ಯುಟ್ಯೂಬರ್ ಚಂದನ್ ಕೈ ಹಿಡಿದ ಕಿರುತೆರೆ ನಟಿ ನವ್ಯಾ ನಾರಾಯಣ್; ಫೋಟೋ ವೈರಲ್
ಯುಟ್ಯೂಬ್‌ನಲ್ಲಿ ಮದುವೆ ಸಂಪೂರ್ಣ ಅಪ್ಡೇಟ್ ಶೇರ್ ಮಾಡಿಕೊಂಡ ಚಂದು-ನವ್ಯಾ. ನೆಟ್ಟಿಗರು ಇನ್ನೂ ಶಾಕ್‌ನಲ್ಲಿದ್ದಾರೆ....
ಕನ್ನಡ ಕಿರುತೆರೆಯ ಜನಪ್ರಿಯ ನಟಿ ನವ್ಯಾ ನಾರಾಯಣ್ ಗೌಡ ಮತ್ತು ಯುಟ್ಯೂಬರ್ ಚಂದನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಈ ಜೋಡಿ ತಮ್ಮ ಪ್ರೀತಿ ವಿಚಾರದಿಂದ ಹಿಡಿದು ಮದುವೆ ವಿಚಾರದವರೆಗೂ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸಖತ್ ಸಿಂಪಲ್ ಆಗಿ ಮದುವೆ ಮಾಡಿಕೊಂಡಿರುವ ಈ ಜೋಡಿ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.
ಕಿರುತೆರೆ ಮತ್ತು ಕನ್ನಡ ಚಿತ್ರರಂಗದ ಅನೇಕ ತಾರೆಯರು ಇವರ ಮನೆಯಲ್ಲಿ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಶುಭ ಹಾರೈಸಿದ್ದಾರೆ.
ಗೌರಿಪುರದ ಗಯ್ಯಾಳಿಗಳು, ಇವಳು ಸುಜಾತಾ ಮತ್ತು ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಗಳಲ್ಲಿ ನವ್ಯಾ ನಾರಾಯಣ್ ನಟಿಸಿದ್ದಾರೆ.
ತೆಲುಗು ಭಾಷೆಯ 'ಅನು ಅನೆ ನೇನು' ಎಂದು ಧಾರಾವಾಹಿಯಲ್ಲೂ ನವ್ಯಾ ನಾರಾಯಣ್ ನಟಿಸಿದ್ದಾರೆ. ಚಂದನ್ ಕೆಆರ್ ಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.