ಮನಿ ಪ್ಲ್ಯಾಂಟ್ ಕದ್ದು ತಂದು ನೆಡುವುದರಿಂದ ಶ್ರೀಮಂತಿಕೆ ಹೆಚ್ಚಾಗೋದು ನಿಜಾನ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ, ಅನ್ನೋ ನಂಬಿಕೆ ಇದೆ. ಆದರೆ ಈ ಗಿಡವನ್ನು ಕದ್ದು ತಂದು ನೆಡಬೇಕೇ? ಅನ್ನೋದ್ರ ಬಗ್ಗೆ ತಿಳಿಯೋಣ.
ಮನಿಪ್ಲ್ಯಾಂಟ್ (money plant) ಗಿಡವನ್ನು ಕದ್ದು ನೆಡುವುದು ಮಂಗಳಕರ ಹಾಗೂ ಇದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿ ಆಗುತ್ತೆ, ನೀವು ಶ್ರೀಮಂತರಾಗ್ತೀರಿ ಅಂತ ಅನೇಕ ಜನರು ಹೇಳಿರೋದನ್ನು ನೀವು ಕೇಳಿರಬಹುದು ಅಲ್ವಾ? ಆದರೆ ಇದು ನಿಜವೇ? ಸುಳ್ಳೇ ಅನ್ನೋದು ನಿಮಗೆ ಗೊತ್ತಾ? ನಿಮ್ಮ ಈ ಗೊಂದಲವನ್ನು ನಿವಾರಿಸೋ ಕೆಲಸವನ್ನು ಈ ಲೇಖದ ಮೂಲಕ ಮಾಡ್ತಿದ್ದೀವಿ. ಅದರ ಬಗ್ಗೆ ತಿಳಿಯೋದಕ್ಕೆ ಮುಂದೆ ಓದಿ…
ಹೆಚ್ಚಿನ ಜನರು ಹಣದ ಕೊರತೆಯಿಲ್ಲದ ಮನೆಗಳಿಂದ ಅಂದರೆ, ಶ್ರೀಮಂತರ ಮನೆಗಳಿಂದ ಮನಿ ಪ್ಲಾಂಟ್ ಕದಿಯಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಮನಿ ಪ್ಲಾಂಟ್ ಅನ್ನು ಕದಿಯೋದ್ರಿಂದ ನಿಜವಾಗಿಯೂ ಹಣವನ್ನು ನಾವು ಶ್ರೀಮಂತರಾಗುತ್ತೇವೆಯೇ ಎನ್ನುವ ಪ್ರಶ್ನೆ ಕೂಡ ಮನಸ್ಸಿಗೆ ಬರುತ್ತದೆ. ಬನ್ನಿ, ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳೋಣ.
ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸಿದರೆ ಏನಾಗುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಡೋದ್ರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ಸಸ್ಯಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು (positive power) ಸಾಗಿಸುವಲ್ಲಿ ಮತ್ತು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಗೆ ಸಕಾರಾತ್ಮಕ ಕಂಪನಗಳನ್ನು ತರುವ ಸಸ್ಯಗಳ ಲಿಸ್ಟ್ ನಲ್ಲಿ ಇದು ಕೂಡ ಒಂದು. ಹಾಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ನೆಡೋದ್ರಿಮ್ದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಸಹ ಈ ಸಸ್ಯ ಸಹಕಾರಿಯಾಗಿದೆ.
ಮನಿ ಪ್ಲಾಂಟ್ ಅನ್ನು ಕದ್ದು ತರೋದು ಸರೀನಾ?
ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ಅನೇಕ ರೀತಿಯಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ, ಆದರೆ ಬೇರೆಯವರ ಮನೆಯಲ್ಲಿದ್ದ ಮನಿ ಪ್ಲಾಂಟ್ ಅನ್ನು ಕದಿಯುವುದು (stealing money plant) ಮಾತ್ರ ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಕದಿಯುವ ಮೂಲಕ, ನಾವು ಅದರ ಶಕ್ತಿಯನ್ನು ನಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುತ್ತೇವೆ, ಏಕೆಂದರೆ ಯಾವುದೇ ರೀತಿಯ ಕಳ್ಳತನ ಮಾಡೋದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತೆ. ಕೆಟ್ಟ ಕೆಲಸದ ಶಕ್ತಿ ಯಾವಾಗಲೂ ನಕಾರಾತ್ಮಕವಾಗಿರುತ್ತದೆ, ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಕದಿಯೋದು ಕೂಡ ತಪ್ಪು.
ಮನಿ ಪ್ಲ್ಯಾಂಟನ್ನು ಹಣ ಕೊಟ್ಟೆ ಖರೀದಿಸಿ
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟನ್ನು ಹಣ ಕೊಟ್ಟು ಖರೀದಿಸಿದರೆ (buy money plant) ಲಾಭ ಹೆಚ್ಚು. ಇದು ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ತರುವುದಲ್ಲದೆ, ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲಿರುವಂತೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬೆಳಿಗ್ಗೆ ಅಥವಾ ಸಂಜೆ ಮನಿ ಪ್ಲಾಂಟ್ ನೆಡೋದು ತುಂಬಾನೆ ಶುಭಕರವಾಗಿದೆ. ಅಷ್ಟೇ ಅಲ್ಲ ನೀವು ಮುಖ್ಯವಾಗಿ ಆರ್ಥಿಕ ಅಭಿವೃದ್ಧಿಗಾಗಿ ಮನಿ ಪ್ಲಾಂಟ್ ನೆಡುತ್ತಿದ್ದರೆ, ಶುಕ್ರವಾರ ಮನಿ ಪ್ಲಾಂಟ್ ನೆಡೋದು ಬಹಳ ಶುಭವಾಗಿದೆ.
money plant
ಮನಿ ಪ್ಲಾಂಟ್ ನೆಲಕ್ಕೆ ಬೀಳದಂತೆ ರಕ್ಷಿಸಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಮನಿ ಪ್ಲಾಂಟ್ ನ ಬಳ್ಳಿ ನೆಲವನ್ನು ಸ್ಪರ್ಶಿಸಲು ಪ್ರಾರಂಭಿಸಿದರೆ, ತಕ್ಷಣ ಅದನ್ನು ಎತ್ತರದ ಜಾಗದಲ್ಲಿ ಇರಿಸಿ. ಮನಿ ಪ್ಲಾಂಟ್ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ, ಆದ್ದರಿಂದ ಅದನ್ನು ನೆಲಕ್ಕೆ ಟಚ್ ಆಗೋದಕ್ಕೆ ಬಿಡಬಾರದು. ನೆಲವನ್ನು ಸ್ಪರ್ಶಿಸುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೆಲವನ್ನು ಸ್ಪರ್ಶಿಸುವ ಮನಿ ಪ್ಲಾಂಟ್ ಮನೆಗೆ ಅಶುಭದ ಸಂಕೇತವಾಗಿದೆ, ಆದ್ದರಿಂದ ನಿಮ್ಮ ಮನೆಯಲ್ಲಿನ ಮನಿ ಪ್ಲಾಂಟ್ ಹೆಚ್ಚು ಬೆಳೆದು ನೆಲದ ಮೇಲೆ ನೇತಾಡಲು ಪ್ರಾರಂಭಿಸಿದರೆ, ಹಗ್ಗದ ಸಹಾಯದಿಂದ ಅದನ್ನು ಗೋಡೆಯ ಮೇಲೆ ಮೇಲ್ಮುಖವಾಗಿ ಏರುವಂತೆ ಮಾಡಿ. ಮನಿ ಪ್ಲ್ಯಾಂಟ್ ಎತ್ತರ ಎತ್ತರಕ್ಕೆ ಬೆಳೆದಷ್ಟು, ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗುತ್ತಲೇ ಸಾಗುತ್ತೆ.