತ್ಕಾಂತೀಯ ಶಕ್ತಿ ಮತ್ತು ಅಗೋಚರ ಶಕ್ತಿಗಳನ್ನು ಒಳಗೊಂಡಿರುತ್ತದೆ. ಇವುಗಳ ಬಗ್ಗೆ ಅರಿತುಕೊಂಡು ಹೆಚ್ಚಾಗಿ ಕಟ್ಟಡ ಕಟ್ಟುವುದು ಭಾರತದಲ್ಲೇ ಎಂದು ಹೇಳಬಹುದು. ಸ್ವತಂತ್ರವಾಗಿ ಮನೆ ಕಟ್ಟುವವನು ಸಂಪೂರ್ಣವಾಗಿ ಅಲ್ಲದಿದ್ದರೂ ಶೇಕಡಾ 90% ರಷ್ಟು ವಾಸ್ತು ನೋಡಿಕೊಂಡು ಮನೆ ಕಟ್ಟಿಕೊಳ್ಳಬೇಕು.
ಇತ್ತೀಚಿನ ಜನ ಹೆಚ್ಚಾಗಿ ಫ್ಲಾಟ್ಗಳಲ್ಲಿ ವಾಸಿಸುತ್ತಾರೆ. ಪ್ಲಾಟ್ಗಳು ವಾಸ್ತು ಪ್ರಕಾರವಾಗಿ ಇರುವುದಿಲ್ಲ. ಆದರೂ ಈಗೀಗ 20 ರಿಂದ 25 % ರಷ್ಟು ವಾಸ್ತುಪ್ರಕಾರ ಕಟ್ಟಿರುತ್ತಾರೆ. ಮುಖ್ಯವಾಗಿ ಮುಖ್ಯದ್ವಾರ, ಎರಡನೆಯದು ಅಡುಗೆಮನೆ, ಮೂರನೆಯದು ಮಲಗುವ ಕೋಣೆ ಇವುಗಳನ್ನು ಪ್ಲಾಟ್ ಗಳಲ್ಲಿ ನೋಡುತ್ತಾರೆ.
ಏನೇ ಇರಲಿ ವಾಸ್ತುಶಾಸ್ತ್ರದ ಮೇಲೆ ನಂಬಿಕೆ ಇರುವವರು ತಾವು ಸ್ವಂತವಾಗಿ ಇರಬೇಕಾದ ಮನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು. ಸುಖ ಮತ್ತು ದುಃಖ ಇವೆರಡೂ ಮನೆ ಮತ್ತು ಮನಕ್ಕೆ ಸಂಬಂಧಿಸಿದ್ದು ಹಾಗಾಗಿ ಮನೆಯ ಮುಖ್ಯದ್ವಾರ ಯಾವ ರಾಶಿಯವರಿಗೆ ಒಳಿತಾಗುತ್ತದೆ ಎಂದು ನೋಡಬೇಕು.
1. ಪೂರ್ವ ದಿಕ್ಕಿಗೆ ಮುಖ ಮಾಡಿದ ಮನೆ ಅಥವಾ ಸೈಟ್ ಮೇಷ, ಸಿಂಹ ಮತ್ತು ಧನು ರಾಶಿಗೆ ಸೂಕ್ತವೆನ್ನುತ್ತಾರೆ.
2. ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಮನೆ ಅಥವಾ ಸೈಟ್ ವೃಷಭ, ಕನ್ಯಾ ಮತ್ತು ಮಕರ ರಾಶಿಗೆ ಸೂಕ್ತ ಎನ್ನುತ್ತಾರೆ.
3. ಪಶ್ಚಿಮ ದಿಕ್ಕಿಗೆ ಮುಖ ಮಾಡಿದ ಮನೆ ಅಥವಾ ಸೈಟ್ ಮಿಥುನ, ತುಲಾ ಮತ್ತು ಕುಂಭ ರಾಶಿಗೆ ಸೂಕ್ತವೆನ್ನುತ್ತಾರೆ.
4. ಉತ್ತರ ದಿಕ್ಕಿಗೆ ಮುಖ ಮಾಡಿದ ಮನೆ ಅಥವಾ ಸೈಟ್ ಕರ್ಕಾಟಕ, ವೃಶ್ಚಿಕ ಮತ್ತು ಮೀನಾ ರಾಶಿಗೆ ಸೂಕ್ತವೆನ್ನುತ್ತಾರೆ.
ಸಾಮಾನ್ಯವಾಗಿ ಪ್ಲಾಟ್ ಖರೀದಿಸುವವರು ಮುಖ್ಯವಾಗಿ ಉತ್ತರ ಮತ್ತು ಪೂರ್ವ ದಿಕ್ಕಿಗೆ ಮುಖವಿರುವ ಮುಖ್ಯದ್ವಾರದ ಮನೆ ತೆಗೆದುಕೊಂಡರೆ ಒಳ್ಳೆಯದು ಕಾರಣ ಮುಂದೆ ಆ ಮನೆಯಲ್ಲಿ ಮಕ್ಕಳು ಅವರ ಮಕ್ಕಳು ಹೀಗೀರುವಾಗ ಉತ್ತರ ಮತ್ತು ಪೂರ್ವ ದಿಕ್ಕಿಗೆ ಸಾಮಾನ್ಯವಾಗಿ ಎಲ್ಲರಿಗೂ ಒಳಿತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರ ಆಭಿಪ್ರಾಯ.