ಸೀರೆ ತೊಟ್ಟು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ ಕಾಮಿಡಿ ಕಿಲಾಡಿಗಳು ನಯನಾ!
ವೈರಲ್ ಆಯ್ತು ನಟಿ ನಯನಾ ಪ್ರೆಗ್ನೆನ್ಸಿ ಫೋಟೋಶೂಟ್. ಅಪ್ಪಟ ಕನ್ನಡತಿ ಎಂದ ನೆಟ್ಟಿಗರು.....
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕಿರುತೆರೆ ಕಾಲಿಟ್ಟ ನಯನಾ.
ಮಜಾ ಟಾಕೀಸ್ ಹಿಟ್ ಆದ ಬೆನ್ನಲೆ ನಯನಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಅಪಾರ ಮೆಚ್ಚುಗೆ ಪಡೆಯಿತ್ತು.
ನಯನಾ ಚೊಚ್ಚಲ ಮಗುವಿಗೆ ತಾಯಿ ಆಗುತ್ತಿದ್ದಾರೆ. ಬೊಂಬಾಟ್ ಬೋಜನ (Bombat Bojana) ಕಾರ್ಯಕ್ರಮದ ಮೂಲಕ ರಿವೀಲ್ ಮಾಡಿದ್ದರು.
ನಯನಾಗೆ ಸದ್ಯ 8 ತಿಂಗಳು. ಈ ನಡುವೆಯೂ ಶೂಟಿಂಗ್ ಮಾಡುತ್ತಿದ್ದಾರೆ ಹಾಗೂ ಇನ್‌ಸ್ಟಾಗ್ರಾಂನಲ್ಲ ರೀಲ್ಸ್ ಮಾಡುತ್ತಿದ್ದಾರೆ.
ನಯನಾ ಸಖತ್ ಟ್ರೆಡಿಷನಲ್ ಆಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೀರೆ ಧರಿಸಿ ಮಿಂಚಿದ್ದಾರೆ, ಬ್ಲ್ಯಾಕ್ ಆಂಡ್ ವೈಟ್ ವಿಡಿಯೋ ವೈರಲ್ ಆಗಿದೆ.
ಈವರೆಗೂ ನಯನಾ ಎಲ್ಲಿಯೂ ಪ್ರೆಗ್ನೆನ್ಸಿ ಅನೌನ್ಸ್ ಮಾಡಿಲ್ಲ. ಅವರು ಹಾಕುತ್ತಿರುವ ವಿಡಿಯೋಗಳನ್ನು ನೋಡಿಯೇ ಜನರು ಗೆಸ್ ಮಾಡುತ್ತಿದ್ದಾರೆ.
ಅಂಬರಾ ದಿ ಸಿಲ್ಕ್ ಡಿಸೈನರ್ ಸೀರೆ ಮತ್ತು ತೇಜು ಮೇಕ್ ಓವರ್ ಮಾಡಿದ್ದಾರೆ. ಆದಷ್ಟು ಬೇಗ ವಿಡಿಯೋ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ನೆಟ್ಟಿಗರು.