Vastu Tips : ಈ ರೀತಿಯ ಪೀಠೋಪಕರಣಗಳನ್ನು ಮನೆಯಲ್ಲಿಟ್ಟರೆ ಸಮಸ್ಯೆ ಖಚಿತ!
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೀಠೋಪಕರಣಗಳು (furnitures) ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಅವು ಸಸ್ತಾನೂ ಹೌದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವಾಗಲೂ ಮರದ ಪೀಠೋಪಕರಣಗಳಿದ್ದರೆ ಒಳ್ಳೆಯದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ.
ವಾಸ್ತು ಶಾಸ್ತ್ರದಲ್ಲಿ (vastu shastra)ಪೀಠೋಪಕರಣಗಳಿಗೆ ವಿಶೇಷ ಮಹತ್ವವಿದೆ. ವಾಸ್ತು ಪ್ರಕಾರ ಮನೆ ಅಥವಾ ಪೀಠೋಪಕರಣಗಳು ವಾಸ್ತು ಪ್ರಕಾರ ಇಲ್ಲದಿದ್ದಲ್ಲಿ ನಕಾರಾತ್ಮಕ ಶಕ್ತಿಯು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ, ಮನೆಯ ಪೀಠೋಪಕರಣಗಳು ವಾಸ್ತು ಪ್ರಕಾರವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸುತ್ತಾನೆ. ವಾಸ್ತವವಾಗಿ, ಸಂತೋಷವು ಮನೆಯ ಪೀಠೋಪಕರಣಗಳಿಗೆ ಸಂಬಂಧಿಸಿದೆ. ಮನೆಯ ಪೀಠೋಪಕರಣಗಳ ಕುರಿತ ವಾಸ್ತು ಸಲಹೆಗಳನ್ನು ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ ಪೀಠೋಪಕರಣಗಳನ್ನು ಖರೀದಿಸುವಾಗ ಅದರ ಆಕಾರ, ಗಾತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪೀಠೋಪಕರಣಗಳ ಅಂಚುಗಳು ತೀಕ್ಷ್ಣವಾಗಿರಬಾರದು. ಮನೆಯಲ್ಲಿ ದುಂಡಗಿನ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳನ್ನು ಹೊಂದಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಅಂದ ಹಾಗೆ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೀಠೋಪಕರಣಗಳು (plastic or iron furniture) ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವಾಗಲೂ ಮರದ ಪೀಠೋಪಕರಣಗಳಿದ್ದರೆ ಒಳ್ಳೆಯದು. ಅದು ಯಾಕೆ ಅನ್ನೋದು ಗೊತ್ತಾ?
ಕಬ್ಬಿಣ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಪೀಠೋಪಕರಣಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಇದರಿಂದಾಗಿ ಅಪಶ್ರುತಿ ಹೆಚ್ಚಾಗತೊಡಗುತ್ತದೆ. ಇದರೊಂದಿಗೆ ಕುಟುಂಬದ ಸದಸ್ಯರು ಮಾನಸಿಕ ಒತ್ತಡವನ್ನೂ ಎದುರಿಸಬೇಕಾಗುತ್ತದೆ. ಮನೆಯಲ್ಲಿ ಕಲಹ ಕೂಡ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಅರಳಿ, ಶ್ರೀಗಂಧ ಮತ್ತು ಆಲದ ಮರದಿಂದ ಮಾಡಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಈ ಮರಗಳನ್ನು ಪೂಜ್ಯವೆಂದು ಪರಿಗಣಿಸಲಾಗಿದೆ. ಆದರೆ, ಶ್ರೀಗಂಧದ (sandalwood) ದೇವರ ಮಂಟಪವನ್ನು ಮನೆಯಲ್ಲಿ ಇಡಬಹುದು. ಮತ್ತೊಂದೆಡೆ, ಬೇವು, ರೋಸ್‌ವುಡ್, ತೇಗ, ಅರ್ಜುನ ಮತ್ತು ಅಶೋಕ ಮರಗಳಿಂದ ಮಾಡಿದ ಪೀಠೋಪಕರಣಗಳನ್ನು ಹೊಂದಿರುವುದು ಮಂಗಳಕರವಾಗಿದೆ.
ಪೀಠೋಪಕರಣಗಳು ತುಂಬಾ ಭಾರವಾಗಿದ್ದರೆ, ಅದನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಆದಾಗ್ಯೂ, ಕಡಿಮೆ ತೂಕದ ಪೀಠೋಪಕರಣಗಳನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬಹುದು. ಹೆಚ್ಚು ಭಾರವಾದ ವಸ್ತುಗಳನ್ನು ಇರಿಸುವುದರಿಂದ ಸಮಸ್ಯೆಗಳು ಹೆಚ್ಚುತ್ತದೆ ಎನ್ನಲಾಗಿದೆ.
ಮತ್ತೊಂದೆಡೆ, ಈಶಾನ್ಯ ದಿಕ್ಕಿನಲ್ಲಿ ಭಾರವಾದ ಪೀಠೋಪಕರಣಗಳನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿಯ ಪರಿಚಲನೆಗೆ ಕಾರಣವಾಗುತ್ತದೆ. ಇದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು (finacnial problem) ಎದುರಿಸಬೇಕಾಗುತ್ತದೆ. ಮನೆಯಲ್ಲಿ ಜಗಳ, ಕಲಹ ಮೊದಲಾದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.