- Home
- Entertainment
- TV Talk
- ವಿಂಟೇಜ್ ಲುಕ್ಕಲ್ಲಿ ಶ್ರೀರಸ್ತು ಶುಭಮಸ್ತು ವಿಲನ್ ದೀಪಿಕಾ, ಅಬ್ಬಬ್ಬಾ ಎಂಥ ಬೋಲ್ಡ್ ಲುಕ್ ಅಂತಿದ್ದಾರೆ ಫ್ಯಾನ್ಸ್!
ವಿಂಟೇಜ್ ಲುಕ್ಕಲ್ಲಿ ಶ್ರೀರಸ್ತು ಶುಭಮಸ್ತು ವಿಲನ್ ದೀಪಿಕಾ, ಅಬ್ಬಬ್ಬಾ ಎಂಥ ಬೋಲ್ಡ್ ಲುಕ್ ಅಂತಿದ್ದಾರೆ ಫ್ಯಾನ್ಸ್!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವ ದರ್ಶಿನಿ ಡೆಲ್ಟಾ ವಿಂಟೇಜ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ.

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತು. ಈ ಧಾರಾವಾಹಿಯಲ್ಲಿ ವಿಲನ್ಸ್ ಸಾಕಷ್ಟಿದ್ದಾರೆ. ಶಾರ್ವರಿ ಮುಖ್ಯ ವಿಲನ್ ಆದ್ರೆ, ಇದೀಗ ಸೇರಿಕೊಂಡ ದೀಪಿಕಾ ಮತ್ತೊಬ್ಬ ವಿಲನ್ ಆಗಿ, ಮನೆಯವರ ಖುಷಿ ಹಾಳು ಮಾಡಲು ಕಾಯ್ತಿದ್ದಾಳೆ.
ದೀಪಿಕಾ ಪಾತ್ರದಲ್ಲಿ ವಿಲನ್ ಆಗಿ ಅದ್ಭುತವಾಗಿ ನಟಿಸುತ್ತಿರುವ ನಟಿ ದರ್ಶಿನಿ ಡೆಲ್ಟಾ (Darshini Delta). ಅಪ್ಪನ ಸೇಡನ್ನು ತೀರಿಸಿಕೊಳ್ಳಲು, ನಾಟಕ ಮಾಡಿ ಮಾಧವ್ ಮನೆ ಸೇರಿಕೊಂಡ ದೀಪಿಕಾ. ಇದೀಗ ಒಂದೊಂದಾಗಿ ತನ್ನ ಆಟವನ್ನು ತೋರಿಸುತ್ತಿದ್ದಾಳೆ.
ದೀಪಿಕಾ ವಿಲನ್ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಹಿಡಿಸಿದೆ. ಆ ಕಣ್ಣು, ನಟನೆ, ದೀಪಿಕಾ ನಟನೆ ನೋಡಿದರೇನೆ ಜನರಿಗೆ ಕೋಪ ಬರುವಂತೆ ಕಾಣುತ್ತದೆ. ಅಷ್ಟೊಂದು ಉತ್ತಮವಾಗಿ ಅಭಿನಯಿಸಿದ್ದಾರೆ ದರ್ಶಿನಿ.
ಡ್ಯಾನ್ಸರ್ ಆಗಿ, ದೊಡ್ಡ ದೊಡ್ಡ ಸ್ಟಾರ್ ಆಗಿ ಕೊರಿಯೋಗ್ರಾಫರ್ (Choreographer) ಆಗಿ, ಇದೀಗ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನ ಮೊದಲ ಲೇಡಿ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ದರ್ಶಿನಿ ಮಲ್ಟಿ ಟ್ಯಾಲೆಂಟೆಡ್.
ಸೋಶಿಯಲ್ ಮಿಡಿಯಾದಲ್ಲಿ (Social media) ಹೆಚ್ಚಾಗಿ ಆಕ್ಟೀವ್ ಆಗಿರುವ ದರ್ಶಿನಿ, ತಮ್ಮ ಡ್ಯಾನ್ಸ್ ವೀಡಿಯೋ, ರೀಲ್ಸ್, ಕೊರಿಯೋಗ್ರಾಫಿ ವೀಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರ ಡ್ಯಾನ್ಸ್ ನೋಡಿ ಜನ ಬಾಯಿಗೆ ಬೆರಳಿಟ್ಟುಬಿಡುತ್ತಾರೆ. ಅಂತಹ ಅದ್ಭುತ ನೃತ್ಯಗಾರ್ತಿ ದರ್ಶಿನಿ.
ಇನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫೋಟೋಗಳನ್ನು ಶೇರ್ ಮಾಡುವ ದರ್ಶಿನಿ ಈ ಬಾರಿ ವಿಂಟೇಜ್ ಲುಕ್ ನಲ್ಲಿ ಸೀರೆಯುಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ ದರ್ಶಿನಿ.
ಬಿಳಿ ಬಣ್ಣದ ಮೇಲೆ ನವಿಲಿನ ಪ್ರಿಂಟ್ ಇರುವ ಸೀರೆಯುಟ್ಟು, ಅದಕ್ಕೊಪ್ಪುವ ಕಪ್ಪು ಬಣ್ಣದ ಕಲಂಕಾರಿ ಬ್ಲೌಸ್ ಧರಿಸಿ, ದೊಡ್ಡದಾದ ಜುಮುಕಿ, ಕಾಸಗಲ ಬೊಟ್ಟು ತೊಟ್ಟು, ವಿವಿಧ ಭಾವ ಭಂಗಿಯಲ್ಲಿ ಸಖತ್ತಾಗಿ ಕಾಣಿಸುತ್ತಿದ್ದಾರೆ ದರ್ಶಿನಿ ಡೆಲ್ಟಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.