ಕೆರಿಯರ್‌ನಲ್ಲಿ ಯಶಸ್ಸು ಕಾಣಲು ಸರಸ್ವತಿ ದೇವಿಯನ್ನು ಹೀಗೆ ಒಲಿಸಿಕೊಳ್ಳಿ
ಪ್ರತಿಯೊಬ್ಬರೂ ತಮ್ಮ ಜೀವನದ ಬಗ್ಗೆ ಮಹತ್ತರ ಕನಸು ಕಾಣುತ್ತಾರೆ. ಅದರಲ್ಲೂ ತಮ್ಮ ಕರಿಯರ್ ಬಗ್ಗೆ ಏನಾದರೊಂದು ಗುರಿ ಹೊಂದುತ್ತಾರೆ. ಕೆಲವರು ತಾವು ಅಂದುಕೊಂಡ ಕನಸನ್ನು ಸುಲಭವಾಗಿ ಸಾಕಾರಗೊಳಿಸುತ್ತಾರೆ. ಇನ್ನು ಕೆಲವರಿಗೆ ಎಷ್ಟು ಪರಿಶ್ರಮ ಪಟ್ಟರು ಸಫಲತೆ ಸಿಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಏನೆಂದರೆ ಯುವಜನತೆ ಎಲ್ಲಿ ತಮ್ಮ ಕರಿಯರ್ ರೂಪಿಸಲು ತಯಾರಿ ನಡೆಸುತ್ತಾರೋ ಅಲ್ಲಿ ನೆಗೆಟಿವ್ ಎನರ್ಜಿ ಇರುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗೋದಿಲ್ಲ.
ಕರಿಯರ್ ನಲ್ಲಿ ಯಶಸ್ಸು ಸಾಧಿಸಲು ಸರಸ್ವತಿಗೆ ಸಂಬಂಧಿಸಿದ ಈ ವಸ್ತುಗಳನ್ನು ಮನೆಯಲ್ಲಿ ಇಡಬೇಕು. ಹೌದು ಸರಸ್ವತಿಯನ್ನು ವಿದ್ಯಾ ದೇವಿ ಎಂದು ಕರೆಯಲಾಗುತ್ತದೆ. ಉತ್ತಮ ಜ್ಞಾನದಿಂದ ಮಾತ್ರ ಕರಿಯರ್ ನಲ್ಲಿ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಅಂತಹ ಯಾವ ವಸ್ತುಗಳನ್ನು ಮನೆಯಲ್ಲಿ ಇಡುವ ಮೂಲಕ ಕರಿಯರ್ ನಲ್ಲಿ ಯಶಸ್ಸು ಪ್ರಾಪ್ತಿ ಮಾಡಿಕೊಳ್ಳಬಹುದು ತಿಳಿಯಿರಿ...
ವೀಣೆ :ವೀಣೆ ಸರಸ್ವತಿ ದೇವಿಯ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ವೀಣೆಯನ್ನು ಅತ್ಯಂತ ಪವಿತ್ರವಾದ ವಸ್ತು ಎಂದು ಹೇಳಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಸುಖ ಶಾಂತಿ ಇರುತ್ತದೆ. ಇದರಿಂದ ಕ್ರಿಯೇಟಿವಿಟಿ ಹೆಚ್ಚುತ್ತದೆ.
ಹಂಸದ ಫೋಟೋ ಮತ್ತು ಷೋ ಪೀಸ್ : ಹಂಸ ಸರಸ್ವತಿ ದೇವಿಯ ವಾಹನವಾಗಿದೆ. ಆದುದರಿಂದ ಇದನ್ನು ಶುಭ ಎಂದು ಹೇಳಲಾಗುತ್ತದೆ.
ಹಂಸದ ಫೋಟೋ ಮತ್ತು ಷೋ ಪೀಸ್ ಮನೆಯಲ್ಲಿ ಎಲ್ಲರ ದೃಷ್ಟಿ ಅದರ ಮೇಲೆ ಬೀಳುವಂತಿರಲಿ. ಇದರಿಂದ ಮನಸ್ಸು ಶಾಂತವಾಗಿರುತ್ತದೆ ಹಾಗೂ ಫೋಕಸ್ ಮಾಡಲು ಸಾಧ್ಯವಾಗುತ್ತದೆ.
ನವಿಲುಗರಿ : ನವಿಲುಗರಿ ದೇವ-ದೇವತೆಗಳಿಗೆ ಸಂಬಂಧಿಸಿದ್ದು, ಇದನ್ನು ಮನೆಯಲ್ಲಿ ಇಡುವುದು ಉತ್ತಮ ಎಂದು ಹೇಳಲಾಗುತತದೆ. ಇದನ್ನು ದೇವರ ಕೋಣೆಯಲ್ಲಿ ಅಥವಾ ಮಕ್ಕಳ ರೂಮಿನಲ್ಲಿ ಇಟ್ಟರೆ ಉತ್ತಮ. ಇದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ.
ತಾವರೆ ಹೂವು : ಪ್ರತಿದಿನ ಪೂಜೆಗೆ ಇತರ ಹೂವುಗಳ ಜೊತೆಗೆ ತಾವರೆ ಹೂವನ್ನು ಇಡಿ. ಇದರಿಂದ ಮನೆಯಲ್ಲಿ ಖುಷಿ ಮತ್ತು ಸಂತೋಷ ಇರುತ್ತದೆ. ಆದರೆ ಫ್ರೆಶ್ ತಾವರೆ ಇರುವಂತೆ ನೋಡಿಕೊಳ್ಳಿ.
ಸರಸ್ವತಿ ಮೂರ್ತಿ : ಸರಸ್ವತಿ ದೇವಿಯನ್ನು ವಿಧ್ಯೆಯ ದೇವಿ ಎಂದು ಹೇಳಲಾಗುತ್ತದೆ. ಈ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಜೀವನದಲ್ಲಿ ಸಫಲತೆ ಸಿಗುತ್ತದೆ.
ಕರಿಯರ್ ನಲ್ಲಿ ಯಶಸ್ಸು ಪ್ರಾಪ್ತಿಯಾಗಲು ಪರಿಶ್ರಮ ತುಂಬಾನೇ ಮುಖ್ಯ ನಿಜ. ಇದರ ಜೊತೆಗೆ ಒಂದು ರೀತಿಯ ಪಾಸಿಟಿವ್ ಶಕ್ತಿಯೂ ಮುಖ್ಯವಾಗಿದೆ. ಆದುದರಿಂದ ವಾಸ್ತುವಿನಲ್ಲಿ ತಿಳಿಸಿರುವಂತೆ ಈ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಸಕ್ಸಸ್ ಖಂಡಿತಾ.