Feng Shui Tips: ಈ ವಸ್ತುಗಳನ್ನು ಮನೆಯಲ್ಲಿಟ್ರೆ ಹಣ ಹರಿದು ಬರುತ್ತೆ..
ಫೆಂಗ್ ಶೂಯಿಯು ವಾಸ್ತು ಶಾಸ್ತ್ರದಂತೆ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಮನೆಯಲ್ಲಿ ಫೆಂಗ್ ಶೂಯಿಯ ವಸ್ತುಗಳನ್ನು ಇಟ್ಟುಕೊಳ್ಳುವುದು ಜೀವನದಲ್ಲಿ ಸಂತೋಷ, ಸಮೃದ್ಧಿ ತರುತ್ತದೆ. ಫೆಂಗ್ ಶುಯ್ ಶಕ್ತಿಗಳ ತಾತ್ವಿಕ ಹರಿವಿನ ಬಗ್ಗೆ ಮತ್ತು ಅದೃಷ್ಟ, ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸಲು ನಮ್ಮ ಸುತ್ತಮುತ್ತಲಿನೊಳಗೆ 'ಚಿ' ಶಕ್ತಿಯನ್ನು ಜಾಗೃತಗೊಳಿಸುವ ಕಾರ್ಯಕ್ಕೆ ಪ್ರೇರೇಪಿಸುತ್ತದೆ.
ಅನೇಕ ಬಾರಿ ವ್ಯಕ್ತಿಯು ಕಠಿಣ ಪರಿಶ್ರಮದ ನಂತರವೂ ಉತ್ತಮ ಫಲಿತಾಂಶ ಪಡೆಯುತ್ತಿರುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ, ಫೆಂಗ್ ಶುಯ್‌ನಲ್ಲಿ ಹೇಳಿರುವ ಈ ಟಿಪ್ಸ್ ಸಹಾಯಕ್ಕೆ ಬರುತ್ತವೆ. ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅವು ಲಕ್ಷ್ಮೀ ದೇವಿಯನ್ನು ಆಕರ್ಷಿಸುತ್ತವೆ.
ಸ್ಫಟಿಕ(crystal)
ಫೆಂಗ್ ಶೂಯಿ ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಪಟಿಕದ ಹರಳುಗಳನ್ನು ಇಟ್ಟುಕೊಳ್ಳುವುದರಿಂದ ಅದು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಬಿಳಿ ಬಣ್ಣದ ಹರಳುಗಳನ್ನು ಕಚೇರಿಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ.
ಮೂರು ಕಾಲಿನ ಕಪ್ಪೆ
ಫೆಂಗ್ ಶೂಯಿ ತಜ್ಞರು ಮನೆಯಲ್ಲಿ ಮೂರು ಕಾಲಿನ ಕಪ್ಪೆಯನ್ನು ಸಾಕುವುದು ತುಂಬಾ ಮಂಗಳಕರವಾಗಿದೆ ಎಂದು ಹೇಳುತ್ತಾರೆ. ಬಾಯಿಯಲ್ಲಿ ನಾಣ್ಯಗಳನ್ನು ಹೊಂದಿರುವ ಮೂರು ಕಾಲಿನ ಕಪ್ಪೆಯನ್ನು ಇರಿಸಿ. ಈ ಕಪ್ಪೆಯನ್ನು ಮನೆಯ ಮುಖ್ಯ ಗೇಟ್ ಬಳಿ ಅಥವಾ ಸೇಫ್ ಬಳಿ ಇಡಬೇಕು. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ.
ಲಾಫಿಂಗ್ ಬುದ್ಧ
ನಗುವ ಬುದ್ಧ ಕೂಡ ಫೆಂಗ್ ಶೂಯಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ದುಃಖ ಮತ್ತು ಒತ್ತಡದಿಂದ ಪರಿಹಾರವನ್ನು ಕೊಡಿಸುತ್ತದೆ ಎಂದು ನಂಬಲಾಗಿದೆ.
ಮೂರು ಚೈನೀಸ್ ನಾಣ್ಯಗಳು
ಮೂರು ಚೈನೀಸ್ ನಾಣ್ಯಗಳು ಮನೆಯಲ್ಲಿ ಸಂತೋಷ ಮತ್ತು ಸಂಪತ್ತನ್ನು ತರುತ್ತವೆ ಎಂದು ನಂಬಲಾಗಿದೆ. ಈ ನಾಣ್ಯಗಳನ್ನು ಕೆಂಪು ದಾರ ಅಥವಾ ರಿಬ್ಬನ್‌ನಲ್ಲಿ ಕಟ್ಟಿದರೆ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.
ಫೆಂಗ್ ಶೂಯಿ ಆಮೆ
ಆಮೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಆಮೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಇದನ್ನು ಮಾಡುವುದರಿಂದ ವ್ಯಕ್ತಿಯು ಪ್ರಗತಿಯನ್ನು ಪಡೆಯುತ್ತಾನೆ.