ದಾರಿಲಿ ದುಡ್ಡು ಸಿಕ್ಕಿದ್ರೆ ಏನರ್ಥ? ಅದೃಷ್ಟವೋ, ಗ್ರಾಚಾರವೋ?
ನೀವು ರೋಡ್ ಮೇಲೆ ಹೋಗ್ಬೇಕಾದ್ರೆ ಸಡನ್ ಆಗಿ ಕಾಯಿನ್ ಆಗ್ಲಿ, ನೋಟ್ ಆಗ್ಲಿ ಕಂಡ್ರೆ ಏನ್ ಮಾಡ್ತೀರಿ? ಬಹಳಷ್ಟು ಜನ ಎತ್ತಿ ಜೇಬಲ್ಲಿ ಹಾಕೊಳ್ತಾರೆ. ಹಿಂಗೇ ಮಾಡಿದ್ರೆ ನಿಮ್ಮ ಜೀವನದಲ್ಲಿ ಏನ್ ಆಗುತ್ತೆ ಅಂತ ಈಗ ತಿಳ್ಕೊಳ್ಳೋಣ.

ಸಾಮಾನ್ಯವಾಗಿ ರೋಡ್ ಮೇಲೆ ನಡ್ಕೊಂಡು ಹೋಗ್ಬೇಕಾದ್ರೆ ಅಲ್ಲಲ್ಲಿ ಚಿಲ್ಲರೆ ಕಾಯಿನ್ಸ್ ಕಾಣಿಸ್ತಿರುತ್ತವೆ. ಕೆಲವರಂತೂ ಡೈರೆಕ್ಟ್ ಆಗಿ ನೋಟ್ಸ್ ಕೂಡಾ ಕೆಡವಿಕೊಳ್ತಾರೆ. ಹಂಗೇ ಸಿಕ್ಕಿದ ದುಡ್ಡನ್ನ ಕೆಲವರು ತಕ್ಷಣಕ್ಕೆ ಎತ್ತಿ ಜೇಬಲ್ಲಿ ಹಾಕೊಳ್ತಾರೆ. ಕೆಲವರಂತೂ ತೆಗಿಯೋದಾ ಬೇಡ್ವಾ ಅಂತ ಯೋಚನೆ ಮಾಡ್ತಾ ಮುಂದೆ ಹೋಗಿ ತಗೊಳ್ಳೋಣ ಅಂತ ಹಿಂದಕ್ಕೆ ತಿರುಗುತ್ತಾರೆ. ಅಷ್ಟರಲ್ಲಿ ಹಿಂದಗಡೆ ಬರ್ತಿರೋ ವ್ಯಕ್ತಿ ಆ ದುಡ್ಡು ಎತ್ತಿಕೊಳ್ತಾನೆ. ಹಿಂಗೆ ನಮ್ಮಲ್ಲಿ ಬಹಳಷ್ಟು ಜನಕ್ಕೆ ಆಗಿರುತ್ತೆ. ಆದ್ರೆ ಅಸಲಿಗೆ ದುಡ್ಡು ಸಿಗೋದು ಅದೃಷ್ಟಾನಾ? ಇಲ್ಲಾ ಫ್ಯೂಚರ್ ಅಲ್ಲಿ ಆಗೋ ಘಟನೆಗಳಿಗೆ ಸೂಚನೆಯಾ? ಈ ವಿಷಯದ ಬಗ್ಗೆ ಜ್ಯೋತಿಷ್ಯ ಪಂಡಿತರು ಹೇಳಿರೋ ವಿವರಣೆ ಈಗ ತಿಳ್ಕೊಳ್ಳೋಣ.
ಸಾಮಾನ್ಯವಾಗಿ ರೋಡ್ ಮೇಲೆ ದುಡ್ಡು ಕಂಡ್ರೆ ಅದು ಅದೃಷ್ಟಕ್ಕೆ ಸೂಚನೆ ಅಂತ ಜ್ಯೋತಿಷ್ಯ ಪಂಡಿತರು ಹೇಳ್ತಾರೆ. ಅಷ್ಟೇ ಅಲ್ಲದೆ ಲಕ್ಷ್ಮೀದೇವಿ ಅನುಗ್ರಹ ಆಗೋಕೆ ಮುಂಚೆ ಹಿಂಗೆ ದುಡ್ಡು ಕಾಣ್ಸುತ್ತೆ ಅಂತ ಹೇಳ್ತಾರೆ. ದೇವರ ದಯೆ ಇದ್ರೆನೇ ರೋಡ್ ಮೇಲೆ ಕಾಯಿನ್ ಅಥವಾ ನೋಟ್ ಸಿಗೋದು ಅಂತಾರೆ.
