MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಕನಸಿನಲ್ಲಿ ಪಕ್ಷಿಗಳನ್ನು ಕಂಡ್ರೆ ಅದಕ್ಕೇನು ಅರ್ಥ?

ಕನಸಿನಲ್ಲಿ ಪಕ್ಷಿಗಳನ್ನು ಕಂಡ್ರೆ ಅದಕ್ಕೇನು ಅರ್ಥ?

ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ವಿಧದಲ್ಲಿ ಪಕ್ಷಿಗಳ ಕನಸು ಬಿದ್ದಿರುತ್ತೆ, ಇದು ಸಾಮಾನ್ಯ. ಆದರೆ ಅಪರೂಪವಾಗಿ  ಹಮ್ಮಿಂಗ್ ಬರ್ಡ್ಸ್ ಗಳ ಕನಸು ಬೀಳುವುದು ವಿಶಿಷ್ಟ ಅರ್ಥವನ್ನು ನೀಡುತ್ತೆ. ಕನಸುಗಳಲ್ಲಿ ಹಮ್ಮಿಂಗ್ ಬರ್ಡ್ಸ್ ಸಕಾರಾತ್ಮಕ ಅರ್ಥಗಳೊಂದಿಗೆ ಬರುತ್ತವೆ ಮತ್ತು ಅದೃಷ್ಟ ತರುತ್ತೆ ಎಂಬ ನಂಬಿಕೆ ಇದೆ.  

2 Min read
Suvarna News
Published : Feb 23 2023, 05:38 PM IST| Updated : Feb 24 2023, 10:50 AM IST
Share this Photo Gallery
  • FB
  • TW
  • Linkdin
  • Whatsapp
19

ಚೆನ್ನಾಗಿ ನಿದ್ರೆ ಮಾಡುವವರಿಗೆ ಕನಸು (Dreams) ಬೀಳೋದು ಸಾಮಾನ್ಯ. ಒಂದೊಂದು ಕನಸುಗಳಿಗೆ ಒಂದೊಂದು ಅರ್ಥವನ್ನು ಸೂಚಿಸುತ್ತೆ. ಕೆಲವೊಂದು ಕನಸುಗಳು ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳ ನೆರವೇರಿಕೆಗೆ ಸಂಬಂಧಿಸಿದಂತೆ ನೀವು ತುಂಬಾ ಅದೃಷ್ಟಶಾಲಿ ಎಂದು ತೋರಿಸುತ್ತೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ, ಅದನ್ನು ಸ್ವಲ್ಪ ಪ್ರಯತ್ನದಿಂದ ಪೂರ್ಣಗೊಳಿಸಬಹುದು. ಪಕ್ಷಿಗಳ ಕನಸು ನಿಮ್ಮ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ಜೀವನದ ಹೊಸ ಪ್ರಾರಂಭಗಳ ಮುನ್ಸೂಚನೆ.

29

ಸಾಮಾನ್ಯವಾಗಿ, ಪಕ್ಷಿಗಳು(Dreams) ನಿಮ್ಮ ಗುರಿ, ಆಕಾಂಕ್ಷೆ ಮತ್ತು ಭರವಸೆಗಳನ್ನು ಸಂಕೇತಿಸುತ್ತವೆ. ಕನಸಿನಲ್ಲಿ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದರೆ ಅಥವಾ ಹಾಡುತ್ತಿದ್ದರೆ ಅಥವಾ ಪಕ್ಷಿಗಳು ಮುಕ್ತವಾಗಿ ಹಾರುತ್ತಿದ್ದರೆ, ಅದು ಸಂತೋಷ, ಸಾಮರಸ್ಯ, ಸಮತೋಲನ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತೆ. ಇದರರ್ಥ ನೀವು ಆಧ್ಯಾತ್ಮಿಕ ಸ್ವಾತಂತ್ರ್ಯ (Sprtitual Independence) ಮತ್ತು ವಿಮೋಚನೆಯನ್ನು ಅನುಭವಿಸುತ್ತೀರಿ ಎಂದು. 

