ಲವ್ ಲೈಫ್ ಸುಂದರವಾಗಿ ಇಡುವ ಬೆಡ್‌ರೂಮ್‌ಗೊಂದಿಷ್ಟು ವಾಸ್ತು ಟಿಪ್ಸ್!
ವೈವಾಹಿಕ ಜೀವನದಲ್ಲಿ ಜಗಳ, ಕಿರಿಕಿರಿಗಳು ಎಲ್ಲಿ ಇಲ್ಲ ಹೇಳಿ? ಆದರೆ ಇದು ಹೆಚ್ಚಾಗಿ ಸಂಬಂಧ ಕೆಡದಂತೆ ಕಾಪಾಡಿಕೊಳ್ಳವಲ್ಲಿ ಬೆಡ್‌ರೂಮ್ ಮಹತ್ವ ವಹಿಸುತ್ತದೆ. ಆಳವಾದ ರೊಮ್ಯಾನ್ಸ್ ಮತ್ತು ಆಳವಾದ ಭಾವನೆ ಗಹುಟ್ಟು ಹಾಕಿ, ಸಂಬಂಧಗಳ ಮೇಲೆ ವಾಸ್ತು ಶಾಸ್ತ್ರ ಜಾದೂ ಮಾಡಬಹುದು.ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿಯೂ ವಾಸ್ತು ಶಾಸ್ತ್ರ ಸಹಕರಿಸುತ್ತದೆ. ನಿಮ್ಮ ರೊಮ್ಯಾಂಟಿಕ್ ಜೀವನ ಚೆನ್ನಾಗಿ ಇಟ್ಟುಕೊಳ್ಳಲು ಕೆಲವು ವಾಸ್ತು ಟಿಪ್ಸ್ ಅನ್ನೂು ಬೆಡ್‌ರೂಮ್‌ನಲ್ಲಿ ಅಳವಡಿಸಿಕೊಂಡು ನೋಡಿ. ಈ ಟಿಪ್ಸ್‌ಗಳಿಂದ ಸಂಗಾತಿಯ ಜೊತೆ ಸಂಬಂಧದಲ್ಲಿ ಪಾಸಿಟಿವ್ ಬದಲಾವಣೆ ಖಂಡಿತ.
ನೈರುತ್ಯ ದಿಕ್ಕಿನಲ್ಲಿ ಚದರ ಅಥವಾ ಆಯತದ ಆಕಾರದಲ್ಲಿ ಮಲಗುವ ಕೋಣೆಯನ್ನು ನಿರ್ಮಿಸಿದಲ್ಲಿ ನಿಮ್ಮ ಜೀವನದಲ್ಲಿ ಶಾಂತಿ ಇರುತ್ತದೆ.
ತಿಳಿ ಹಸಿರು, ತಿಳಿ ಗುಲಾಬಿ ಅಥವಾ ನೀಲಿ ಬಣ್ಣದ ಗೋಡೆಯ ಮಲಗುವ ಕೋಣೆಗಳು ಮನಸ್ಸಿಗೆ ಹಿತ
ಬೆಡ್‌ರೂಮ್‌ನಲ್ಲಿ ಪಾಸಿಟವ್ ಎನರ್ಜಿಗಾಗಿ ಹಾರ್ಟ್‌ಶೇಪ್‌ನ ಗಡಿಯಾರ, ಕೆಂಪು ಬಣ್ಣದ ಕೌಚ್ ಮುಂತಾದ ಪ್ರೀತಿಯನ್ನು ಬಿಂಬಿಸುವ ಫರ್ನಿಚರ್ ಅಥವಾ ಸಾಮಾನುಗಳು ಇರಲಿ.
ಧೂಳು ತುಂಬಿದ ಮಲಗುವ ಕೋಣೆ ಎಂದರೆ ಸಂಬಂಧಕ್ಕೆ ಧೂಳು ಎಂದೇ ಅರ್ಥ. ದೂಳು ಮತ್ತು ಕಸ ಮುಕ್ತ ಕ್ಲೀನ್ ಬೆಡ್‌ರೂಮ್ ರೋಮ್ಯಾಂಟಿಕ್ ಜೀವನಕ್ಕೆ ಸೋಪಾನ.
ಪ್ರೀತಿಯ ಬಣ್ಣಗಳಾದ ಕೆಂಪು, ಗುಲಾಬಿ, ಕಿತ್ತಳೆ, ನೇರಳೆ ಬಣ್ಣಗಳು ನಿಮ್ಮ ಸುತ್ತ ಇದ್ದರೆ ಸಂಬಂಧಗಳಲ್ಲಿ ಒಂಥರಾ ಮ್ಯಾಜಿಕ್.
ತಾಜಾ ಹೂವುಗಳು ಸದಾ ಇರಲಿ. ದಾಳಿಂಬೆ ಹಣ್ಣುಗಳನ್ನು ಸಹ ಮಲಗುವ ಕೋಣೆಯಲ್ಲಿ ಇಡಬಹುದು. ಅವು ಫಲವತ್ತತೆಯ ಸಂಕೇತ.
ಬಿಳಿ ಅಥವಾ ತಿಳಿ ಬಣ್ಣದ ಹೂವುಗಳಿರುವ ಬೆಡ್‌ಶೀಟ್‌ಗಳನ್ನು ಬಳಸಿ. ರೋಮ್ಯಾನ್ಸ್ ಜಾಗೃತಗೊಳಿಸುವಲ್ಲಿ ಸಹಾಯಕಾರಿ.
ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಮತ್ತು ಆರೋಗ್ಯಕರ ಸಂಬಂಧಕ್ಕಾಗಿ ಬೇಡದ ವಸ್ತುಗಳನ್ನು ನಿಮ್ಮ ಬೆಡ್‌ರೂಮ್‌ನಲ್ಲಿ ತುಂಬಿಕೊಳ್ಳಬೇಡಿ.
ರೊಮ್ಯಾಂಟಿಕ್ ಸ್ಥಳ ಬೆಡ್‌ರೂಮ್ ಕ್ಯಾಂಡಲ್ ಹೂವುಗಳಿಂದ ಇನ್ನೂ ಹೆಚ್ಚು ಆಕರ್ಷಕವಾಗಿ. ಲವ್‌ಲೈಫ್‌ನಲ್ಲಿ ಲವಲವಿಕೆ ಗ್ಯಾರಂಟಿ.
ನೀವು ಮಲಗುವಾಗ ತಲೆಯನ್ನು ದಕ್ಷಿಣದ ಕಡೆ ಹಾಕಿ ಮಲಗಿದರೆ ಆನಂದದಾಯಕವಾದ ವೈವಾಹಿಕ ಜೀವನ ನಿಮ್ಮದಾಗುವುದು.