Hitler Kalyan serial ಮಾರ್ಚ್ 6ಕ್ಕೆ ಜೀ ಕನ್ನಡದಲ್ಲಿ ಹಿಟ್ಲರ್ ಕಲ್ಯಾಣ ಜಾತ್ರೆ!
ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ತಂಡ ಇದೀಗ ವೀಕ್ಷಕರಿಗೆಂದು ದೊಡ್ಡ ಜಾತ್ರೆ ಮಾಡುತ್ತಿದೆ. ರಾಜ್ಯದೆಲ್ಲೆಡೆ ಸಂಚರಿಸಿ, ವೀಕ್ಷಕರ ನಾಡಿ ಮಿಡಿತ ಅರಿಯಲು ಮುಂದಾಗುತ್ತಿದೆ. ಮೊದಲ ಜಾತ್ರೆ ಹೇಗಿರುತ್ತೆ, ಎಲ್ಲಿ ನಡೆಯುತ್ತೆ?

ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ (Hitler Kalyana) ತಂಡದಿಂದ ‘ಹಿಟ್ಲರ್ ಕಲ್ಯಾಣ ಜಾತ್ರೆ’ ಕಾರ್ಯಕ್ರಮ ಕೊಪ್ಪಳದ ಯಲಬುರ್ಗಾದಲ್ಲಿ ನಡೆಯಲಿದೆ.
ಟಿವಿಯಲ್ಲಿ ಮಾ.6ರ ಸಂಜೆ 7.30ರಿಂದ ಪ್ರಸಾರವಾಗಲಿದ್ದು ಈ ಸಂತೆಯಲ್ಲಿ ವೀಕ್ಷಕರು ಧಾರಾವಾಹಿಯ ಕಲಾವಿದರ ಜೊತ ನೇರವಾಗಿ ಮಾತನಾಡಬಹುದು.
ಎಜೆ, ಲೀಲಾ, ದುರ್ಗಾ, ಲಕ್ಷ್ಮಿ, ಸರಸ್ವತಿ, ಅಂತರಾ ಹಾಗೂ ವಿಶ್ವರೂಪ ಪಾತ್ರಧಾರಿಗಳು, ಜನರ ಜೊತೆಗೆ ಸಂವಾದ ನಡೆಸಲಿದ್ದಾರೆ. ಜೊತೆಗೆ ‘ಪಾರು’ ಧಾರಾವಾಹಿಯ ಆದಿತ್ಯ ಹಾಗೂ ಪಾರು ಪಾತ್ರಧಾರಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟಿಆರ್‌ಪಿಯಲ್ಲಿ ಇಂದಿಗೂ ‘ಹಿಟ್ಲರ್ ಕಲ್ಯಾಣ’ ಟಾಪ್ ಸ್ಥಾನ ಕಾಯ್ದುಕೊಂಡಿದೆ ಎಂದೂ ಜೀ ಕನ್ನಡ (Zee Kannada) ತಿಳಿಸಿದೆ. ಆರಂಭದಿಂದಲೂ ವೀಕ್ಷಕರಿಗೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಎಜೆ ಮತ್ತು ಲೀಲಾ ದೂರವಾದಬೇಕು, ಎಂದು ಮೂವರು ಸೊಸೆಯಂದಿರ ಪ್ಲ್ಯಾನ್ ಮಾಡುತ್ತಿದ್ದರೆ, ಸತ್ತಿರುವ ಎಜೆ ಮೊದಲ ಪತ್ನಿ ಅಂತರಾ ಇವರನ್ನು ಒಂದು ಮಾಡುತ್ತಿದ್ದಾರೆ.
ಅಂತರಾ ತನ್ನ ಎಲ್ಲಾ ಗುಣಗಳನ್ನು ಲೀಲಾ ಮೇಲೆ ಪ್ರಯೋಗ ಮಾಡಿ ಎಜೆ ಹತ್ತಿರವಾಗುವಂತೆ ಮಾಡುತ್ತಿದ್ದಾರೆ. ಈಗಾಗಿ ಎಜೆ ಅಡುಗೆ ಮನೆಯಲ್ಲಿ ಲೀಲಾ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಪರ್ಫೆಕ್ಟ್ ಮ್ಯಾನ್ ಎಜೆ ಮತ್ತು ಎಡವಟ್ಟು ರಾಣಿ ಲೀಲಾ ಸಂಸಾರ ಹೇಗೆ ಮಾಡುತ್ತಾರೆ, ಇಡೀ ಮನೆ ಜವಾಬ್ದಾರಿ ಲೀಲಾ ಕೈಯಲ್ಲಿದ್ದು, ಅಂತರಾ ಪರೋಕ್ಷವಾಗಿ ಹೇಗೆ ಸಹಾಯ ಮಾಡುತ್ತಾಳೆ ಎಂದು ಧಾರಾವಾಹಿಯಲ್ಲಿ ಹೇಳಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.