39

ಪಕ್ಷಿ ಮರಿಗಳು ತಮ್ಮ ಮೊಟ್ಟೆಗಳಿಂದ ಹೊರಬರೋದನ್ನು ನೀವು ನೋಡಿದರೆ, ಅದು ಯಶಸ್ಸಿನ ವಿಳಂಬವನ್ನು ಅರ್ಥೈಸುತ್ತೆ, ಆದರೆ ಪಕ್ಷಿಯ ಗೂಡನ್ನು ನೋಡುವುದು ಸ್ವಾತಂತ್ರ್ಯ, ಆಶ್ರಯ ಮತ್ತು ಸುರಕ್ಷತೆಯನ್ನು ಸೂಚಿಸುತ್ತೆ ಅಥವಾ ನೀವು ಹೊಸ ಪ್ರಯತ್ನ, ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಅದೃಷ್ಟವನ್ನು(Luck) ಪಡೆಯುತ್ತೀರಿ ಎಂದರ್ಥ.

 

49

ನಿಮ್ಮ ಕನಸಿನಲ್ಲಿ ಪಕ್ಷಿಗಳ ಮೇಲೆ ದಾಳಿ ನಡೆಯುತ್ತಿದ್ದರೆ, ನೀವು ವಿಭಿನ್ನ ದಿಕ್ಕುಗಳಲ್ಲಿ ಎಳೆಯಲ್ಪಡುತ್ತಿದ್ದೀರಿ ಎಂದರ್ಥ, ಆಧ್ಯಾತ್ಮಿಕತೆಯೊಂದಿಗೆ ನೀವು ಸಂಘರ್ಷವನ್ನು ಅನುಭವಿಸುತ್ತೀರಿ ಎಂದರ್ಥ. 
ಪಕ್ಷಿಗಳು ನಿಮ್ಮ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ, ನೀವು ಜೀವನದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸುತ್ತಿಲ್ಲ ಅಥವಾ ಇತರ ಜನರು ನಿಮ್ಮ ದಾರಿಗೆ ಬರುತ್ತಿದ್ದಾರೆ ಎಂದು ಅರ್ಥ. 
ಸತ್ತ ಅಥವಾ ಸಾಯುತ್ತಿರುವ ಪಕ್ಷಿಗಳ(Dieing birds) ಕನಸು ನಿಮ್ಮ ಮನಸ್ಸಿನಲ್ಲಿ ಸಮಸ್ಯೆಗಳ ನಿರಂತರ ಹತಾಶೆ ಅಥವಾ ಆತಂಕವನ್ನು ಸಂಕೇತಿಸುತ್ತೆ.

59

ಹಕ್ಕಿಯ ಮರಿಯ ಕನಸು
ನೀವು ಹಕ್ಕಿಯ ಮರಿ ಬಗ್ಗೆ ಕನಸು ಕಂಡಾಗ ಅದು ನೀವು ನಿಮ್ಮ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ನಿಮ್ಮ ಜೀವನದಲ್ಲಿ ಯಾವುದರ ಬಗ್ಗೆಯೂ ತಪ್ಪುಗಳನ್ನು ಮಾಡುವ ಅಂಚಿನಲ್ಲಿದ್ದೀರಿ ಎಂದು ಸೂಚಿಸುತ್ತೆ. ಹಾಗಾಗಿ ನಿಮ್ಮ ಸ್ನೇಹಿತರು(Friends) ಮತ್ತು ಕುಟುಂಬದ ಸಲಹೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿ.  

69

ಕನಸಿನಲ್ಲಿ ಪಕ್ಷಿಗಳನ್ನು ನೋಡುವುದರ ಬೈಬಲ್(Bible) ಅರ್ಥ
ನಿಮ್ಮ ಕನಸಿನಲ್ಲಿ ಪಕ್ಷಿಗಳನ್ನು ನೋಡುವುದರ ಬೈಬಲ್ ಅರ್ಥವೆಂದರೆ ನೀವು ಮಾಡಿದ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಬೈಬಲಿನ ಪ್ರಕಾರ, ಕನಸುಗಳಲ್ಲಿ ಪಕ್ಷಿಗಳು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ಅರ್ಥೈಸುತ್ತವೆ. ಹಮ್ಮಿಂಗ್ ಬರ್ಡ್ಸ್  ಬೈಬಲಿನಲ್ಲಿ ಒಂದು ಅದ್ಭುತವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಹಕ್ಕಿಯನ್ನು ನೋಡೋದು ಸಕಾರಾತ್ಮಕವಾಗಿರುತ್ತೆ.
 

