40ನೇ ವರ್ಷದಲ್ಲಿ ಸನ್ಯಾಸ ತೊರೆದು ಗ್ರಹಸ್ಥರಾದ ಸ್ವಾಮಿಗಳ ಮಗಳು ಕಿರುತೆರೆಗೆ ಎಂಟ್ರಿ
40ನೇ ವಯಸ್ಸಲ್ಲಿ ಸನ್ಯಾಸತ್ವ ತೊರೆದು ಗ್ರಹಸ್ಥರಾದ ಸ್ವಾಮೀಜಿ ಮಗಳೀಕೆ | ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದವರು ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಮಗಳ ಕಿರುತೆರೆ ಎಂಟ್ರಿ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ನಲವತ್ತನೇ ವಯಸ್ಸಲ್ಲಿ ರಮಾ ಎಂಬವರನ್ನು ಪ್ರೀತಿಸಿ ಮದುವೆಯಾದರು. ಪ್ರೇಮ ಅವರನ್ನು ಅವರನ್ನು ಸನ್ಯಾಸದಿಂದ ಸಂಸಾರದತ್ತ ಕರೆದೊಯ್ಯಿತು.

ವಿದ್ಯಾಭೂಷಣರ ಮಗಳು ಮೇಧಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಇದೀಗ ಅವರ ಮಗಳು ಟಿಎನ್ ಸೀತಾರಾಮ್ ನಿರ್ದೇಶನದಲ್ಲಿ ನಟಿಸಲಿದ್ದಾರೆ.

ಮೇಧಾ ಹಿರಣ್ಮಯಿ ಅಥವಾ ಮೇಧಾ ವಿದ್ಯಾಭೂಷಣ ಟಿ ಎನ್ ಸೀತಾರಾಂ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿ. ಒಬ್ಬ ಕಾಮನ್ ಫ್ರೆಂಡ್ ಮೂಲಕ.

ಟಿ ಎನ್ ಸೀತಾರಾಮ್ ಅವರ ವಿಶೇಷ ಗುಣ ಅಂದರೆ ಅವರ ಅಬ್ಸರ್ವೇಶನ್. ಎದುರಿಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೂಕ್ಷ್ಮವಾಗಿ ನೋಡಿ ಅವರಿಂದ ಪಾತ್ರ ತೆಗೆಸಬಹುದಾ ಅಂತ ಅವರು ಗಮನಿಸುತ್ತಲೇ ಇರುತ್ತಾರಂತೆ.

ಮತ್ತೆ ಮನ್ವಂತರ ಎಂಬ ಹೊಸ ಸೀರಿಯಲ್ ಮಾಡುವ ಹೊತ್ತಿಗೆ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ವಿದ್ಯಾಭೂಷಣ ಹಾಗೂ ರಮಾ ಅವರ ಮಗಳು ಮೇಧಾ ನೆನಪಾಗುತ್ತಾರೆ.

ಈ ಸೀರಿಯಲ್ ಸಂಗೀತ ಹಾಗೂ ಸ್ಪೋರ್ಟ್ಸ್ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಈ ಎರಡು ಫೀಲ್ಡ್ ಬಗ್ಗೆ ತಿಳುವಳಿಕೆಯುಳ್ಳ ಮೇಧಾನೇ ನಾಯಕಿ ಪಾತ್ರಕ್ಕೆ ಬೆಸ್ಟ್ ಅನ್ನೋ ಅಭಿಪ್ರಾಯಕ್ಕೆ ಸೀತಾರಾಂ ಬರುತ್ತಾರೆ.

ಅಚಾನಕ್ ಆಗಿ ಬಂದಿರೋ ಈ ಅವಕಾಶ ಕಂಡು ಮೇಧಾಗೆ ಆರಂಭದಲ್ಲಿ ಕೊಂಚ ಭಯ ಗೊಂದಲ ಉಂಟಾಗುತ್ತೆ. ಏಕೆಂದರೆ ಮೇಧಾ ಚಿಕ್ಕ ವಯಸ್ಸಿಂದಲೇ ಟಿಎನ್ ಎಸ್ ಅವರ ಮುಕ್ತದಂಥಾ ಸೀರಿಯಲ್ ನೋಡಿ ಬೆಳದವರು.

ಅಂಥಾ ದೊಡ್ಡ ನಿರ್ದೇಶಕರ ಸೀರಿಯಲ್‌ನಲ್ಲಿ ಅಭಿನಯಿಸೋದು ತನ್ನಿಂದ ಸಾಧ್ಯವಾ ಎಂಬ ಗೊಂದಲವದು. ಆದರೆ ತಂದೆ ವಿದ್ಯಾಭೂಷಣ ಅವರು ಮಗಳ ಗೊಂದಲ ಬಗೆಹರಿಸುತ್ತಾರೆ. ಮಗಳು ಟಿ ಎನ್ ಎಸ್ ಸೀರಿಯಲ್‌ಗೆ ನಾಯಕಿಯಾಗುತ್ತಿರುವುದವರ ಬಗ್ಗೆ ಬಹಳ ಖುಷಿ ಪಡುತ್ತಾರೆ.

