- Home
- Entertainment
- TV Talk
- ವೈಷ್ಣವಿ ಕೌಂಡಿನ್ಯ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇ ತಡ ಫಾಲೋವರ್ಸ್ ಸಂಖ್ಯೆ ಆಗ ಎಷ್ಟಿತ್ತು?, ಈಗ ಎಷ್ಟಾಯ್ತು?
ವೈಷ್ಣವಿ ಕೌಂಡಿನ್ಯ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇ ತಡ ಫಾಲೋವರ್ಸ್ ಸಂಖ್ಯೆ ಆಗ ಎಷ್ಟಿತ್ತು?, ಈಗ ಎಷ್ಟಾಯ್ತು?
Vaishnavi Kaundinya Instagram followers: ವೈಷ್ಣವಿ ಕೌಂಡಿನ್ಯ ಗ್ಲಾಮರ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಫಾಲೋವರ್ಸ್ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ. ಹಾಗಾದ್ರೆ ಮೊದಲೆಷ್ಟಿತ್ತು?, ಈಗೆಷ್ಟಾಯ್ತು? ವಿವರ ಇಲ್ಲಿದೆ ನೋಡಿ..

ಸಿಕ್ಕಾಪಟ್ಟೆ ವೈರಲ್
ಎರಡು ದಿನಗಳ ಹಿಂದೆಯಷ್ಟೇ 'ಲವ್ ಯೂ ಮುದ್ದು' ಸಿನಿಮಾದ ಪ್ರೀಮಿಯರ್ ನಲ್ಲಿ ವೈಷ್ಣವಿ ಕೌಂಡಿನ್ಯ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ, ಹಾಟ್ ಆಗಿ ಕಾಣಿಸಿಕೊಂಡ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅಂದು ವೈಷ್ಣವಿ ಹಸಿರು ಬಣ್ಣದ ಬ್ಯಾಕ್ ಲೆಸ್, ಡೀಪ್ ನೆಕ್ ಗೌನ್ ಧರಿಸಿ ಬಂದಿದ್ದರು. ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್
ವೈಷ್ಣವಿ ಅವರನ್ನು ಬೋಲ್ಡ್ ಲುಕ್‌ನಲ್ಲಿ ನೋಡಿದ್ದೇ ತಡ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದರು. ಜೊತೆಗೆ ಸಾಕಷ್ಟು ಕಾಮೆಂಟ್‌ಗಳು ಬಂದವು. ಆದರೆ ಈಗ ವಿಷಯ ಅದಲ್ಲ.
ಮೊದಲೆಷ್ಟಿತ್ತು? ಈಗೆಷ್ಟಾಯ್ತು?
ವೈಷ್ಣವಿ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದೇ ತಡ ಫಾಲೋವರ್ಸ್ ಸಂಖ್ಯೆಯೂ ಹಾಗೆಯೇ ಏರಿದೆ. ಹಾಗಾದರೆ ಅವರ ಫಾಲೋವರ್ಸ್ ಸಂಖ್ಯೆ ಮೊದಲೆಷ್ಟಿತ್ತು? ಈಗೆಷ್ಟಾಯ್ತು? ಎಂದು ನೋಡಿದರೆ ಖಂಡಿತ ಶಾಕ್ ಆಗ್ತೀರಿ.
ಹೆಚ್ಚಾದರೂ ಆಶ್ಚರ್ಯವೇನಿಲ್ಲ
ಹೌದು. ಕೆಲವು ದಿನಗಳ ಹಿಂದೆಯಷ್ಟೇ 85.7 k ಫಾಲೋವರ್ಸ್ ಹೊಂದಿದ್ದ ವೈಷ್ಣವಿ ಅವರಿಗೆ ಈಗ 111 k ಫಾಲೋವರ್ಸ್ ಇದ್ದಾರೆ. ಮುಂದಿನ ದಿನಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಆಶ್ಚರ್ಯವೇನಿಲ್ಲ.
ʻಪ್ರೇಮಕಾವ್ಯʼ ಧಾರಾವಾಹಿಯಲ್ಲಿ ನಟನೆ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ, ಈಗ ‘ಕಾವ್ಯ’ ಆಗಿ ʻಪ್ರೇಮಕಾವ್ಯʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದು ಪ್ರತಿ ಸಂಜೆ 6:30ಕ್ಕೆ ಪ್ರಸಾರವಾಗುತ್ತಿದೆ.
ಹೆಚ್ಚೆಚ್ಚು ಲೈಕ್ಸ್, ಕಾಮೆಂಟ್ಸ್
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ವೈಷ್ಣವಿ ಕೌಂಡಿನ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆಗಾಗ್ಗೆ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಳೆದ ತಿಂಗಳು ‘Too Hot to Handle’ ಎಂದು ಅವರೇ ಕ್ಯಾಪ್ಶನ್ ನೀಡಿದ್ದ ಫೋಟೋಗಳು ಸಾಕಷ್ಟು ಲೈಕ್ಸ್ ಗಳಿಸಿದ್ದವು.