ಬೆಂಗಳೂರಿನಲ್ಲಿ 'ಲಕ್ಷ್ಮಿ ನಿವಾಸ' ಮಾನಸಾ ಮನೋಹರ್ ರಿಸೆಪ್ಶನ್; ಕಲರ್ ಕಲರ್ ಫೋಟೋ ವೈರಲ್!
ಅದ್ಧೂರಿಯಾಗಿ ನಡೆಯಿತ್ತು ಮಾನಸಾ ಮನೋಹರ್ ಆರತಕ್ಷತೆ. ಯಾರೆಲ್ಲಾ ಬಂದಿದ್ದರು ನೋಡಿ.....
ನಿರೂಪಕಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಮಾನಸಾ ಮನೋಹರ್ ಖ್ಯಾತಿ ಪಡೆದಿದ್ದು ಜೊತೆ ಜೊತೆಯಲಿ ಧಾರಾವಾಹಿ ಮೂಲಕ. ಆರ್ಯವರ್ಧನ್‌ನ ಸಿಕ್ಕಾಪಟ್ಟೆ ಇಷ್ಟ ಪಡುವ ಮೀರಾ ಪಾತ್ರದ ಮೂಲಕ.
ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡ್ರು ಅತ್ತಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೀಕ್‌ನಲ್ಲಿರುವ ಮಾನಸಾ ಇದೀಗ ಮದುವೆ ಮಾಡಿಕೊಂಡಿದ್ದಾರೆ.
ಫುಟ್‌ಬಾಲ್ ಪ್ಲೇಯರ್ ಪ್ರೀಥಮ್ ಜೊತೆ ಮಾನಸಾ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎರಡನೇ ಮದುವೆ ಆಗಿದ್ದರೂ ಪ್ರೀತಿ ಮುಖ್ಯ ಎಂದು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟರು.
ಅದ್ಧೂರಿ ಮದುವೆ ಆಗಿದ್ದರೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಹೀಗಾಗಿ ಬಣ್ಣದ ಪ್ರಪಂಚದಲ್ಲಿ ಇರುವ ಸ್ನೇಹಿತರಿಗೆಂದು ಆರತಕ್ಷತೆ ಹಮ್ಮಿಕೊಂಡಿದ್ದರು. ನಟಿ ಅಂಜಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕ್ರೀಮ್ ಬಣ್ಣದ ಸ್ಲೀವ್‌ಲೆಸ್ ಬ್ಲೌಸ್ ಇರುವ ಡಿಸೈನರ್ ಸೀರೆಯನ್ನು ಮಾನಸಾ ಧರಿಸಿದ್ದಾರೆ, ನೀಲಿ ಬಣ್ಣ ಶೂಟ್ ಬೂಟ್‌ನಲ್ಲಿ ಪ್ರೀತಮ್ ಮಿಂಚಿದ್ದಾರೆ.
ಇನ್ನು ಮದುವೆಯಲ್ಲಿ ಖ್ಯಾತ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ನಟಿ ಅಂಜಲಿ ಸುಧಾಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ.