ಗಡ್ಡದಲ್ಲೂ ಅಡಗಿರಬಹುದು ಅದೃಷ್ಟ, ಆದರೆ...
ಇಂದಿನ ಯುವ ಪೀಳಿಗೆಯಲ್ಲಿ ಗಡ್ಡ ಬಿಡುವ ಹವ್ಯಾಸ ವ್ಯಾಪಕವಾಗಿ ಹೆಚ್ಚಾಗತೊಡಗಿದೆ. ಸೆಲಿಬ್ರಿಟಿಗಳು ಹಾಗೂ ಇತರರನ್ನು ನೋಡಿ ಯುವಕರು ತಮ್ಮ ಗಡ್ಡವನ್ನು ಬೆಳೆಸುತ್ತಿದ್ದಾರೆ. ಆದರೆ, ಈ ಗಡ್ಡಕ್ಕೆ ಅದೃಷ್ಟದ ಜೊತೆಗೂ ಕೂಡ ಸಂಬಂಧವಿದೆ ಎಂದರೆ ನಂಬುತ್ತೀರಾ?
ಹೌದು ಜ್ಯೋತಿಷ್ಯ ಯೋಗದ ಅನುಸಾರ ಹಲವು ಯೋಗಗಳ ಅವಧಿಯಲ್ಲಿ ಗಡ್ಡ ಬಿಡುವುದು ಧನ ಹಾಗೂ ಯಶಸ್ಸಿನ ಪ್ರಾಪ್ತಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಆದರೆ, ಹಲವು ಬಾರಿ ಇದರಿಂದ ಹಾನಿ ಕೂಡ ಆಗುತ್ತದೆ.
ಗಡ್ಡ ಬಿಡುವಾಗ ವ್ಯಕ್ತಿ ಈ ಕುರಿತು ಆಲೋಚನೆ ಮಾಡದ ಕಾರಣ ಗಡ್ಡದಿಂದ ತಮಗೆ ಹಾನಿಯಾಗಿದೆ ಎಂಬುವುದು ಅವರಿಗೆ ಗೊತ್ತೇ ಆಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಯಾರು ಗಡ್ಡ ಬೆಳೆಸಬೇಕು ಹಾಗೂ ಯಾರು ಗಡ್ಡ ಬೆಳೆಸಬಾರದು ಎಂಬುದಕ್ಕೂ ಒಂದು ಲೆಕ್ಕಾಚಾರ ಇದೆ.
ಒಂದು ವೇಳೆ ಜನ್ಮ ಜಾತಕದಲ್ಲಿ ಲಗ್ನದ ಮೇಲೆ ಕೇತುವಿನ ಪ್ರಭಾವವಿದ್ದರೆ ಅಥವಾ ಸಿಂಹ ರಾಶಿಯಲ್ಲಿ ರಾಹು-ಕೇತುಗಳ ವಿಶೇಷ ಪ್ರಭಾವ ಇರುವ ಜಾತಕದವರು ಗಡ್ಡ ಬೆಳೆಸಬೇಕು. ಆದರೆ ಇದರ ಅರ್ಥ ಸಂಪೂರ್ಣ ಸಾಧು-ಸನ್ಯಾಸಿಗಳ ರೀತಿ ಗಡ್ಡ ಬೆಳೆಸಬೇಕು ಎಂಬುದು ಇದರ ಅರ್ಥ ಅಲ್ಲ. ತೆಳುವಾದ ಗಡ್ಡ ಅಥವಾ ಫ್ರೆಂಚ್ ಕಟ್ ಗಡ್ಡದಿಂದಲೂ ಕೂಡ ಲಾಭ ಸಿಗುತ್ತದೆ.
ಆದರೆ ಯಾರ ಜಾತಕದಲ್ಲಿ ಶುಕ್ರ ಪ್ರಬಲನಾಗಿರುತ್ತಾನೆಯೋ ಮತ್ತು ಉಚ್ಚ ಅಭಿಲಾಶಿಯಾಗಿರುತ್ತಾನೆ ಹಾಗೂ ಯಾರಿಗೆ ಶುಕ್ರ ದೆಸೆಯಿಂದ ಉತ್ತಮ ಲಾಭ ಸಿಗುತ್ತಿದೆಯೋ, ಆ ವ್ಯಕ್ತಿಗಳು ಗಡ್ಡ ಬೆಳೆಸಬಾರದು.
ಒಂದು ವೇಳೆ ಇಂತಹ ಜನರು ಗಡ್ಡ ಬೆಳೆಸಿದರೆ, ಶುಕ್ರ ಮುನಿಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅವರಿಗೆ ಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನಿಗೆ ಶರೀರದ ಮೇಲೆ ಅನಾವಶ್ಯಕ ಹೊರೆ ಹೊರಿಸುವುದು ಒಳ್ಳೇದಲ್ಲ.
ಶುಕ್ರನ ಮಹಾದೆಸೆಯಲ್ಲಿ ಶುಕ್ರನನ್ನು ಬಲಪಡಿಸಲು ಮುಖವನ್ನು ಸುಂದರವಾಗಿಡಿ ಹಾಗೂ ಗಡ್ಡವನ್ನು ಬೋಳಿಸಿ. ಇಂತಹ ಸ್ಥಿತಿಯಲ್ಲಿ ಗಡ್ಡ ಬೆಳೆಸುವುದು ಶುಕ್ರನಿಗೆ ಸಂಬಂಧಿಸಿದ ಪ್ರಭಾವಗಳನ್ನು ನಷ್ಟಗೊಳಿಸುತ್ತದೆ