- Home
- Entertainment
- TV Talk
- ಸಿದ್ದು - ಭಾವನಾ ರೊಮ್ಯಾನ್ಸ್ ಬಲು ಜೋರು... ತಂಗಿ ಸತ್ತಿರೋವಾಗ ಇದೆಲ್ಲಾ ಬೇಕಾ ಕೇಳ್ತಿದ್ದಾರೆ ಜನ
ಸಿದ್ದು - ಭಾವನಾ ರೊಮ್ಯಾನ್ಸ್ ಬಲು ಜೋರು... ತಂಗಿ ಸತ್ತಿರೋವಾಗ ಇದೆಲ್ಲಾ ಬೇಕಾ ಕೇಳ್ತಿದ್ದಾರೆ ಜನ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸದ್ಯ ಸಿದ್ಧು ಮತ್ತು ಭಾವನಾ ಪ್ರೀತಿಯಲ್ಲಿ ತೇಲಿ ಹೋಗುತ್ತಿದ್ದಾರೆ. ಆದರೆ ಇದನ್ನು ನೋಡಿ ಜನ ತಂಗಿ ಸತ್ತಿರೋವಾಗ ಇದೆಲ್ಲಾ ಬೇಕಾ? ಎಂದು ಕೇಳುತ್ತಿದ್ದಾರೆ.

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಸದ್ಯ ತುಂಬಾನೆ ಅದ್ಭುತವಾಗಿಯೇ ಮೂಡಿ ಬರುತ್ತಿದೆ. ಈವಾಗಂತೂ ಭಾವನಾಗೆ ಸಿದ್ದು ಮೇಲೆ ನಿಧಾನವಾಗಿ ಲವ್ ಆಗುತ್ತಿದೆ. ಸಿದ್ಧುಗಾಗಿ ಭಾವನಾ ಆತನಿಗೆ ಇಷ್ಟ ಇರೋದನ್ನೆಲ್ಲಾ ಮಾಡ್ತಾ ಇದ್ದಾಳೆ.
ಇದೀಗ ಭಾವನಾ ತನ್ನ ಗಂಡ ಸಿದ್ಧುಗೆ ಸರ್ಪ್ರೈಸ್ ಕೊಡಲೆಂದು ಆತನನ್ನು ತೋಟದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಜೊತೆಗೆ ಸಿದ್ಧು ಜೊತೆ ತೋಟ, ಗದ್ದೆ ಸುತ್ತುತ್ತಾ, ಅಲ್ಲಿ ಸಿಕ್ಕಿರುವ ಜೋಳ, ಎಳನೀರು ಕುಡಿಯುತ್ತಾ, ಮುದ್ದು ಮುದ್ದಾಗಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಾರೆ ಜೋಡಿ.
ಭಾವನಾ ಮತ್ತು ಸಿದ್ದು (Bhavana and Siddu) ಜೋಡಿಯ ನಡುವೆ ಶುರುವಾಗಿರುವ ಈ ಮುದ್ದಾದ ರೊಮ್ಯಾನ್ಸ್ ನೋಡಿ, ಹೆಚ್ಚಿನ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಮೇಡಂಗೆ ಸಿದ್ಧು ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಇವರಿಬ್ಬರ ಜೋಡಿ ನೋಡೋದೆ ಚೆಂದ. ಇಬ್ಬರ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ.
ಆದರೆ ಇನ್ನೂ ಕೆಲವರು ಮಾತ್ರ ಈ ಜೋಡಿಯ ವಿರುದ್ಧ, ಅದರಲ್ಲೂ ಭಾವನಾ ವಿರುದ್ಧ ಕಿಡಿ ಕಾರಿದ್ದಾರೆ. ಅದಕ್ಕೆ ಕಾರಣ ಜಾನು ಸಾವು. ಜಾನು ಬದುಕಿರುವ ಸತ್ಯ ಮನೆಯವರಿಗ್ಯಾರಿಗೂ ಗೊತ್ತೆ ಇಲ್ಲ. ಎಲ್ಲರೂ ಜಾನು ಸತ್ತಿದ್ದಾಳೆ ಅಂತಾನೆ ತಿಳಿದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಇದೆಲ್ಲಾ ಬೇಕಾ ಅಂತ ಕೇಳ್ತಿದ್ದಾರೆ.
ಪ್ರೊಮೋ (Lakshmi nivasa promo) ನೋಡಿ ಕಾಮೆಂಟ್ ಮಾಡಿರುವ ವೀಕ್ಷಕರು ತಂಗಿ ಸತ್ತಿದ್ದೇ ಸತ್ತಿದ್ದು, ಅಕ್ಕನ ಆಟ ಜೋರಾಯ್ತು, ಇದನ್ನ ಜಾನು ಸಾಯೋ ಮುಂಚೆ ಮಾಡಿದ್ರೆ ಚೆನ್ನಾಗರ್ತಿತ್ತು. ತಂಗಿ ಸತ್ತು ಬೆರಳೆಣಿಕೆ ದಿನಗಳು ಆಗಿಲ್ಲ, ಈ ಟೈಮ್ ಗೆ ಇದು ಸೂಟ್ ಆಗಲ್ಲ, ತಂಗಿ ಸತ್ತಿರುವಾಗ ಒಬ್ರು ಇಷ್ಟೊಂದು ಖುಷಿಯಾಗಿರೋದಕ್ಕೆ ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ಇನ್ನೊಬ್ಬರು ಕಾಮೆಂಟ್ ಮಾಡಿ, ಅಲ್ಲಿ ತಂಗಿ ಸತ್ತೋಗಿದ್ದಾಳೆ. ಅಮ್ಮ -ಅಪ್ಪ ಇದರಿಂದ ನೋವನ್ನು ಅನುಭವಿಸುತ್ತಿದ್ದಾರೆ. ಅಲ್ಲಿ ಅಣ್ಣ -ತಮ್ಮ ತಮ್ಮದೇ ಮನೆ ಮಾಡಿಕೊಂಡು ಕಿತ್ತಾಡಿಕೊಂಡಿದ್ದರೆ, ಇಲ್ಲಿ ಈಕೆ ಏನೂ ಆಗಿಯೇ ಇಲ್ಲ ಎನ್ನುವಂತೆ ಆರಾಮಾಗಿದ್ದಾಳೆ ಏನು ಕಥೆನೋ ಏನೋ ಎಂದಿದ್ದಾರೆ.
ಮತ್ತೊಂದಿಷ್ಟು ಜನ ಕಾಮೆಂಟ್ ಮಾಡಿ ಈವಾಗ ಎಷ್ತು ಲವ್ ಮಾಡ್ತಾರೋ ಮಾಡ್ಲಿ, ನಾಳೆ ಡೈರೆಕ್ಟರ್ ಆಕ್ಸಿಡೆಂಟ್ ವಿಷ್ಯ ಎತ್ತಿ ಇಬ್ಬರನ್ನು ಮತ್ತೆ ದೂರ ಮಾಡಿಯೇ ಮಾಡ್ತಾರೆ. ಅಲ್ಲಿವರೆಗೂ ಇದೆಲ್ಲಾ ಇದ್ದಿದ್ದೆ ಎನ್ನುತ್ತಿದ್ದಾರೆ.