Vastu: ಮನೆಯ ಈ ಕೋಣೆಯಲ್ಲಿ ಆಂಜನೇಯನ ಫೋಟೋ ಬೇಡವೇ ಬೇಡ!
ಆಂಜನೇಯ ಭಕ್ತರ ಪ್ರೀತಿಯ ದೇವರು. ಆತ ಶಕ್ತಿ, ಭಕ್ತಿ, ಧೈರ್ಯ, ಜ್ಞಾನ ಎಲ್ಲಕ್ಕೂ ಅಧಿಪತಿ. ಇಂಥ ಈ ಹನುಮಂತನ ಫೋಟೋವನ್ನು ಮನೆಯಲ್ಲಿ ಹಾಕುವಾಗ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಬೇಕಾಗುತ್ತದೆ.
ಜ್ಯೋತಿಷ್ಯಶಾಸ್ತ್ರದಲ್ಲಿ, ಶನಿವಾರವನ್ನು ಹನುಮಂತ ಮತ್ತು ಶನಿ ದೇವರಿಗೆ ಸಮರ್ಪಿಸಲಾಗಿದೆ. ಮುಖ್ಯವಾಗಿ ಈ ದಿನವನ್ನು ಶನಿ ದೇವನ ಆರಾಧನೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನನ್ನು ಮೆಚ್ಚಿಸಲು ಆಂಜನೇಯನ ಆರಾಧನೆಯು ಹೆಚ್ಚು ಪ್ರಯೋಜನಕಾರಿ. ಭಜರಂಗಬಲಿಯ ಭಕ್ತರಿಗೆ ಶನಿಕಾಟ ಇರುವುದಿಲ್ಲ. ಭಜರಂಗಬಲಿಯಿಂದ ಆಶೀರ್ವಾದ ಪಡೆದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಮನೆಯಲ್ಲಿ ಈತನ ಭಾವಚಿತ್ರವನ್ನು ಇಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಹನುಮಂತನ ಚಿತ್ರವಿರುವ ಮನೆಯಲ್ಲಿ ಮಂಗಳ, ಶನಿ, ಪಿತೃ, ಭೂತಾದಿ ದೋಷವಿಲ್ಲ ಎಂಬ ನಂಬಿಕೆ ಇದೆ.
ಆದರೆ ಹನುಮಂತನ ಚಿತ್ರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಆಪತ್ತು ಬರುತ್ತದೆ. ವಾಸ್ತು ಪ್ರಕಾರ ಹನುಮಂತನ ಫೋಟೋ ಯಾವಾಗಲೂ ದಕ್ಷಿಣ ದಿಕ್ಕಿಗೆ ನೋಡುತ್ತಿರಬೇಕು. ಹೌದು, ಆಂಜನೇಯನ ಫೋಟೋ ಮನೆಯಲ್ಲಿಡುವಾಗ ಕೆಲ ವಾಸ್ತು ಸಲಹೆಗಳನ್ನು ಪಾಲಿಸಬೇಕು.
ಕುಳಿತ ಭಂಗಿಯ ಕೆಂಪು ಬಣ್ಣದ ಚಿತ್ರ: ಹನುಮಂತ ದಕ್ಷಿಣಾಭಿಮುಖವಾಗಿರುವ ಚಿತ್ರವು ಹೆಚ್ಚು ಮಂಗಳಕರವಾಗಿದೆ. ಏಕೆಂದರೆ ಹನುಮಂತ ಈ ದಿಕ್ಕಿನಲ್ಲಿ ತನ್ನ ಪ್ರಭಾವವನ್ನು ಹೆಚ್ಚು ತೋರಿಸಿದ್ದಾನೆ. ಹನುಮಂತಯ ಚಿತ್ರ ದಕ್ಷಿಣಾಭಿಮುಖವಾಗಿದ್ದರೆ, ದಕ್ಷಿಣ ದಿಕ್ಕಿನಿಂದ ಬರುವ ಪ್ರತಿಯೊಂದು ದುಷ್ಟ ಶಕ್ತಿಯು ಹನುಮಂತನ ಚಿತ್ರವನ್ನು ನೋಡಿದ ನಂತರ ಹಿಂತಿರುಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.
ಶ್ರೀರಾಮ ದರ್ಬಾರ್‌ನ ಫೋಟೋ: ಡ್ರಾಯಿಂಗ್ ರೂಮಿನಲ್ಲಿ ಶ್ರೀರಾಮ ದರ್ಬಾರ್‌ನ ಫೋಟೋವನ್ನು ಇರಿಸಿ, ಅಲ್ಲಿ ಹನುಮಂತ ಭಗವಾನ್ ಶ್ರೀರಾಮನ ಪಾದದ ಬಳಿ ಕುಳಿತಿರುವ ಫೋಟೋ ಹಾಕಿ. ಇದಲ್ಲದೇ ಲಿವಿಂಗ್ ರೂಮಿನಲ್ಲಿ ಪಂಚಮುಖಿ ಹನುಮಂತನ ಚಿತ್ರ, ಹನುಮಂತ ಪರ್ವತವನ್ನು ಎತ್ತುತ್ತಿರುವ ಚಿತ್ರ ಅಥವಾ ಶ್ರೀರಾಮ ಭಜನೆ ಮಾಡುತ್ತಿರುವ ಹನುಮಂತನ ಚಿತ್ರವನ್ನು ಹಾಕಬಹುದು.
ಶ್ರೀರಾಮನ ಭಜನೆ ಮಾಡುತ್ತಿರುವ ಹನುಮಂತ: ಈ ಚಿತ್ರ ನಿಮ್ಮ ಮನೆಯಲ್ಲಿದ್ದರೆ ನಿಮ್ಮಲ್ಲಿ ಭಕ್ತಿ ಮತ್ತು ನಂಬಿಕೆಯ ಸಂವಹನವಿರುತ್ತದೆ. ಈ ಭಕ್ತಿ ಮತ್ತು ನಂಬಿಕೆಯೇ ನಿಮ್ಮ ಜೀವನದ ಯಶಸ್ಸಿಗೆ ಆಧಾರ. ಹಾಗಾದರೆ ಹನುಮಂತನ ಚಿತ್ರವನ್ನು ಯಾವ ಸ್ಥಳದಲ್ಲಿ ಇಡಬಾರದು ನೋಡೋಣ.
ಪಂಚಮುಖಿ ಹನುಮಂತನ ಚಿತ್ರ: ವಾಸ್ತು ಶಾಸ್ತ್ರದ ಪ್ರಕಾರ ಪಂಚಮುಖಿ ಹನುಮಂತನ ಮೂರ್ತಿ ಇರುವ ಮನೆಯಲ್ಲಿ ಪ್ರಗತಿ ಪಥದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ. ನೀವು ಬಯಸಿದರೆ, ನೀವು ಈ ಚಿತ್ರವನ್ನು ಮುಖ್ಯ ಬಾಗಿಲಿನ ಮೇಲೆ ಹಾಕಬಹುದು ಅಥವಾ ಎಲ್ಲರಿಗೂ ಗೋಚರಿಸುವಂತ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿ ಮನೆಗೆ ಬರುವುದಿಲ್ಲ. ಇದಲ್ಲದೇ ವಾಸ್ತು ದೋಷ ನಿವಾರಣೆಗೆ ಆ ಕಟ್ಟಡದಲ್ಲಿ ನೈಋತ್ಯ ದಿಕ್ಕಿಗೆ ಮುಖ ಇರುವಂತೆ ಪಂಚಮುಖಿ ಹನುಮಂಜತ ಚಿತ್ರವನ್ನು ಇಡಬೇಕು.
ಹನುಮಂತನ ಭಕ್ತಿಯನ್ನು ತೋರಿಸುವ ಚಿತ್ರ: ನಿಮ್ಮ ಮನೆಯ ಮೇಲೆ ನಕಾರಾತ್ಮಕ ಶಕ್ತಿಗಳ ಪ್ರಭಾವವಿದೆ ಎಂದು ನೀವು ಭಾವಿಸಿದರೆ, ನೀವು ಭಕ್ತಿಯನ್ನು ತೋರಿಸುವ ಭಂಗಿಯಲ್ಲಿ ಹನುಮಂತನ ಚಿತ್ರವನ್ನು ಹಾಕಬೇಕು.
ಮಲಗುವ ಕೋಣೆಯಲ್ಲಿ ಹನುಮಂತನ ಚಿತ್ರ ಇಡಬೇಡಿ: ಶಾಸ್ತ್ರಗಳ ಪ್ರಕಾರ, ಹನುಮಂತ ಬಾಲ ಬ್ರಹ್ಮಚಾರಿಯಾಗಿದ್ದು, ಈ ಕಾರಣಕ್ಕಾಗಿ ಅವನ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಕೂಡದು.
ಹನುಮಂತ ಬೆಟ್ಟವನ್ನು ಎತ್ತುತ್ತಿರುವ ಚಿತ್ರ: ಈ ಚಿತ್ರವು ನಿಮ್ಮ ಮನೆಯಲ್ಲಿದ್ದರೆ ನೀವು ಧೈರ್ಯ, ಶಕ್ತಿ, ನಂಬಿಕೆ ಮತ್ತು ಜವಾಬ್ದಾರಿಯನ್ನು ಬೆಳೆಸಿಕೊಳ್ಳುತ್ತೀರಿ. ನೀವು ಯಾವುದೇ ಪರಿಸ್ಥಿತಿಗೆ ಹೆದರುವುದಿಲ್ಲ. ಪ್ರತಿಯೊಂದು ಪರಿಸ್ಥಿತಿಯು ನಿಮ್ಮ ಮುಂದೆ ಚಿಕ್ಕದಾಗಿ ಕಾಣುತ್ತದೆ ಮತ್ತು ಅದನ್ನು ತಕ್ಷಣವೇ ಪರಿಹರಿಸಲಾಗುತ್ತದೆ.
ಹಾರುತ್ತಿರುವ ಹನುಮಾನ್ ಚಿತ್ರ: ಆಂಜನೇಯನ ಈ ಚಿತ್ರವನ್ನು ನೀವು ಮನೆಯಲ್ಲಿ ಇರಿಸಿದರೆ, ನಿಮ್ಮ ಪ್ರಗತಿ ಮತ್ತು ಯಶಸ್ಸನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮುಂದೆ ಸಾಗಲು ನೀವು ಉತ್ಸಾಹ ಮತ್ತು ಧೈರ್ಯವನ್ನು ಹೊಂದಿರುತ್ತೀರಿ. ನೀವು ಯಶಸ್ಸಿನ ಹಾದಿಯಲ್ಲಿ ಬೆಳೆಯುತ್ತಲೇ ಇರುತ್ತೀರಿ.