ನಂದುಗೋಕುಲಕ್ಕೆ ವಿಲನ್ ಸೊಸೆ ಎಂಟ್ರಿ ! ಸೀರಿಯಲ್ ಹಾಳ್ಮಾಡ್ಬೇಡಿ ಅಂತಿದ್ದಾರೆ ವೀಕ್ಷಕರು
Colors Kannada Nandagokula Serial : ನಂದಗೋಕುಲ ಸೀರಿಯಲ್ ಗೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ. ಸೇರೊದ್ದು ಬಂದ ಪ್ರಿಯಾ ವರ್ತನೆ ಯಾಕೋ ಅನುಮಾನ ಹುಟ್ಟಿಸಿದೆ. ಚೆಂದದ ಕುಟುಂಬವನ್ನು ಪ್ರಿಯಾ ಹಾಳು ಮಾಡ್ತಾಳಾ ?

ಹೊಸ ಟ್ವಿಸ್ಟ್
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರ ಆಗ್ತಿರುವ ನಂದಗೋಕುಲ (Nandagokula) ಸೀರಿಯಲ್ ಶುರುವಾಗಿ ಕೆಲವೇ ತಿಂಗಳು ಕಳೆದ್ರೂ ಜನಮೆಚ್ಚಿದ ಸೀರಿಯಲ್ ಪಟ್ಟಪಡೆದಿದೆ. ಅನುಬಂಧ ಅವಾರ್ಡ್ ನಲ್ಲಿ ನಂದಗೋಕುಲ ಸೀರಿಯಲ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸೀರಿಯಲ್ ನಲ್ಲಿ ವಿಲನ್ ದಂಡೇ ಇದ್ರೂ ಮನೆ ಹುಳುಕು ಇರ್ಲಿಲ್ಲ. ಐದು ಮಕ್ಕಳ ತಂದೆ ನಂದ ಹಾಗೂ ತಾಯಿ ಗಿರಿಜಾ ಸ್ವಭಾವ, ಮಕ್ಕಳಿಗೆ ಅವರು ನೀಡಿದ ಸಂಸ್ಕಾರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಆದ್ರೀಗ ಸೀರಿಯಲ್ ಗೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಮುಗೀತು ಮಾಧವನ ಮದುವೆ
ನಂದಗೋಕುಲ ಸೀರಿಯಲ್ ನಲ್ಲಿ ಮಾಧವ ಯಾರನ್ನು ಮದುವೆ ಆಗ್ತಾನೆ ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ತಮ್ಮಂದಿರ ದಾರಿಯನ್ನು ಮಾಧವ ಹಿಡಿಯಲಿಲ್ಲ. ಎಷ್ಟೇ ಕಷ್ಟ ಬಂದ್ರೂ, ವಿಲನ್ ಗಳು ಸಾಕಷ್ಟು ಕುತಂತ್ರ ಮಾಡಿದ್ರೂ ಮಾಧವ ಸೋಲಲಿಲ್ಲ. ನಂದಕುಮಾರ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಲಿಲ್ಲ. ಮಾಧವ, ಅಪ್ಪ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾನೆ.
ನಂದಗೋಕುಲದಲ್ಲಿ ಮೂರು ಸೊಸೆಯಂದಿರು
ಮಾಧವ, ಪ್ರಿಯಾ ಕೊರಳಿಗೆ ತಾಳಿ ಕಟ್ಟಿದ್ದಾನೆ. ನಂದನ ಮನೆಗೆ ಸೊಸೆಯಾಗಿ ಪ್ರಿಯಾ ಎಂಟ್ರಿಯಾಗ್ತಿದೆ. ಪ್ರಿಯಾ ಸೇರೊದ್ದು ಮನೆಗೆ ಬಂದಿದ್ದಾಳೆ. ಕೇಶವ, ವಲ್ಲಭನ ಮದುವೆ ಈಗಾಗಲೇ ನಡೆದಿದ್ದು, ಗಿರಿಜಾ ಎರಡು ಸೊಸೆಯಂದಿರ ಜೊತೆ ಪ್ರಿಯಾಳನ್ನೂ ತನ್ನ ಸೊಸೆಯಾಗಿ ಒಪ್ಪಿಕೊಂಡಿದ್ದಾಳೆ.
ಮೀನಾಗೆ ಹಿರಿ ಸೊಸೆ ಪಟ್ಟ
ಕೇಶವ ಪ್ರೀತಿಸಿ ಮದುವೆಯಾದ್ರೆ ವಲ್ಲಭನದ್ದು ಅನಿರೀಕ್ಷಿತ ಮದುವೆ. ಕೇಶವನ ಹುಡುಗಿ ಮೀನಾಳನ್ನು ನಂದಕುಮಾರ ಆರಂಭದಲ್ಲಿ ಇಷ್ಟಪಟ್ಟಿರಲಿಲ್ಲ. ಆದ್ರೆ ಮೀನಾ ಸ್ವಭಾವ ಮನೆಯವರನ್ನು ಸೆಳೆದಿತ್ತು. ನಂದಕುಮಾರ ಕೂಡ ಮೀನಾಳನ್ನು ಸೊಸೆಯಾಗಿ ಒಪ್ಪಿಕೊಂಡಿದ್ದ. ಈಗ ಮೀನಾಗೆ ಹಿರಿ ಸೊಸೆ ಪಟ್ಟ ನೀಡಿದ್ದಾನೆ.
ಮನೆಯಲ್ಲಿ ಖುಷಿಯೋ ಖುಷಿ
ಕೇಶವನ ನಂತ್ರ ಮದುವೆಯಾಗಿದ್ದು ವಲ್ಲಭ. ಅಮೂಲ್ಯ, ಗಿರಿಜಾ ಅಣ್ಣನ ಮಗಳು. ಆಕೆಯನ್ನೂ ಆರಂಭದಲ್ಲಿ ನಂದ ಒಪ್ಪಿಕೊಂಡಿರಲಿಲ್ಲ. ಮಾಧವನ ಮದುವೆಯಲ್ಲಿ ಎಲ್ಲರೂ ಒಂದಾಗಿದ್ದಾರೆ. ಮನೆಯಲ್ಲಿ ಮಾಧವ ಹಿರಿಯನಾದ್ರೂ ಮದುವೆಯಾಗಿದ್ದು ಕೊನೆಯಲ್ಲಿ. ಹಾಗಾಗಿ ನಂದ ತನ್ನದೇ ತೀರ್ಪು ನೀಡಿದ್ದಾನೆ. ಮನೆಗೆ ಮದುವೆಯಾಗಿ ಮೊದಲು ಬಂದಿದ್ದು ಮೀನಾ, ಹಾಗಾಗಿ ಮೀನಾಗೆ ಹಿರಿ ಸೊಸೆ ಪಟ್ಟ ನೀಡಿದ್ದಾನೆ. ಕೇಶವ ಹಾಗೂ ಮೀನಾ ಫೋಟೋ ಕೆಳಗೆ ಮಾಧವ ಹಾಗೂ ಪ್ರಿಯಾ ಫೋಟೋ ಇಡಲಾಗಿದೆ. ಇದನ್ನು ಕೇಳಿ ಮೀನಾ ಖುಷಿಪಟ್ಟಿದ್ದಾಳೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರಿಯಾ ಕಣ್ಣಲ್ಲಿ ದ್ವೇಷ
ಸೇರೊದ್ದು ಮನೆಗೆ ಬಂದ್ಮೇಲೆ ಮಾವನ ಆಜ್ಞೆಯಂತೆ ಮಾಧವ ಹಾಗೂ ತನ್ನ ಫೋಟೋವನ್ನು ಗೋಡೆಗೆ ನೇತು ಹಾಕಿದ್ದಾಳೆ ಪ್ರಿಯಾ. ಆದ್ರೆ ಮೀನಾಗೆ ಹಿರಿ ಸೊಸೆ ಪಟ್ಟ ನೀಡಿದ್ದು ಯಾಕೋ ಆಕೆ ಮನಸ್ಸಿಗೆ ಸರಿ ಬಂದಂತಿಲ್ಲ. ಮಾವನ ಮಾತು ಕೇಳ್ತಿದ್ದಂತೆ ಕಣ್ಣು ಕೆಂಪಾಗಿದೆ. ನಂದಗೋಕುಲಕ್ಕೆ ವಿಲನ್ ಸೊಸೆ ಎಂಟ್ರಿಯಾದಂತಿದೆ.
ವೀಕ್ಷಕರು ಹೇಳೋದೇನು?
ಪ್ರೋಮೋ ನೋಡಿದ ವೀಕ್ಷಕರಿಗೆ ಭಯ ಶುರುವಾಗಿದೆ. ಎಲ್ಲ ಸೀರಿಯಲ್ ನಂತೆ ಇಲ್ಲೂ ಸೊಸೆಯಂದಿರ ಮಧ್ಯೆ ಗಲಾಟೆ ಶುರುವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ದಯವಿಟ್ಟು ಹಿಂದಿನಿ ಸೀರಿಯಲ್ ಗಳಂತೆ ಕಥೆ ಹೆಣೆಯಬೇಡಿ, ಈಗ ಸೀರಿಯಲ್ ಚೆನ್ನಾಗಿ ಬರ್ತಿದೆ ಅಂತ ವೀಕ್ಷಕರು ವಿನಂತಿ ಮಾಡ್ಕೊಂಡಿದ್ದಾರೆ. ಮಾಧವ, ಪ್ರಿಯಾ ಮದುವೆ ಆದ್ರೆ ಕುಟುಂಬ ಚೆನ್ನಾಗಿರುತ್ತೆ ಅಂದ್ಕೊಂಡಿದ್ವಿ, ಪ್ರಿಯಾನೇ ವಿಲನ್ನಾ? ಹೀಗಾದ್ರೆ ಸೀರಿಯಲ್ ಚೆನ್ನಾಗಿರಲ್ಲ ಅಂತ ಕಮೆಂಟ್ ಮಾಡ್ತಿದ್ದಾರೆ. ನಿರ್ದೇಶಕರು ಕಥೆಯನ್ನು ಯಾವ ರೀತಿ ತೆಗೆದುಕೊಂಡು ಹೋಗ್ತಾರೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

