ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನಿಟ್ರೆ, ಆರ್ಥಿಕ ಸಂಕಷ್ಟ ಖಚಿತ
ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive Vibes) ತರಲು ವಾಸ್ತು ಶಾಸ್ತ್ರವು ಅನೇಕ ನಿಯಮಗಳು ಮತ್ತು ಪರಿಹಾರಗಳನ್ನು ವಿವರಿಸುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಎಲ್ಲವೂ ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ (Negative Energy) ಅಥವಾ ನಕಾರಾತ್ಮಕ ಪರಿಣಾಮ ಬೀರುತ್ತೆ. ಇದು ಮನೆಯ ಮೂಲೆಯಾಗಿದ್ದರೂ ಸಹ.
ಮುಖ್ಯವಾಗಿ ನಾಲ್ಕು ದಿಕ್ಕುಗಳಿವೆ(Direction) - ಪೂರ್ವ, ಪಶ್ಚಿಮ, ಉತ್ತರ (North) ಮತ್ತು ದಕ್ಷಿಣ (South). ಹಿಂದೂ ಧರ್ಮದ (Hindu Religion) ಪ್ರಕಾರ, ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ಮಹತ್ವವಿದೆ. ಇಲ್ಲಿ ಉತ್ತರ ದಿಕ್ಕಿನ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳೋಣ. ಕೆಲವು ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡೋದರಿಂದ ವಾಸ್ತು ದೋಷಗಳು ಉಂಟಾಗಬಹುದು. ಹಾಗೆಯೇ, ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಉತ್ತರ ದಿಕ್ಕಿನ ಮಹತ್ವವೇನು?
ಉತ್ತರ ದಿಕ್ಕು ಅತ್ಯಂತ ಸಕಾರಾತ್ಮಕ ಶಕ್ತಿಯನ್ನು ಹೊಂದಿದೆ. ಈ ದಿಕ್ಕಿನಲ್ಲಿ, ಸಂಪತ್ತಿನ ದೇವತೆ ಕುಬೇರ, ಗಣೇಶ ಮತ್ತು ತಾಯಿ ಲಕ್ಷ್ಮಿ(Goddess Lakshmi) ನೆಲೆಸಿದ್ದಾರೆ. ಹಣವು ಈ ದಿಕ್ಕಿನಿಂದ ಬರುತ್ತೆ ಎಂದು ನಂಬಲಾಗಿದೆ. ಯಾವ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಬಾರದು ನೋಡೋಣ.
ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಡಿ
ಪೀಠೋಪಕರಣಗಳು ಮುಂತಾದ ಭಾರವಾದ ವಸ್ತುಗಳನ್ನು ಎಂದಿಗೂ ಉತ್ತರ ದಿಕ್ಕಿನಲ್ಲಿ ಇಡಬೇಡಿ. ಇದನ್ನು ಮಾಡೋದರಿಂದ, ಈ ದಿಕ್ಕಿನ ಮೇಲಿನ ಹೊರೆ ಹೆಚ್ಚಾಗುತ್ತೆ. ಅದೇ ಸಮಯದಲ್ಲಿ, ಸಕಾರಾತ್ಮಕ ಶಕ್ತಿಯ(Positivity) ಸಂವಹನಕ್ಕೆ ಅಡ್ಡಿಯಾಗುತ್ತೆ ಮತ್ತು ಪ್ರಗತಿಯ ಮಾರ್ಗವು ಮುಚ್ಚಲ್ಪಡುತ್ತೆ.
ತಾಯಿ ಲಕ್ಷ್ಮಿ ಈ ಕೆಲಸದ ಬಗ್ಗೆ ಕೋಪಗೊಳ್ಳುತ್ತಾಳೆ
ಶೂ ಮತ್ತು ಚಪ್ಪಲಿಗಳನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು. ಕಸದ ಬುಟ್ಟಿಗಳನ್ನು(Dust bin) ಉತ್ತರ ದಿಕ್ಕಿನಲ್ಲಿ ಇಡಬಾರದು ಅಥವಾ ಕಸವನ್ನು ಈ ದಿಕ್ಕಿನಲ್ಲಿ ಎಸೆಯಬಾರದು. ಇದು ತಾಯಿ ಲಕ್ಷ್ಮಿಗೆ ಕೋಪ ತರಬಹುದು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
ಉತ್ತರ ದಿಕ್ಕಿನಲ್ಲಿ ಶೌಚಾಲಯ(Toilet) ಇರಬಾರದು.
ಮನೆಯ ಶೌಚಾಲಯವು ಎಂದಿಗೂ ಉತ್ತರ ದಿಕ್ಕಿನಲ್ಲಿರಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಶೌಚಾಲಯದಿಂದ ಅತ್ಯಂತ ನಕಾರಾತ್ಮಕ ಶಕ್ತಿ ಹೊರಬರುತ್ತೆ. ಹಾಗಾಗಿ ಉತ್ತರ ದಿಕ್ಕಿನಲ್ಲಿ ಶೌಚಾಲಯ ಮಾಡಬಾರದು.
ನಿಮ್ಮ ಶೌಚಾಲಯವು ಉತ್ತರ ದಿಕ್ಕಿನಲ್ಲಿದ್ದರೆ, ಈ ವಾಸ್ತು ದೋಷವನ್ನು ತೆಗೆದುಹಾಕಲು ನೀವು ಈ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಸಂಪೂರ್ಣ ಉಪ್ಪನ್ನು(Salt) ತುಂಬಿಸಿ ಮತ್ತು ಅದನ್ನು ಒಂದು ಮೂಲೆಯಲ್ಲಿ ಇರಿಸಿ. ಅಲ್ಲದೆ, ಶೌಚಾಲಯದ ಬಾಗಿಲು ಯಾವಾಗಲೂ ಮುಚ್ಚಿರಬೇಕು.