ಇನ್ನು ಮೇಧಾ ವಿಚಾರಕ್ಕೆ ಬಂದರೆ ಈಕೆ ತಂದೆಯಂತೆ ಬಾಲ್ಯದಿಂದಲೇ ಸಂಗೀತದತ್ತ ಆಕರ್ಷಿತರಾದವರು. ಈಗ ಸಂಗೀತದ ವಿದುಷಿ ಆಗಿದ್ದಾರೆ. ಅನೇಕ ಕಡೆ ಸಂಗೀತ ಕಛೇರಿಯನ್ನೂ ನೀಡಿದ್ದಾರೆ.

ಇವರು ಹಾಡಿರುವ ದಾಸರ ಪದಗಳು ಸಿಡಿಯಾಗಿ ಹೊರಬಂದು ಸಾಕಷ್ಟು ಮಾರಾಟ ಕಂಡಿವೆ. ಇದರ ಜೊತೆಗೆ ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ನಾಟಕವೊಂದರಲ್ಲಿ ಇವರ ದ್ರೌಪದಿ ಪಾತ್ರ ಬಹಳ ಗಮನ ಸೆಳೆದಿತ್ತು. ಪ್ರಸ್ತುತ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.

ಇದರ ಜೊತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅಣ್ಣ ಅನಿರುದ್ಧ್ ಕ್ಯಾಮರಾಗೆ ಈಕೆಯೇ ಮಾಡೆಲ್. ತಂದೆ ಅಪ್ಪಟ ಸಂಪ್ರದಾಯಸ್ಥರಾಗಿದ್ದರೆ, ಮಗಳು ಈ ಕಾಲದ ಹುಡುಗಿಯಾಗಿ ಬೆಳೆದಿದ್ದಾರೆ

ಇದೀಗ ಕಿರುತೆರೆಯಲ್ಲಿ ಅದರಲ್ಲೂ ಟಿ ಎನ್ ಸೀತಾರಾಂ ಅವರಂಥ ಪ್ರತಿಭಾವಂತ ನಿರ್ದೇಶಕರ ಜೊತೆಗೆ ನಟಿಸಲು ಮೇಧಾಗೆ ಖುಷಿ ಇದೆ.

ತಂದೆ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಂತೆ ಮಗಳು ನಟನಾ ಕ್ಷೇತ್ರದಲ್ಲಿ ಹೆಸರು ಮಾಡಲಿ ಅಂತ ಜನ ಹಾರೈಯಿಸುತ್ತಿದ್ದಾರೆ. ಆದರೆ ಸೀರಿಯಲ್‌ನಲ್ಲಿ ಗುರುತಿಸಿಕೊಂಡರೂ ಸಂಗೀತ ಮತ್ತು ಓದನ್ನು ನಿಲ್ಲಿಸೋದಿಲ್ಲ ಅಂದಿದ್ದಾರೆ ಮೇಧಾ.

ಸುಮಾರು ಇಪ್ಪತ್ತ ನಾಲ್ಕು ವರ್ಷಗಳ ಪೀಠ ತ್ಯಾಗ ಮಾಡಿ ಮೇಧಾ ತಂದೆ ಗ್ರಹಸ್ಥಾಶ್ರಮ ಸ್ವೀಕರಿಸಿದ್ದರು. ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಈ ಘಟನೆ ಬಗ್ಗೆ ತೀವ್ರತರ ಚರ್ಚೆಗಳೂ ನಡೆದಿದ್ದವು.

ಸಂಸಾರ ಆರಂಭಿಸಿದ ಬಳಿಕವೂ ವಿದ್ಯಾಭೂಷಣರ ಆಧ್ಯಾತ್ಮಿಕ ಸೆಳೆತ ಕಡಿಮೆಯಾಗಲಿಲ್ಲ.
ಸಂಸಾರವನ್ನೂ ಆಧ್ಯಾತ್ಮವನ್ನೂ ಜೊತೆ ಜೊತೆಗೆ ಬದುಕಿದವರು ಅವರು. ಕೆಲವು ವರ್ಷಗಳ ಹಿಂದೆ ಅವರ ಆತ್ಮಕಥೆ 'ಒಲಿದಂತೆ ಹಾಡುವೆ' ಬಿಡುಗಡೆಯಾಯ್ತು.

ಅದರಲ್ಲಿ ಅವರು ತಮ್ಮ ಇಡೀ ಬದುಕಿನ ವಿವರಗಳನ್ನು ದಾಖಲಿಸಿದ್ದಾರೆ. ವಿದ್ಯಾಭೂಷಣರಿಗೆ ಇಬ್ಬರು ಮಕ್ಕಳು ಮಗಳು ಮೇಧಾ ಹಿರಣ್ಮಯಿ. ಮಗ ಅನಿರುದ್ಧ್.

ಮೇಧಾ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡರೆ ಅನಿರುದ್ಧ್ ವಿದ್ಯಾಭೂಷಣ ಕ್ರಿಕೆಟ್, ಫ್ರೊಟೋಗ್ರಫಿಯಂಥ ಹವ್ಯಾಸಗಳಿಂದ ಗಮನ ಸೆಳೆಯುತ್ತಾರೆ.