79

ಇಸ್ಲಾಂ(Islam) ಈ ಕನಸಿನ ಬಗ್ಗೆ ಏನು ಹೇಳುತ್ತೆ?
ಇಸ್ಲಾಂ ಧರ್ಮದ ಪ್ರಕಾರ, ಹಮ್ಮಿಂಗ್ ಬರ್ಡ್ ನ ಕನಸು ಸಣ್ಣ ಆಲೋಚನೆ, ಸಾಕಷ್ಟು ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರಬಹುದು ಎಂಬ ಅರ್ಥದೊಂದಿಗೆ ಬರುತ್ತೆ. ಈ ಕನಸು ನಿಮ್ಮ ಶಕ್ತಿಯ ಬಗ್ಗೆ ನೀವು ಅಜಾಗರೂಕರಾಗಿದ್ದೀರಿ ಅಥವಾ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿನ ಕಷ್ಟವನ್ನು ಪ್ರತಿನಿಧಿಸುತ್ತೆ.
 

89

ಹಮ್ಮಿಂಗ್ ಬರ್ಡ್ಸ್(Humming Birds) ಹಿಡಿಯುವ ಕನಸು
ಕನಸಿನಲ್ಲಿ ಪಕ್ಷಿಗಳನ್ನು ಹಿಡಿಯುವ ಕನಸು ಕಂಡಾಗ, ಅದು ದೀರ್ಘಕಾಲೀನ ಉದ್ದೇಶದ ಸಾಧನೆಯನ್ನು ತೋರಿಸುತ್ತೆ. ಈ ಕನಸು ನಿಮ್ಮ ಆಸೆಗಳು ಈಡೇರುವ ಸಂಕೇತವಾಗಿದೆ. ಮುಂಬರುವ ಸಮಯವು ನಿಮ್ಮನ್ನು ಮುಂದುವರಿಯುವಂತೆ ಮಾಡುತ್ತೆ ಎಂದು ಈ ಕನಸು ಹೇಳುತ್ತೆ. ಆದರೆ, ಈ ಕನಸು ನಿಮ್ಮ ಭೂತಕಾಲವನ್ನು ಮರೆಯಲು ನೀವು ಬಯಸೋದಿಲ್ಲ ಎಂದು ತೋರಿಸುತ್ತೆ.  

99

ಕನಸಿನಲ್ಲಿ ಹಮ್ಮಿಂಗ್ ಬರ್ಡ್ ಕಂಡರೆ, ನೀವು ಇತರ ಜನರ ದೃಷ್ಟಿಕೋನಗಳನ್ನು ಪರಿಗಣಿಸಬೇಕು ಎಂದರ್ಥ. ಅವು ನಿಮಗೆ ಮುಖ್ಯವೋ ಅಥವಾ ಇಲ್ಲವೋ ಎಂಬುದು ಮುಖ್ಯವಲ್ಲ. ನೀವು ಅವರ ಮಾತುಗಳನ್ನು ಸಹ ಪರಿಗಣಿಸಬೇಕು, ಬಹುಶಃ ಅವರ ಯಾವುದೇ ಆಲೋಚನೆಗಳು ನಿಮ್ಮ ಜೀವನದಲ್ಲಿ ಸಂತೋಷದ(Happiness) ತಿರುವನ್ನು ತರಬಹುದು. ಇತರ ಜನರು ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ನೀವು ಜಾಗರೂಕರಾಗಿರಬೇಕು. ಸಮಯ ತೆಗೆದುಕೊಳ್ಳಿ ಮತ್ತು ಇತರರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
 

About the Author

SN
Suvarna News
ಪಕ್ಷಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved