ರುಚಿಗೆ ಮಾತ್ರವಲ್ಲ, ದುಷ್ಟ ಶಕ್ತಿ, ವಾಸ್ತು ದೋಷ ನಿವಾರಣಗೂ ಉಪ್ಪೆಂಬ ದಿವ್ಯೌಷಧ
ಅಡುಗೆ ರುಚಿ ಹೆಚ್ಚಿಸಲು ಉಪ್ಪು ಬೇಕು ನಿಜ. ನಮ್ಮ ದೇಹಕ್ಕೂ ಅತ್ಯಗತ್ಯ. ಆದಕ್ಕಾಗಿಯೇ ಗಾಂಧೀಜಿ ಸಹ ಉಪ್ಪಿಗೆ ಬ್ರಿಟಿಷರು ತೆರಿಗೆ ಹಾಕಿದಾಗ ಹೋರಾಡಿದ್ದು. ಸ್ವಾತಂತ್ರ್ಯ ಹೋರಾಟದಲ್ಲೂ ಉಪ್ಪಿಗೆ ಎಲ್ಲಿಲ್ಲದ ಮಹತ್ವದ ಸ್ಥಾನವಿದೆ. ಅಂಥ ಉಪ್ಪಿನಿಂದ ಮಕ್ಕಳು, ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನೂ ಹೋಗಲಾಡಿಸಬಹುದು. ಹೇಗೆ?
ಕೆಲವರು ಬೆವರು ಸುರಿಸಿ ದುಡಿಯುತ್ತಿರುತ್ತಾರೆ. ಪರಿಶ್ರಮಕ್ಕೆ ಸಾಕಷ್ಟು ಅಲ್ಲದಿದ್ದರೂ, ಕೈಗೆ ಒಂದಿಷ್ಟು ದುಡ್ಡು ಸೇರುತ್ತೆ. ಆದರೆ, ಕೈಯಲ್ಲಿ ಉಳಿಸಲು ಆಗುವುದೇ ಇಲ್ಲ. ಏನಾದರೂ ಒಂದು ಸಮಸ್ಯೆ ಬಂದು ಎಲ್ಲವೂ ಬರಿದಾಗುತ್ತದೆ. ಅಂಥ ಸಮಸ್ಯೆ ನಿವಾರಣೆಗೆ ಇಲ್ಲಿವೆ ಕೆಲವು ವಾಸ್ತು ಟಿಪ್ಸ್.
ಉಪ್ಪು ನೆಗಟಿವ್ ಶಕ್ತಿಯನ್ನು ದೂರಗೊಳಿಸಿ, ಪಾಸಿಟಿವ್ ಎನರ್ಜಿಯನ್ನು ಸೃಷ್ಟಿಸುತ್ತದೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.
ರಾಹುವಿನ ಪ್ರಭಾವದಿಂದ ಕೆಟ್ಟ ಪರಿಣಾಮಗಳು ಬೀರುತ್ತಿದ್ದರೆ, ಉಪ್ಪನ್ನು ಗಾಜಿನ ತಟ್ಟೆಯಲ್ಲಿ ಹಾಕಿ ಬಾತ್ ರೂಮಿನಲ್ಲಿಡಬೇಕು. ರಾಹು ತಣ್ಣಗಾಗುತ್ತಾನೆ. ವಾಸ್ತು ದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
ಉಪ್ಪು ಮತ್ತು ಕನ್ನಡಿಯನ್ನು ಜೊತೆಯಾಗಿಟ್ಟರೆ ರಾಹು ದುಷ್ಟ ಪರಿಣಾಮ ಬೀರುವುದಿಲ್ಲ. ಭಯ ನಿವಾರಣೆಗೂ ಇದು ಅತ್ಯುತ್ತಮ ಮದ್ದು.
ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಮನೆ ಪ್ರವೇಶ ದ್ವಾರದಲ್ಲಿ ಇಡೋದರಿಂದ ಕೆಟ್ಟ ಶಕ್ತಿ ಹತ್ತಿರವೂ ಸುಳಿಯುವುದಿಲ್ಲ. ಅದೇ ರೀತಿ ಉಪ್ಪನ್ನು ಕಾರ್ಖಾನೆ, ಅಂಗಡಿ ಎದುರುಗಡೆ ಕಟ್ಟಿದರೆ ಹೆಚ್ಚು ಹೆಚ್ಚು ಆರ್ಥಿಕ ಅಭಿವೃದ್ಧಿಯಾಗುತ್ತದೆ.
ಒಂದು ಮುಷ್ಠಿಯಲ್ಲಿ ಉಪ್ಪನ್ನು ಹಿಡಿದು ವ್ಯಕ್ತಿಗೆ ಮೂರು ಬಾರಿ ಸುಳಿದು, ಬಿಸಾಕಿದರೆ ಅದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಹಾಗೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದು ನಿವಾರಣೆಯಾಗುತ್ತದೆ.
ಮಕ್ಕಳೂ ಸುಮ್ಮನೆ ರಚ್ಚೆ ಹಿಡಿಯುತ್ತವೆ. ಯಾರದ್ದೋ ದೃಷ್ಟಿ ತಾಕಿದೆ ಎಂದು ಹೇಳುತ್ತೇವೆ. ಆಗಲೂ ಉಪ್ಪಿನಿಂದ ದೃಷ್ಟಿ ತೆಗೆಯಬೇಕು. ಅಥವಾ ಸ್ನಾನದ ನೀರಿಗೆ ಒಂದು ಮುಷ್ಟಿ ಕಲ್ಲುಪ್ಪು ಹಾಕಿದರೆ ಕೆಟ್ಟ ದೃಷ್ಟಿ ದೂರವಾಗುತ್ತದೆ.
ಬಚ್ಚಲು ಮನೆಯ ಮೂಲೆಯಲ್ಲಿ ಒಂದು ಲೋಟ ಅಥವಾ ಬಟ್ಟಲಲ್ಲಿ ಕಲ್ಲುಪ್ಪು ಹಾಕಿಟ್ಟರೂ ವಾಸ್ತು ದೋಷ ನಿವಾರಣೆಯಾಗಿ, ಸಮಸ್ಯೆಗಳು ಪರಿಹಾರವಾಗುವುದು ಗ್ಯಾರಂಟಿ.
ಕಲಾವಿದರು ವೇದಿಕೆ ಮೇಲೆ ಪ್ರದರ್ಶನ ಕೊಟ್ಟ ನಂತರ ಅವರಿಗೆ ತಾಕಿರಬಹುದಾದ ದೃಷ್ಟಿಯನ್ನೂ ಸ್ನಾನದ ನೀರಿಗೆ ಉಪ್ಪು ಹಾಕಿ ಕೊಂಡು ನಿವಾರಿಸಿಕೊಳ್ಳುತ್ತಾರೆ.
salt