'ಗಟ್ಟಿಮೇಳ' ಮಹತಿ ಕೈಯಲ್ಲಿ ರಾಶಿ ಆಫರ್ಸ್; ಯಾರಿಗೂ ಕಮ್ಮಿಯಿಲ್ಲ ಈ ಮಲ್ನಾಡ್ ಬ್ಯೂಟಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳದ ಪಾತ್ರಧಾರಿ ಅಂಜಲಿ ಅಲಿಯಾಸ್ ಮಹತಿ ವೈಷ್ಣವಿ ಭಟ್ ಈಗ ಬಣ್ಣದ ಲೋಕದ ಬಹು ಬೇಡಿಕೆಯ ಕಲಾವಿದೆ. ಸೌಂದರ್ಯದ ಜೊತೆ, ನಟನೆಯೂ ರಕ್ತಗತವಾಗಿ ಬಂದಿರುವ ಈಕೆಗೆ ಸಂಗೀತವೂ ಒಲಿದಿದೆ. ಇದೀಗ ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿರುವ ಮಹತಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಸಕತ್ತೂ ಫಾಲೋಯರ್ಸ್ ಗಳಿಸುತ್ತಿದ್ದಾರೆ. ಆಕೆಯ ಈ ಫೋಟೋಗಳನ್ನು ನೋಡಿದ್ರೆ ಇವರಿಗೆ ಅತ್ಯುತ್ತಮ ಭವಿಷ್ಯವಿರೋದು ವೇದ್ಯವಾಗುತ್ತದೆ. ಬೇರೆ ಬೇರೆಯವರು ಶೂಟ್ ಮಾಡಿದ ಮಹತಿಯ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ...
ಫೋಟೋಕೃಪೆ: ಮಹತಿ ವೈಷ್ಣವಿ ಭಟ್ ಇನ್‌ಸ್ಟಾಗ್ರಾಂ
'ಡ್ರಾಮ ಜೂನಿಯರ್ಸ್' ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಮಹತಿ.
'ಗಟ್ಟಿಮೇಳ' ಧಾರಾವಾಹಿ ಮೂಲಕ ಮನೆ-ಮನಗಳ ಮಾತಾಗಿದ್ದಾರೆ.
ಪಟಪಟ ಅಂತ ಮಾತನಾಡುವ ಮಹತಿ, ಈಗ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಮಹತಿ ಪೋಷಕರಿಬ್ಬರೂ ವೈದ್ಯರು. ಅಮ್ಮನಿಗೆ ಸಂಗೀತ ಗೊತ್ತು. ಮಗಳು ಹಾಡುವ ಜೊತೆಗೆ ಅಭಿನಯದಲ್ಲೂ ಮುಂದು. ಅಣ್ಣ ಎಂಬಿಬಿಎಸ್ ಓದುತ್ತಿದ್ದಾನೆ.
5ನೇ ವಯಸ್ಸಿನಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಈ ಚೆಲುವೆ 10 ವರ್ಷವಿದ್ದಾಗ 'ಛೋಟಾ ರಿಪೋರ್ಟರ್' ಸ್ಪರ್ಧಿಯಲ್ಲಿಯೂ ಬಹುಮಾನ ಗೆದ್ದಿದ್ದರು.
ಡ್ರಾಮಾ ಜೂನಿಯರ್ಸ್‌ನಲ್ಲಿ ಡಿಫರೆಂಟ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ 'ಸ್ಟಾರ್ ಆಫ್ ದಿ ವೀಕ್' ಪಟ್ಟ ಪಡೆದುಕೊಂಡರು.
ಮಹತಿ ಸೋಷಿಯಲ್ ಮೀಡಿಯಾ ಖಾತೆಯನ್ನು ತಾಯಿ ಡಾ. ಸುಚಿತ್ರಾ ಮುರಳೀಧರ್ ನೋಡಿಕೊಳ್ಳುತ್ತಾರೆ, ಸುಮಾರು 72 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
'ಗಟ್ಟಿಮೇಳ' ಧಾರಾವಾಹಿಗೂ ಮುನ್ನ ಸ್ಟಾರ್ ಸುವರ್ಣದ 'ಸಿಂಧೂರ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಇದೀಗ ಮತ್ತೆ ಧಾರಾವಾಹಿಗಳಿಗೂ ಆಫರ್ಸ್ ಬರುತ್ತಿವೆ.
'ಎಳೆಯರು ನಾವು ಗೆಳೆಯರು' ಸಿನಿಮಾದಲ್ಲಿ ಅಭಿನಯಿಸಿರುವ ಮಹತಿ, ಈಗಾಗಲೇ ಸಾಕಷ್ಟು ಸಿನಿಮಾ ಆಫರ್ಸ್ ಹುಡುಕಿಕೊಂಡು ಬರುತ್ತಿವೆ. ಶಾಸ್ತ್ರೀಯ ಸಂಗೀತ ಜೂನಿಯರ್ಸ್ ಪರೀಕ್ಷೆಯಲ್ಲಿ ಶೇ.98.75 ಅಂಕಗಳೊಂದಿಗೆ ಉತ್ತೀರ್ಣರಾದ ಮಹತಿ, ಅಜ್ಜ ವಿದ್ವಾನ್ ನಾಗರಾಜ್ ಅವರ ಹತ್ತಿರ ಸಂಗೀತ ಸೀನಿಯರ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಧಾರಾವಾಹಿ ಚಿತ್ರೀಕರಣ, ಸಂಗೀತಾಭ್ಯಾಸ ಹಾಗೂ ಮಹತಿ ಸಾಧನೆಯಲ್ಲಿ ತಾತಾ ಮತ್ತು ಅಮ್ಮಮ್ಮ ಅವರ ಪಾತ್ರ ದೊಡ್ಡದು ಎನ್ನುತ್ತಾರೆ, ತಾಯಿ ಡಾ.ಸುಚಿತ್ರಾ.
ರಂಭಾಪುರಿ ಶ್ರೀಗಳಿಂದ 'ಅಭಿನಯ ಕಿಶೋರೆ', ಹಿರೇಮಗಳೂರು ಕಣ್ಣನ್ ಅವರಿಂದ 'ಅಭಿನಯ ರಾಣಿ' ಎಂಬ ಬಿರುದು ಪಡೆದುಕೊಂಡಿದ್ದಾರೆ. ಈ ಪ್ರತಿಭೆ ಮತ್ತಷ್ಟು ಬೆಳಗಲಿ, ಭವಿಷ್ಯ ಉಜ್ವಲವಾಗಲಿ ಎಂಬುವುದು ನಮ್ಮ ಹಾರೈಕೆಯೂ ಹೌದು.