ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ
ಇತ್ತೀಚಿಗೆ ಜನರಿಗೆ ಕೆಲಸದ ಒತ್ತಡ ಹೆಚ್ಚಾಗಿ ಕಾಡುತ್ತದೆ. ಕಳೆದ ಒಂದು ವರ್ಷದಿಂದ ಈ ಕೊರೋನಾ ಎಂಬ ಭೂತವೇ ಆವರಿಸಿಕೊಂಡಿದೆ. ಒಂದೆಡೆ ರೋಗ ಹರಡುವ ಭೀತಿ, ಕೆಲಸ ಕಳೆದುಕೊಡ ಚಿಂತೆ... ಹೀಗೆ ಹಲವು ಯೋಚನೆ, ಚಿಂತೆಯಿಂದ ಜನ ಮಾನಸಿಕವಾಗಿ ಕುಗ್ಗುತ್ತಾರೆ. ಅಲ್ಲದೆ ಬೇಗನೆ ಕೋಪ, ಒತ್ತಡಕ್ಕೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಿಂದ ಬಚಾವಾಗಲು ಫೆಂಗ್ ಶುಯಿ ಟಿಪ್ಸ್ ಇಲ್ಲಿವೆ.
ಬಿದಿರಿನ ಗಿಡ : ಫೆಂಗ್ ಶುಯಿಯಲ್ಲಿ ಬಿದಿರಿಗೆ ತುಂಬಾನೇ ಮಹತ್ವ ಇದೆ. ಆಫೀಸ್ ಅಥವಾ ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ ನೆಟ್ಟರೆ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ.
ಎರಿಕಾ ಪಾಮ್ ಟ್ರೀ : ಈ ಗಿಡದ ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಈ ಗಿಡದಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.
ಪೀಸ್ ಲಿಲ್ಲಿ : ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡದಿಂದ ಹೆಚ್ಚು ಕುಗ್ಗಿ ಹೋಗಿದ್ದರೆ, ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಈ ಗಿಡ ನೋಡಿ. ಇದರಿಂದ ಒತ್ತಡ ತಗ್ಗುತ್ತದೆ. ಮನಸು ನಿರಾಳವಾಗುತ್ತದೆ. ಜೊತೆಗೆ ಶಾಂತಿಯೂ ಸಿಗುತ್ತದೆ. ಈ ಗಿಡ ಕಡಿಮೆ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುತ್ತದೆ.
ಈ ಗಿಡಗಳನ್ನು ನೆಡಿ: ಹೂವು ಮತ್ತು ಗಿಡಗಳು ಮಾನಸಿಕ ಶಾಂತಿ ನೆಲೆಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು ಗುಲಾಬಿ, ಮಲ್ಲಿಗೆ ಗಿಡಗಳನ್ನು ಬೆಳೆಸಿ.
ಚಪ್ಪಲ್ ಮನೆಯ ಹೊರಗಿಡಿ : ಹೊರಗಿನಿಂದ ಒಳಗೆ ಬರುವಾಗ ಚಪ್ಪಲ್ ಒಳಗೆ ತರಬೇಡಿ, ಅದನ್ನು ಹೊರಗಿಡಿ. ಚಪ್ಪಲ್ ಜೊತೆ ಪೂರ್ತಿ ದಿನದ ಚಿಂತೆ, ಒತ್ತಡ ಬರುತ್ತದೆ. ಅಂದರೆ ನಿಮ್ಮ ಜೊತೆ ನೆಗೆಟಿವ್ ಎನರ್ಜಿ ಕೂಡ ಬರುತ್ತದೆ. ಆದುದರಿಂದ ಚಪ್ಪಲ್ ಹೊರಗೆ ಬಿಟ್ಟು ಒಳಗೆ ಬನ್ನಿ.
ಅಕ್ವೇರಿಯಂ : ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಅದರಿಂದ ಕೆಟ್ಟ ಎನರ್ಜಿ ದೂರವಾಗುತ್ತದೆ. ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಮನಸ್ಸು ಹಗುರಾಗುತ್ತದೆ.