ಮನೆಯಲ್ಲಿ ಪ್ರತಿದಿನ ಶಂಖ ಊದಿದರೆ ನೆಗೆಟಿವ್ ಎನರ್ಜಿ ಆಗುತ್ತೆ ದೂರ
ಮನೆಯಲ್ಲಿ ಹಲವು ವಿಷಯಗಳ ಕಡೆಗೆ ನಾವು ಗಮನ ಹರಿಸೋದಿಲ್ಲ, ಅದು ಹಳೆಯ ವಸ್ತುಗಳೇ ಇರಬಹುದು, ಜೇಡರ ಬಲೆಯೇ ಇರಬಹುದು, ಇರಲಿ ಬಿಡಿ ಎಂದು ಸುಮ್ಮನಾಗುತ್ತೇವೆ. ಆದರೆ ಇವೇ ವಸ್ತುಗಳಿಂದ ವಾಸ್ತು ದೋಷ ಅಥವಾ ಮನೆಯಲ್ಲಿ ನೆಗೆಟಿವ್ ಎನರ್ಜಿ ಅವರಿಸಿ ಕೊಳ್ಳುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಮನೆಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ತಿಳಿಯೋಣ...
ಮನೆಯನ್ನು ಕ್ಲೀನ್ ಆಗಿಟ್ಟುಕೊಳ್ಳಿ. ಯಾವುದೇ ಕಸ, ಬೇಡದ ವಸ್ತುಗಳನ್ನು ಮನೆಯಲ್ಲಿಡಬೇಡಿ. ಇದರಿಂದ ಮನಸ್ಸಿನಲ್ಲಿ ಹಾಗೂ ಮನೆಯ ಮೇಲೆ ನೆಗೆಟಿವ್ ಎನರ್ಜಿ ಬೀಳುತ್ತದೆ.
ಮನೆಯಲ್ಲಿ ಜೇಡರ ಬಲೇ ಇದ್ದರೆ, ಆದಷ್ಟು ಆದಷ್ಟು ಬೇಗ ತೆಗೆದು ಸ್ವಚ್ಛ ಮಾಡಿ. ಜೇಡರ ಬಲೆ ಎಂದರೆ ಕಸ ಎಂದರ್ಥ. ಎಲ್ಲಿ ಸ್ವಚ್ಛವಾಗಿರುವುದಿಲ್ಲವೋ, ಅಲ್ಲಿ ಲಕ್ಷ್ಮಿ ಬಂದು ನೆಲೆಸುವುದಿಲ್ಲ ಎನ್ನುವ ನಂಬಿಕೆ ಇದೆ.
ಹಳೆಯ ವಸ್ತುಗಳನ್ನು ಮನೆಯಲ್ಲಿ ಇಡಬಾರದು, ಇದರಿಂದಲೂ ನೆಗೆಟಿವ್ ಎನರ್ಜಿ ಉಂಟಾಗುತ್ತದೆ. ಆದುದರಿಂದ ವಸ್ತು ಹಳೆಯದಾದ ಕೂಡಲೇ ಅವುಗಳನ್ನು ಬಿಸಾಕಿ.
ಮನೆಯಲ್ಲಿ ಲಕ್ಷ್ಮಿ ದೇವಿ ಅಥವಾ ಇನ್ಯಾವುದೇ ದೇವರ ತುಂಡಾದ ಫೋಟೋವನ್ನು ಇಡಬೇಡಿ. ತುಂಡಾದ ಫೋಟೋ ಮನೆಯಲ್ಲಿದ್ದರೆ ಅದರಿಂದ ಮನೆಯವರ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.
ಗಡಿಯಾರ ಹಾಳಾಗಿದ್ದರೆ ಅಥವಾ ನಿಂತು ಹೋಗಿದ್ದರೆ, ಅದನ್ನು ಆದಷ್ಟು ಬೇಗ ಮನೆಯಿಂದ ಹೊರ ಹಾಕಿ, ಅಥವಾ ಸರಿ ಪಡಿಸಿ. ಯಾಕೆಂದರೆ ಗಡಿಯಾರ ಜೀವನದ ನಿರಂತರತೆಯ ಸಂಕೇತ. ಅದು ನಿಂತು ಹೋದರೆ ನಮ್ಮ ಜೀವನ ಸಹ ನಿಂತು ಹೋಗುತ್ತದೆ ಎಂದು ನಂಬಲಾಗಿದೆ.
ಮನೆಯ ಎದುರಿನ ಭಾಗದಲ್ಲಿ ಅಕ್ವೇರಿಯಂ ಅಥವಾ ಮುಖವಾಡ, ಕುದುರೆ ಲಾಳ ತಂದಿಡಿ.. ಇದರಿಂದ ಯಾವುದೇ ನೆಗೆಟಿವ್ ಎನರ್ಜಿಗಳು ಮನೆಯವರ ಮೇಲೆ ಬೀಳುವುದಿಲ್ಲ.
ಪ್ರತಿದಿನ ಮನೆಯಲ್ಲಿ ಶಂಖ ಊದಿದರೆ ತುಂಬಾ ಉತ್ತಮ. ಇದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಜೊತೆಗೆ ಮನೆಯ ಲಾಗಿರುವ ನೆಗೆಟಿವ್ ಎನರ್ಜಿ ದೂರವಾಗುತ್ತದೆ.