ವೆರೈಟಿ ನಾನ್-ವೆಜ್; ಗರ್ಭಿಣಿ ನಯನಾ ಬಯಕೆ ಈಡೇರಿಸಿದ ಕಾಮಿಡಿ ಕಿಲಾಡಿಗಳು!
ನಯನಾ ಪ್ರೆಗ್ನೆನ್ಸಿ ಬಯಕೆಗಳನ್ನು ಈಡೇರಿಸಿದ ಕಾಮಿಡಿ ಕಿಲಾಡಿಗಳು. ನಾನ್ ವೆಜ್ ಐಟಂ ನೋಡಿದರೆ ಬಾಯಲ್ಲಿ ನೀರು ಬರುತ್ತೆ....
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಯನಾ.
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ನಯನಾಗೆ ಇರುವ ಬಯಕೆಗಳನ್ನು ಅವರ ಕಾಮಿಡಿ ಕಿಲಾಡಿಗಳು ಗ್ಯಾಂಗ್‌ನವರು ಈಡೇರಿಸಿದ್ದಾರೆ.
ಹಾಸ್ಯ ನಟ ಅನೀಶ್ ಮತ್ತು ಮಿಂಚು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಬಾಳೆಎಲೆ ಮುಂದೆ ನಯನಾ ಕುಳಿತುಕೊಂಡು ಎಂಜಾಯ್ ಮಾಡುತ್ತಿದ್ದಾರೆ.
'ಫ್ಯಾಮಿಲಿ ಅಂದ್ರೆ ಕೇವಲ ರಕ್ತ ಸಂಬಂಧ ಆಗಿರಬೇಕು ಅಂತೇನಿಲ್ಲ. ಪ್ರೀತಿ ತುಂಬಿದ್ದರೆ ಫ್ಯಾಮಿಲಿ ಆಗುತ್ತದೆ ಅದೇ ನಮ್ಮ ಒಟ್ಟಿಗಿರುವಂತೆ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
ಪ್ರತಿಯೊಬ್ಬರೂ ನಯನಾಳಿಗೆ ವೆರೈಟಿ ಚಿಕನ್ ಮಟನ್ ಮೀನು ನೀರ್ ದೋಸೆ ಅಡುಗೆಗಳನ್ನು ಬಡಿಸಿದ್ದಾರೆ ಅದಾದ ಮೇಲೆ ತುತ್ತು ಕೂಡ ಕೊಟಿದ್ದಾರೆ.
ಸ್ಟಾರ್ ಸುವರ್ಣ ಬೊಂಬಾಟ್ ಭೋಜನ ಕಾರ್ಯಕ್ರಮದ ಮೂಲಕ ನಯನಾ ಗರ್ಭಿಣಿ ಎನ್ನುವ ವಿಚಾರ ತಿಳಿಯಿತ್ತು. ಒಂದೆರಡು ಟ್ರೆಡಿಷನಲ್ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್ ಆಗಿದೆ.
ಕೆಲವರು ಹೆಣ್ಣು ಮಗುವಾಗಲಿ ಎಂದು ಇನ್ನೂ ಕೆಲವರು ಗಂಡು ಮಗುವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ನಯನಾ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ..ಬ್ರೇಕ್ ತೆಗೆದುಕೊಳ್ಳದೆ ಚಿತ್ರೀಕರಣ ಮಾಡುತ್ತಿದ್ದಾರೆ.