ರೋಡ್ ಮೇಲೆ ಹೋಗ್ಬೇಕಾದ್ರೆ ಪರ್ಸ್ ಕಂಡ್ರೆ ಅವರಿಗೆ ಆಸ್ತಿ ಸೇರಿ ಬರುತ್ತೆ ಅಂತ ಮುನ್ಸೂಚನೆ. ಅಂದ್ರೆ ಪೂರ್ವಜರ ಆಸ್ತಿ ಆಗ್ಲಿ, ತಂದೆ ತಾಯಿ, ಅತ್ತೆ ಮಾವನ ಆಸ್ತಿ ಆಗ್ಲಿ ಬೇಗನೆ ದುಡ್ಡು ಸಿಕ್ಕಿದ ವ್ಯಕ್ತಿಗೆ ಸಿಗುತ್ತೆ ಅಂತ ಅರ್ಥ. ಅಷ್ಟೇ ಅಲ್ಲದೆ ಅವರು ಮಾಡ್ತಿರೋ ಕೆಲಸ, ಉದ್ಯೋಗಗಳಲ್ಲಿ ಸಡನ್ ಆಗಿ ಲಾಭ ಪಡೀತಾರೆ. ಇಂಥ ಟೈಮಲ್ಲಿ ಎಲ್ಲಿಗಾದ್ರೂ ಇನ್ವೆಸ್ಟ್ ಮಾಡಿದ್ರೆ ಒಳ್ಳೆ ಲಾಭ ಪಡೀತಾರೆ.
ರೋಡ್ ಮೇಲೆ ಹೋಗ್ಬೇಕಾದ್ರೆ ಕಾಯಿನ್ ಅಥವಾ ನೋಟ್ ಕಂಡ್ರೆ ಅದು ಅದೃಷ್ಟದ ಸಂಕೇತ ಅಂತ ಜ್ಯೋತಿಷ್ಯ ಎಕ್ಸ್ಪರ್ಟ್ಸ್ ಹೇಳ್ತಾರೆ. ಅಂದ್ರೆ ಆ ವ್ಯಕ್ತಿ ಬೇಗನೆ ತಾನು ಅಂದ್ಕೊಂಡಿರೋ ಫೀಲ್ಡ್ ಅಲ್ಲಿ ಉನ್ನತ ಸ್ಥಿತಿಗೆ ತಲುಪ್ತಾನೆ ಅಂತ ಅರ್ಥವಂತೆ. ಹಂಗೇ ಸಿಕ್ಕಿದ ದುಡ್ಡನ್ನ ಜಾಗ್ರತೆಯಾಗಿ ಸೇವ್ ಮಾಡೋದು ಅಥವಾ ಮನೆಯಲ್ಲಿ ಪೂಜೆ ರೂಮಲ್ಲಿ ಇಟ್ಟು ಡೈಲಿ ಪೂಜೆ ಮಾಡೋದು ಒಳ್ಳೇದು ಅಂತ ಜ್ಯೋತಿಷಿಗಳು ಸಜೆಸ್ಟ್ ಮಾಡ್ತಾರೆ.
ರೋಡ್ ಮೇಲೆ ದುಡ್ಡು ಸಿಗೋಕೆ ಇನ್ನೊಂದು ಇಂಪಾರ್ಟೆಂಟ್ ರೀಸನ್ ಕೂಡಾ ಇದೆ. ಕೆಲಸದಲ್ಲಿ ಪ್ರಮೋಷನ್ ಸಿಗೋಕೆ ಮುಂಚೆ, ಬಿಸಿನೆಸ್ ಅಲ್ಲಿ ಲಾಭ ಬರೋಕೆ ಮುಂಚೆ ಹಿಂಗೆ ಅದೃಷ್ಟವಂತರಿಗೆ ರೋಡ್ ಮೇಲೆ ದುಡ್ಡು ಸಿಗುತ್ತೆ. ಅದಕ್ಕೆ ನಿಮಗೆ ಯಾವಾಗಾದ್ರೂ ರೋಡ್ ಮೇಲೆ ದುಡ್ಡು ಸಿಕ್ಕಿದ್ರೆ ನಿಮಗೆ ಬೇಗನೆ ಅದೃಷ್ಟ ಕೂಡಿ ಬರತ್ತೆ ಅಂತ ಅರ್ಥ.