ನಿಮ್ಮ Signature, ವ್ಯಕ್ತಿತ್ವವನ್ನೆ ರೂಪಿಸುತ್ತಂತೆ… ತಜ್ಞರು ಹೇಳೋದೇನು ಕೇಳಿ
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವನ ಮಾತು, ಬರವಣಿಗೆ ಮತ್ತು ನಡವಳಿಕೆ ಹೀಗೆ ವಿವಿಧ ಅಂಶಗಳಿಂದ ತಿಳಿಯಬಹುದುಅನ್ನೋದು ನಿಮಗೆ ಗೊತ್ತಿದೆ. ಇದಲ್ಲದೆ ಇನ್ನು ಅನೇಕ ವಿಧಾನಗಳ ಮೂಲಕ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ವಾಸ್ತು ತಜ್ಞರ (Vaastu Experts) ಪ್ರಕಾರ, ನಿಮ್ಮ ಸಹಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದಂತೆ. ನೀವು ಸಹಿಯನ್ನು ಬರೆದು ಮಧ್ಯದಿಂದ ಕಟ್ ಮಾಡಿದರೆ/ಲೈನ್ ಹಾಕಿದರೆ ಅಥವಾ ಅದರ ಕೆಳಗೆ ಗೆರೆ ಹಾಕಿದರೆ ಅಥವಾ ತುಂಬಾ ದೊಡ್ಡ ಅಥವಾ ಸಣ್ಣ ಸಹಿ ಬರೆದರೆ, ಅದಕ್ಕೆ ಕೆಲವು ಅರ್ಥವಿದೆ. ಹಸ್ತಾಕ್ಷರದ ಬಗ್ಗೆ ವಾಸ್ತು ತಜ್ಞರು ಏನು ಹೇಳುತ್ತಾರೆ ನೋಡೋಣ.
ನೀವು ಯಾವ ರೀತಿ ಸಹಿ (Signature) ಹಾಕುತ್ತೀರಿ? ಹೆಸರು ಬರೆದ ಮೇಲೆ ಅದರ ಮಧ್ಯದಲ್ಲಿ ಗೆರೆ ಹಾಕ್ತೀರಾ? ಅಥವಾ ಹೆಸರಿನ ಕೆಳಗೆ ಗೆರೆ ಹಾಕುವಿರಾ? ಇದನ್ನೆಲ್ಲಾ ಯಾಕೆ ಕೇಳ್ತಿದ್ದೀವಿ ಅಂದ್ರೆ, ನೀವು ಹಾಕುವ ಸಹಿಯ ಮೂಲಕವೂ ನಿಮ್ಮ ಗುಣ, ನಡವಳಿಕೆ ಹೇಗಿದೆ ಅನ್ನೋದನ್ನು ತಿಳಿಯಬಹುದಂತೆ. ಹೀಗೆ ನಾವಲ್ಲ ಹೇಳ್ತಿರೋದು, ವಾಸ್ತು ಶಾಸ್ತ್ರ ಇದನ್ನು ಹೇಳುತ್ತೆ. ಹಾಗಿದ್ರೆ ಬನ್ನಿ ಯಾವ ರೀತಿಯ ಸಹಿಯ ವ್ಯಕ್ತಿಯ ಗುಣ ಹೇಗಿರುತ್ತೆ ನೋಡೋಣ.
ವಾಸ್ತು ಪ್ರಕಾರ ಸಹಿಯ ಅರ್ಥ
ಆತುರದ(Urgent) ಸಹಿ
ವಾಸ್ತು ತಜ್ಞರ ಪ್ರಕಾರ, ಅವಸರದಲ್ಲಿ ಮತ್ತು ಬಹಳ ಬೇಗ ಸಹಿ ಮಾಡುವ ಜನರು ಬಹಳ ಮಹತ್ವಾಕಾಂಕ್ಷೆಯ ಮತ್ತು ಕಠಿಣ ಪರಿಶ್ರಮಿ ಆಗಿರುತ್ತಾರಂತೆ. ಆದರೆ, ಈ ಜನರ ಜೀವನದಲ್ಲಿ ಅನೇಕ ಏರಿಳಿತಗಳಿರುತ್ತವೆಯಂತೆ. ಕೆಲವೊಮ್ಮೆ ಇವರು ಕರಿಯರ್ ನ ಉತ್ತುಂಗದಲ್ಲಿದ್ದರೆ, ಮತ್ತೆ ಕೆಲವೊಮ್ಮೆ ಕುಸಿದಿರುತ್ತಾರೆ ಎಂದು ಹೇಳಲಾಗುತ್ತೆ.
ವಾಸ್ತು ತಜ್ಞರು ಹೇಳುವಂತೆ ,ಆತುರದ ಸಹಿ ಹಾಕುವ ಜನರ ಸಹಿ ಅವರು ರಾಜಕೀಯದಲ್ಲಿ(Politics) ಉತ್ತಮರಾಗಿದ್ದಾರೆ ಅಂದರೆ ರಾಜಕೀಯ ಪ್ರತಿಭೆಯಿಂದ ಶ್ರೀಮಂತರಾಗಿದ್ದಾರೆ ಎಂದು ತೋರಿಸುತ್ತೆ ಎನ್ನಲಾಗುತ್ತೆ. ಅಂದ್ರೆ ಈ ರೀತಿ ಸಹಿ ಹಾಕುವ ಜನರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇರುತ್ತೆ.
ಸಹಿ ಕಟ್ ಮಾಡುವ ಜನರು
ನೀವು ಸಹಿ ಹಾಕಿ ಮಧ್ಯದಲ್ಲಿ ಅದನ್ನು ಕಟ್(Cut) ಮಾಡುತ್ತೀರಾ?? ವಾಸ್ತು ತಜ್ಞರು ಈ ಜನರ ವ್ಯಕ್ತಿತ್ವವು ಇತರ ಜನರಿಗೆ ತೃಪ್ತಿಯಾಗೋದಿಲ್ಲ ಎಂದು ಹೇಳುತ್ತಾರೆ. ಅವರು ಒಂದು ಸೆಕೆಂಡಿನಲ್ಲಿ ಕೋಪಗೊಳ್ಳುತ್ತಾರೆ ಮತ್ತು ಮುಂದಿನ ಕ್ಷಣದಲ್ಲಿ ಸಂತೋಷವಾಗಿರುತ್ತಾರೆ. ಒಂದೇ ಮನಸ್ಥಿತಿಯಲ್ಲಿ ಇವರು ಇರೋದು ಕಡಿಮೆ, ಅದಕ್ಕಾಗಿ ಜನ ಇವರನ್ನು ಇಷ್ಟ ಪಡೋದಿಲ್ಲ.
ಈ ಜನರ ಬಗ್ಗೆ ತಿಳಿದುಕೊಳ್ಳಬೇಕಾದ ಒಂದು ವಿಷಯವೆಂದರೆ ಅವರು ತಮ್ಮ ಪ್ರೀತಿಯನ್ನು(Love) ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಈ ಜನರು ತಮಗೆ ಹತ್ತಿರವಿರುವವರಿಗೆ ಪ್ರೀತಿಯನ್ನು ತೋರಿಸಲು ಸಾಧ್ಯವಾಗೋದಿಲ್ಲ ಮತ್ತು ಅದೇ ಸಮಯದಲ್ಲಿ ಅವರು ಎಲ್ಲದರಲ್ಲೂ ದೋಷವನ್ನು ಹುಡುಕುವ ಕೆಟ್ಟ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುತ್ತೆ.
ಎಡ ಮತ್ತು ಬಲ ಕೈಗಳೆರಡರಿಂದಲೂ ಸಹಿ(Vastu expert) ಮಾಡುವುದು
ಈ ಜನರು ತುಂಬಾ ಪ್ರತಿಭಾವಂತರು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅವರು ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ ಏಕೆಂದರೆ ಅವರು ಎರಡು ಕೈಯಿಂದ ಸಹಿ ಮಾಡಬಹುದು. ಇಂತಹ ಟ್ಯಾಲೆಂಟ್ ಎಲ್ಲರಲ್ಲೂ ಇರಲು ಸಾಧ್ಯವಿರೋದಿಲ್ಲ. ಆದುದರಿಂದ ಇವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ ಎನ್ನುತ್ತಾರೆ ತಜ್ಞರು.
ಎಡ ಮತ್ತು ಬಲ ಕೈಗಳೆರಡರಿಂದಲೂ ಸಹಿ ಮಾಡುವಂತವರು ಯಾವುದೇ ಕ್ಷೇತ್ರದಲ್ಲಿ ಹೋದರೂ ಇತಿಹಾಸ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಈ ಜನರು ತುಂಬಾ ಅಜಾಗರೂಕರಾಗಿರುತ್ತಾರೆ ಎಂಬುದು ಅವರ ಒಂದೇ ಒಂದು ಸಮಸ್ಯೆ. ನಿರ್ಲಕ್ಷ್ಯವನ್ನು ತೆಗೆದುಹಾಕಿದರೆ, ಅದು ಅವರಿಗೆ ಒಳ್ಳೆಯದು. ಅಲ್ಲದೇ ಅವರು ನಿರ್ಲಕ್ಷ್ಯವನ್ನು ದೂರ ಮಾಡಿದ್ರೆ ಖ್ಯಾತಿ ಗಳಿಸುವ(Popularity) ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ.