ಇದ್ದಕ್ಕಿದ್ದಂತೆ ಸಣ್ಣಗಾದ್ರಾ 'ಸೀತಾ ರಾಮ' ನಟಿ ಪ್ರಿಯಾ; ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಮೇಘನಾ ಶಂಕರಪ್ಪ ಟ್ರೆಡಿಷನಲ್ ಲುಕ್. ಮೆಚ್ಚಿಕೊಂಡಾಡಿದ ನೆಟ್ಟಿಗರು....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀತಾ ರಾಮ ಧಾರಾವಾಹಿಯಲ್ಲಿ ಪ್ರೀಯಾ ಪಾತ್ರದಲ್ಲಿ ಮಿಂಚುತ್ತಿರುವ ಮೇಘನಾ ಶಂಕರಪ್ಪ.

ಪ್ರಮುಖ ಪಾತ್ರಧಾರಿ ಸೀತಾಳ ಸ್ನೇಹಿ ಪಾತ್ರದಲ್ಲಿ ಪ್ರಿಯಾ ಮಿಂಚುತ್ತಿದ್ದಾಳೆ. ಒಳ್ಳೆಯ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ ಕೋಟ್ಯಾಧೀಶ ಹುಡುಗನನ್ನು ಮದುವೆಯಾಗು ಆಸೆ ಪ್ರಿಯಾಳಿಗೆ ಇದೆ.
'ನಮ್ಮನೆ ಯುವರಾಣಿ' (Nammane Yuvarani) ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ಮೇಘನಾ ಶಂಗರಪ್ಪ ನಟಿಸಿ ಗಮನ ಸೆಳೆದಿದ್ದರು.
ಕಿರುತೆರೆಯಲ್ಲಿ ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರ ಹೀಗೆ ಸಾಕಷ್ಟು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ಶಂಕರಪ್ಪ ಹಳದಿ ಬಣ್ಣದ ಲಂಗಾ ದಾವಣಿಯಲ್ಲಿ ಮಿಂಚಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಈ ಫೋಟೋದಲ್ಲಿ ಮೇಘನಾ ಶಂಕರಪ್ಪ ಸಿಕ್ಕಾಪಟ್ಟೆ ಸಣ್ಣ ಕಾಣಿಸಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಸಣ್ಣಗಾಗಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.