ರಿಯಲ್ ಲೈಫಲ್ಲೂ ಕಂಠಿ-ಸ್ನೇಹಾ ಜೊತೆಯಾಗ್ಬೇಕೆಂತಾರೆ ಪ್ರೇಕ್ಷಕರು! ಈ ನಟನ ಬಗ್ಗೆ ಒಂದಿಷ್ಟು
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಾಯಕ ಕಂಠಿ ಅಂದ್ರೆ ಸೀರಿಯಲ್ ಪ್ರಿಯರಿಗೆ ಖಂಡಿತಾ ಅಚ್ಚುಮೆಚ್ಚು. ಮಿಸ್ಸು, ಮಿಸ್ಸು ಅಂತಾ ಸ್ನೇಹ ಹಿಂದೆ ಬಿದ್ದಿರುವ ಕಂಠಿ, ಶ್ರೀ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.
ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu Serial) ಖ್ಯಾತಿಯ ನಟ ಶ್ರೀ, ಕಂಠಿ ಸದ್ಯ ಕಿರುತೆರೆಯ ಜನಪ್ರಿಯ ನಟ ಜೊತೆಗೆ ಹೆಂಗಳೆಯರ ಫೆವರೆಟ್ ಹೀರೋ ನಿಜವಾದ ಹೆಸರೇನು? ಸೀರಿಯಲ್‌ನಲ್ಲಿ ಬರೋದಕ್ಕೂ ಮುನ್ನ ಏನು ಮಾಡ್ತಿದ್ರು? ಅನ್ನೋದ್ರ ಬಗ್ಗೆ ಸಂಪೂರ್ಣ ಸ್ಟೋರಿ ಓದೋಣ.
ಮಿಸ್ಸು ಮಿಸ್ಸು ಎನ್ನುತ್ತಾ ಸ್ನೇಹಾ ಹಿಂದೆ ಬಿದ್ದು, ಸುಳ್ಳು ಹೇಳಿ ಪ್ರೀತಿಸಿ, ಆಕೆಯನ್ನು ಬಿಟ್ಟಿರಲಾಗದೆ ಹೇಳದೇ ಕೇಳಿ ಮದುವೆಯಾಗಿ, ಸ್ನೇಹಗಾಗಿ ಏನು ಬೇಕಾದ್ರೂ ಮಾಡ್ತೀನಿ ಎನ್ನುವ ಕಂಠಿಯ ನಿಜವಾದ ಹೆಸರು ಧನುಷ್.
ಧನುಷ್ ಎನ್.ಎಸ್. ಸಿವಿಲ್ ಎಂಜಿನಿಯರಿಂಗ್ (civil engineer) ಪದವೀಧರ. ಇಂಜಿನಿಯರ್ ಆಗಿದ್ರೂ ಸಹ ಶಿಕ್ಷಣ ಮುಗಿದ ತಕ್ಷಣವೇ ಇವರಿಗೆ ನಟಿಸುವ ಚಾನ್ಸ್ ಒದಗಿ ಬಂತು. ಹಾಗಾಗಿ ಸೀರಿಯಲ್, ಆಲ್ಬಂ ಹಾಡು, ಕಿರುಚಿತ್ರಗಳಲ್ಲಿ ಮಿಂಚಿದರು ಧನುಷ್.
ಬಾಲ್ಯದಲ್ಲಿಯೇ ನಟನಾಗುವ ಆಸೆ ಹೊತ್ತ ಧನುಷ್ ಗೆ ನಟನೆ ಅಂದ್ರೇನೆ ಉಸಿರಂತೆ. ತಾನೊಬ್ಬ ಅತ್ಯುತ್ತಮ ನಾಯಕನಾಗಬೇಕೆಂದು ಕನಸು ಕಂಡಿದ್ದ ಧನುಷ್ , ಕನಸು ಈಡೇರಿಸಿದ್ದು ಇದೇ ಪುಟ್ಟಕ್ಕನ ಮಕ್ಕಳು ಸೀರಿಯಲ್.
ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಧನುಷ್ (Dhanush), 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಎನ್ನುವ ಆಲ್ಬಂ ಹಾಡಿನಲ್ಲೂ ಸಹ ಇವರು ಅಭಿನಯಿಸಿದ್ದರು. ಆದರೆ ಖ್ಯಾತಿ ಕೊಟ್ಟಿದ್ದು ಪುಟ್ಟಕ್ಕನ ಮಕ್ಕಳು ಎಂದೇ ಹೇಳಬಹುದು.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಆಡಿಶನ್ ಕೊಟ್ಟಿದ್ದ ಧನುಷ್, ಆಯ್ಕೆಯೂ ಆಗಿದ್ದರು. ಯಾವ ರೀತಿ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದು ಇವರು ಬಯಸಿದ್ದರೋ ಅದೇ ರೀತಿಯ ಪಾತ್ರ ಸಿಕ್ಕಿರೋದು ಧನುಷ್ ಅದೃಷ್ಟವಂತೆ. ಕಂಠಿ ಪಾತ್ರಕ್ಕೂ ಧನುಷ್ ವ್ಯಕ್ತಿತ್ವಕ್ಕೂ ಹೋಲಿಕೆ ಇರೋದ್ರಿಂದ ಈ ಪಾತ್ರವನ್ನು ನಿಭಾಯಿಸುವುದು ಸುಲಭವಾಯಿತಂತೆ.
ಈಗಾಗಲೇ ಸೀರಿಯಲ್, ಆಲ್ಬಂ ಸಾಂಗ್ (Album song) ಮತ್ತು ಕಿರುಚಿತ್ರಗಳಲ್ಲಿ ನಟಿಸಿರುವ ಧನುಷ್ ಗೆ ಚಲನಚಿತ್ರಗಳಲ್ಲಿ ನಟಿಸಿರುವ ಹಲವಾರು ಆಫರ್ ಗಳು ಬರುತ್ತಿವೆಯಂತೆ. ಆದರೆ ಧನುಷ್ ಕಂಠಿಯಂತಹ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರಂತೆ.
ಇನ್ನು ಕಂಠಿ ಮತ್ತು ಸ್ನೇಹಾ ಜೋಡಿ ವಿಷಯಕ್ಕೆ ಬಂದ್ರೆ ಇಬ್ಬರ ಕ್ಲಾಸ್ ಮತ್ತು ಮಾಸ್ ಕೆಮೆಸ್ಟ್ರಿಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ರೀಲ್ ನಲ್ಲಿ ಇರುವಂತೆ ರಿಯಲ್ ಲೈಫ್ ನಲ್ಲೂ ಸಹ ಇಬ್ಬರೂ ಸಹ ಮದುವೆಯಾಗುವಂತೆ ಸಲಹೆ ನೀಡುತ್ತಿದ್ದಾರಂತೆ.