Valentine's day ಹತ್ರ ಬಂತು, ಇಷ್ಟ ಪಟ್ಟೋರು ಸಿಗಬೇಕಂದ್ರ ಈ ವಾಸ್ತು ಟಿಪ್ಸ್ ಫಾಲೋ ಮಾಡಿ!
ವ್ಯಾಲೆಂಟೈನ್ಸ್ ವೀಕ್ ಇನ್ನೇನು ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಯಸಿದ ಪ್ರೀತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಹಾಗಿದ್ರೆ ಬನ್ನಿ ವಾಸ್ತುವಿನ ಕೆಲವು ಸುಲಭ ಪರಿಹಾರಗಳನ್ನು ತಿಳಿದುಕೊಳ್ಳೋಣ.
Image: Getty Images
ವ್ಯಾಲೆಂಟೈನ್ಸ್ ವೀಕ್ (valentines week) ಇನ್ನೇನು ಪ್ರಾರಂಭವಾಗಲಿದೆ. ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಈ ದಿನ, ಕಪಲ್ಸ್ ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಒಟ್ಟಿಗೆ ಪ್ರೀತಿ ತುಂಬಿದ ಸಮಯವನ್ನು ಎಂಜಾಯ್ ಮಾಡುತ್ತಾರೆ. ಆದರೆ ಅನೇಕ ಬಾರಿ ನಾವು ಇಷ್ಟ ಪಟ್ಟ ಪ್ರೀತಿ ನಮಗೆ ಸಿಗಲು ತುಂಬಾನೆ ಸಮಯವಾಗುತ್ತೆ ಮತ್ತು ಇಷ್ಟು ದೀರ್ಘ ಕಾಯುವಿಕೆಯ ನಂತರವೂ ಯಶಸ್ಸು ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವಾಸ್ತುವಿನ ಕೆಲವು ಕ್ರಮಗಳು ಸಹಾಯ ಮಾಡಬಹುದು.
ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಕೆಲವು ಪರಿಹಾರಗಳಿವೆ (vastu tips for love), ಈ ಪರಿಹಾರಗಳನ್ನು ನೀವು ಪಾಲಿಸಿದರೆ ಅದರ ನಂತರ ವ್ಯಕ್ತಿಯು ತನ್ನ ಜೀವನದಲ್ಲಿ ತಾನು ಇಷ್ಟ ಪಟ್ಟ ಪ್ರೀತಿಯನ್ನು ಪಡೆಯಬಹುದು ಎನ್ನುತ್ತಾರೆ. ಹಾಗಿದ್ರೆ ಆ ಪರಿಹಾರಗಳು ಯಾವುವು ಅನ್ನೋದನ್ನು ನೋಡೋಣ.
ನೀವು ಬಯಸುವ ಪ್ರೀತಿಯನ್ನು ಪಡೆಯಲು ವಾಸ್ತು ಸಲಹೆಗಳು ಹೀಗಿವೆ
ಇಷ್ಟಪಟ್ಟ ಪ್ರೀತಿಯನ್ನು ಪಡೆಯಲು, ಮನೆಯ ನೈಋತ್ಯ ದಿಕ್ಕಿನಲ್ಲಿ ಎರಡು ಸುಂದರ ಪಕ್ಷಿಗಳ ಚಿತ್ರವನ್ನು (bird pair phoro) ಇರಿಸಿ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಲವ್ ಬರ್ಡ್ಸ್, ಪಾರಿವಾಳ ಮೊದಲಾದ ಹಕ್ಕಿಗಳ ಚಿತ್ರವನ್ನು ಇಡಬಹುದು. ಆದರೆ ಅವು ಜೋಡಿಯಾಗಿರುವಂತಹ ಚಿತ್ರವನ್ನೇ ಹಾಕಿದರೆ ಉತ್ತಮ.
ಮನೆಯ ಗೋಡೆಗಳ ಬಣ್ಣ (wall paint) ನೀಲಿಯಾಗಿದ್ದರೆ, ಅದನ್ನು ಶೀಘ್ರದಲ್ಲೇ ಬದಲಾಯಿಸಿ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಪ್ರೀತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಬಣ್ಣ ಬದಲಿಸಿ. ಅಲ್ಲದೆ, ಮನೆಯ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಮಲಗಬೇಡಿ.
ಕುಟುಂಬದಲ್ಲಿ ಪ್ರೀತಿಯ (family love) ಭಾವನೆಯನ್ನು ಹೆಚ್ಚಿಸಲು, ಕುಟುಂಬದ ಸದಸ್ಯರ ಚಿತ್ರವನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇರಿಸಿ ಮತ್ತು ಅವರ ಚಿತ್ರದಲ್ಲಿ ಕೊಳಕು ಅಥವಾ ಧೂಳು ಇರದಂತೆ ನೋಡಿಕೊಳ್ಳಿ.
ಪ್ರೀತಿಯ ವಿಷ್ಯದಲ್ಲಿ ಪ್ರಗತಿಗಾಗಿ ಕೆಂಪು ಬಣ್ಣವನ್ನು ಹೆಚ್ಚು ಬಳಸಿ. ಹೆಚ್ಚಾಗಿ ಕೆಂಪು ಬಣ್ಣದ ಬಟ್ಟೆ ಧರಿಸೋದು ಸಹ ಉತ್ತಮ. ಅಲ್ಲದೆ, ಮನೆಯಲ್ಲಿ ಮತ್ತು ವಿಶೇಷವಾಗಿ ಮಲಗುವ ಕೋಣೆ ಅಥವಾ ಸ್ನಾನಗೃಹದಲ್ಲಿ ಬಿಳಿ, ತಿಳಿ ಗುಲಾಬಿ ಅಥವಾ ಹಳದಿ ಬಣ್ಣವನ್ನು ಬಳಸಿ.
ಮನೆಯಲ್ಲಿ ಬೆಳಕು (sunlight) ಅಥವಾ ಕತ್ತಲು ಪ್ರೀತಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮನೆಯಲ್ಲಿ ಸೂರ್ಯನ ಬೆಳಕು ತುಂಬಲು ಸಾಕಷ್ಟು ವ್ಯವಸ್ಥೆ ಮಾಡಿ. ಅಲ್ಲದೆ, ಸೂರ್ಯನ ಬೆಳಕು ಮನೆಯೊಳಗೆ ಬರುವಂತಹ ಪರದೆಗಳನ್ನು ಹಾಕಿ, ಇದರಿಂದಾಗಿ ಮನೆಯಲ್ಲಿ ಉತ್ತಮ ಪ್ರಮಾಣದ ಬೆಳಕು ಬರಬಹುದು.
(ವಿ.ಸೂ : ಇಲ್ಲಿ ತಿಳಿಸಿರುವುದು ನಮ್ಮ ಅಭಿಪ್ರಾಯವಲ್ಲ, ಇವುಗಳನ್ನು ವಾಸ್ತು ಸಲಹೆಗಳಿಂದ ಆರಿಸಲಾಗಿದೆ.)