ಮದುವೆ ಸಂಭ್ರಮ; ನಟಿ ಪ್ರಿಯಾ ಆಚಾರ್ ಡಿಸೈನರ್ ಮೆಹೇಂದಿ ಹೇಗಿದೆ ನೋಡಿ
ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ನಟಿ ಪ್ರಿಯಾ ಆಚಾರ್. ಗ್ರೀನ್ ಡ್ರೆಸ್‌ನಲ್ಲಿ ಮೆಹೇಂದಿ ಫೋಟೋ ಶೂಟ್.....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಪ್ರಿಯಾ ಆಚಾರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಫೆಬ್ರವರಿ 12ರಂದು ಹಸೆಮಣೆ ಏರುತ್ತಿರುವ ನಟಿ ಅದ್ಧೂರಿಯಾಗಿ ಮೆಹೇಂದಿ ಕಾರ್ಯಕ್ರಮ ಮಾಡಿದ್ದಾರೆ. ಹಸಿರು ಬಣ್ಣದ ಡಿಸೈನರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಪ್ರಿಯಾ ಮಾತ್ರವಲ್ಲ ಅವರ ಸ್ನೇಹಿತರು ಕೂಡ ಗ್ರೀನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಡಿಸೈನರ್ ಮೆಹೇಂದಿ ಹಾಕಿಸಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
#Prisid ಎಂದು ಹ್ಯಾಷ್‌ಟ್ಯಾಗ್ ಬಳಸಿ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ. ಬೃಂದಾವನ್ ಡಿಸೈನರ್ ಸ್ಟುಡಿಯೋ ಅವರ ಡಿಸೈನರ್ ಡ್ರೆಸ್ ಧರಿಸಿದ್ದಾರೆ. ಸುಹಾಸ ಸಪ್ತಗಿರಿ ಫೋಟೋ ಕ್ಲಿಕ್ ಮಾಡಿದ್ದಾರೆ.
ಪ್ರಿಯಾ ಮತ್ತು ಸಿದ್ಧು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಹಂಚಿಕೊಂಡಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಯಲ್ಲಿ ಬಿದ್ದರು. ಕೆಲವು ತಿಂಗಳುಗಳ ಹಿಂದೆ ಧಾರವಾಡದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು.