ಹೊಸ ವರ್ಷದಂದು ಈ ವಸ್ತು ಮನೆಗೆ ತಂದ್ರೆ ವರ್ಷಪೂರ್ತಿ ಅದೃಷ್ಟವೋ ಅದೃಷ್ಟ
2022 ರ ವರ್ಷವು ಕೊನೆಗೊಳ್ಳುತ್ತಿದೆ. 2023ರ ಹೊಸ ವರ್ಷ ಇನ್ನೇನು ಬರಲಿದೆ. ಪ್ರತಿಯೊಬ್ಬ ಮನುಷ್ಯನು ಹಳೆಯ ವರ್ಷದ ನೋವು ಹೊಸ ವರ್ಷದಲ್ಲಿ ಕೊನೆಗೊಳ್ಳಬೇಕೆಂದು ಮತ್ತು ಹೊಸ ವರ್ಷ ಜೀವನದಲ್ಲಿ ಸಂತೋಷವನ್ನು ತರಲಿ ಎಂದು ಬಯಸುತ್ತಾನೆ. ಹೊಸ ವರ್ಷದಂದು ಮನೆಗೆ ತರಬೇಕಾದ ಕೆಲವು ವಸ್ತುಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ.
ನೀವು ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ತಂದರೆ ಮನೆಯಲ್ಲಿ ಸಂತೋಷ, ಪ್ರಗತಿ ಮತ್ತು ಶಾಂತಿ ಈ ಮೂರು ನೆಲೆಯಾಗುತ್ತೆ. ಇದೀಗ ಹಳೆ ವರ್ಷದ ನಿರ್ಗಮನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಹೊಸ ವರ್ಷದ (Newyear 2023) ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜನರು ಎಲ್ಲಿ ಹೋಗಬೇಕು, ಹೊಸ ವರ್ಷದಲ್ಲಿ ಹೇಗೆ ಪಾರ್ಟಿ ಮಾಡಬೇಕು ಎಂದು ಯೋಜಿಸುವಲ್ಲಿ ನಿರತರಾಗಿದ್ದಾರೆ. ಇಷ್ಟೇ ಅಲ್ಲ, ಹೊಸ ವರ್ಷದಂದು ಅವರ ರೆಸಲ್ಯೂಶನ್ ಏನು ಅನ್ನೋದನ್ನು ಸಹ ತೀರ್ಮಾನಿಸಿದ್ದಾರೆ. ವಾಸ್ತುವಿನಲ್ಲಿ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅವುಗಳನ್ನು ಹೊಸ ವರ್ಷದಂದು ಮನೆಗೆ ತಂದರೆ ಅದೃಷ್ಟ ಬದಲಾಗುತ್ತದೆ. ಅವುಗಳು ಯಾವುವು ಅನ್ನೋದನ್ನು ನೋಡೋಣ.
ಮುತ್ತಿನ ಶಂಖ
ಈ ಹೊಸ ವರ್ಷದಂದು ಮುತ್ತಿನ ಶಂಖವನ್ನು ಮನೆಗೆ ತರುವುದು ಶುಭ. ನಾವೆಲ್ಲರೂ ವಿಷ್ಣುವಿನ ಕೈಯಲ್ಲಿ ಶಂಖ ನೋಡಿದ್ದೇವೆ. ಈ ಶಂಖವನ್ನು ಮನೆಯೊಳಗೆ ತರುವುದರಿಂದ ಆರ್ಥಿಕ ಅಡಚಣೆ (financial problem) ನಿವಾರಣೆಯಾಗುತ್ತೆ ಎಂದು ಹೇಳಲಾಗುತ್ತದೆ. ಜೊತೆಗೆ ಮನೆಯಲ್ಲಿ ಸಂಪತ್ತಿನ ಮಳೆ ಸುರಿಯುತ್ತದೆ. ಆದ್ದರಿಂದ, ಹೊಸ ವರ್ಷದಲ್ಲಿ, ನೀವು ಮುತ್ತಿನ ಶಂಖವನ್ನು ಖರೀದಿಸಿ ಪೂಜಿಸಿ.
ನವಿಲುಗರಿ
ವಾಸ್ತು ಪ್ರಕಾರ, ಲಕ್ಷ್ಮಿ ದೇವಿ ನವಿಲು ಗರಿಯಲ್ಲಿ (peacock feather) ವಾಸಿಸುತ್ತಾಳೆ. ಇಷ್ಟೇ ಅಲ್ಲ, ನವಿಲು ಗರಿಗಳು ವಿಷ್ಣುವಿಗೆ ಸಹ ತುಂಬಾ ಪ್ರಿಯ. ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣು ಮನೆಯಲ್ಲಿ ವಾಸಿಸುತ್ತಿದ್ದರೆ, ಆಗ ಸಂತೋಷ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಆದ್ದರಿಂದ ಈ ಹೊಸ ವರ್ಷ ನವಿಲು ಗರಿಗಳನ್ನು ಮನೆಗೆ ತನ್ನಿ. ವಾಸ್ತುವಿನ ಪ್ರಕಾರ, ಅವುಗಳ ಸಂಖ್ಯೆ 1 ಮತ್ತು 3 ರ ನಡುವೆ ಇರಬೇಕು.
ಸಣ್ಣ ತೆಂಗಿನಕಾಯಿ
ವಾಸ್ತು ಪ್ರಕಾರ, ಹೊಸ ವರ್ಷದಲ್ಲಿ ಒಂದು ಸಣ್ಣ ತೆಂಗಿನಕಾಯಿಯನ್ನು ಖರೀದಿಸಬೇಕು. ಇದು ಮನೆಗೆ ಸಮೃದ್ಧಿಯನ್ನು ತರುತ್ತದೆ. ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಸುರಕ್ಷಿತವಾಗಿ ನೀವು ಹಣವನ್ನು ಇಟ್ಟಿರುವ ಸ್ಥಳದಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಸಮೃದ್ಧಿಯಾಗುತ್ತೆ.
ಲೋಹದ ಆಮೆ
ವಾಸ್ತು ಶಾಸ್ತ್ರದಲ್ಲಿ (vastu tips) ಆಮೆಯನ್ನು ಅದೃಷ್ಟ ಮತ್ತು ಸಮೃದ್ಧಿ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಇರಿಸೋದರಿಂದ ಸಕಾರಾತ್ಮಕ ಶಕ್ತಿಯೂ ಮನೆಯಲ್ಲಿ ಹೆಚ್ಚುತ್ತೆ. ಹೊಸ ವರ್ಷದಲ್ಲಿ, ಬೆಳ್ಳಿ, ಕಂಚು ಅಥವಾ ಹಿತ್ತಾಳೆಯ ಯಾವುದೇ ವಸ್ತು ಖರೀದಿಸಿ ಮನೆಗೆ ತನ್ನಿ. ಇದು ನಿಮ್ಮ ಜೀವನದಲ್ಲಿ ಸಮೃದ್ಧಿ ಹೆಚ್ಚಿಸುತ್ತದೆ.
ತುಳಸಿ ಸಸ್ಯ
ತುಳಸಿ ಸಸ್ಯ ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವ ಮೂಲಕ, ಕುಟುಂಬವು ಆರೋಗ್ಯಕರವಾಗಿರುತ್ತದೆ. ಸಂತೋಷ ನೆಲೆಸುತ್ತದೆ. ಹೊಸ ವರ್ಷದಂದು, ನೀವು ಮನೆಯಲ್ಲಿ ತುಳಸಿ ಸಸ್ಯ (Tulasi Plant) ನೆಡಬಹುದು. ವಾಸ್ತವವಾಗಿ, ತುಳಸಿ ಸಸ್ಯವು ಭಗವಾನ್ ವಿಷ್ಣುವಿಗೆ ಪ್ರಿಯ. ಇಷ್ಟೇ ಅಲ್ಲ, ತುಳಸಿ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ಇದು ಅನೇಕ ರೋಗಗಳನ್ನು ಸಹ ದೂರ ಮಾಡುತ್ತೆ.
ಲೋಹದ ಆನೆ
ವಾಸ್ತು ಶಾಸ್ತ್ರದ ಪ್ರಕಾರ, ನೀವು ಲೋಹದಿಂದ ಮಾಡಿದ ಆನೆಯನ್ನು ಮನೆಯಲ್ಲಿಟ್ಟರೆ, ಅದು ನಕಾರಾತ್ಮಕ ಶಕ್ತಿಯನ್ನು (Negative Energy) ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಆದ್ದರಿಂದ ಈ ವರ್ಷ, ಹೊಸ ವರ್ಷದ ಮುನ್ನಾದಿನದಂದು, ಲೋಹದಿಂದ ಮಾಡಿದ ಆನೆಯ ಪ್ರತಿಮೆಯನ್ನು ಮನೆಗೆ ತನ್ನಿ.