- Home
- Entertainment
- TV Talk
- ಪಾಂಡಿಚೇರಿಯಲ್ಲಿ Love Birds... ಒಂದೇ ಒಂದು ಸಲ ಸೋತು ಬಿಡು ನೀ ಎಂದ Vaishnavi Gowda
ಪಾಂಡಿಚೇರಿಯಲ್ಲಿ Love Birds... ಒಂದೇ ಒಂದು ಸಲ ಸೋತು ಬಿಡು ನೀ ಎಂದ Vaishnavi Gowda
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ಸದ್ಯ ಕಿರುತೆರೆಯಿಂದ ದೂರ ಉಳಿದಿದ್ದು, ಇದೀಗ ತಮ್ಮ ಪತಿ ಅನುಕೂಲ್ ಮಿಶ್ರ ಜೊತೆಗೆ ಪಾಂಡಿಚೇರಿಯಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಮುದ್ದಾದ ಜೋಡಿಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆ ಸುರಿಸಿದ್ದಾರೆ.

ವೈಷ್ಣವಿ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ. ಮದುವೆಯಾದ ಬಳಿಕ ಕಿರುತೆರೆಯಿಂದ ದೂರ ಉಳಿದಿರುವ ನಟಿ ಸದ್ಯಕ್ಕಂತೂ ತಮ್ಮ ವೈವಾಹಿಕ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಇದೀಗ ತಮ್ಮ ಪತಿ ಜೊತೆ ವೆಕೇಶನ್ ಮೂಡಲ್ಲಿದ್ದಾರೆ ಚೆಲುವೆ.
ಪಾಂಡಿಚೇರಿಯಲ್ಲಿ ಪತಿ ಜೊತೆ ವೈಷ್ಣವಿ
ವೈಷ್ಣವಿ ಗೌಡ ಇದೀಗ ಚಳಿಗಾಲದ ವೆಕೇಶನ್ ಗಾಗಿ ತಮ್ಮ ಪತಿ ಅನುಕೂಲ್ ಮಿಶ್ರಾ ಜೊತೆ ಈ ಚುಮು ಚುಮು ಚಳಿಯಲ್ಲಿ ಪಾಂಡಿಚೇರಿಗೆ ತೆರಳಿದ್ದು, ಅಲ್ಲಿನ ಸುಂದರ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ .
ಗಂಡನ ಜೊತೆ ಮೋಜು ಮಸ್ತಿ
ವೈಷ್ಣವಿ ತಮ್ಮ ಪತಿ ಜೊತೆ ಔರವಿಲ್ಲ, ಫ್ರೆಂಚ್ ಕಾಲನಿ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದು, ಗಂಡನ ಜೊತೆಗಿನ ಮುದ್ದಾ ಮೋಜು ಮಸ್ತಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತಮ್ಮ ಫೋಟೊಗಳ ಜೊತೆ ನಟಿ ಒಂದೇ ಒಂದು ಸಲ ಸೋತು ಬಿಡು ನೀ ಎನ್ನುವ ಹಾಡು ಕೂಡ ತಮ್ಮ ಗಂಡನಿಗಾಗಿ ಸ್ಪೆಷಲ್ ಆಗಿ ಹಾಕಿದ್ದಾರೆ.
ಸೀತಾರಾಮ ಸೀರಿಯಲ್ ಕೊನೆ
‘ಅಗ್ನಿ ಸಾಕ್ಷಿ’ ಮೂಲಕ ಜನಪ್ರಿಯತೆ ಪಡೆದ ವೈಷ್ಣವಿ ಗೌಡ ಅವರು ಕೊನೆಯದಾಗಿ ‘ಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಒಂದು ಮೈಕ್ರೋ ಸಿರೀಸ್‌ನಲ್ಲಿ ನಟ ಸ್ಕಂದ ಅಶೋಕ್ ಜೊತೆ ನಟಿಸಿದ್ದರು. ಈ ಸೀರೀಸ್ ಸದ್ಯ ಪ್ರಸಾರವಾಗುತ್ತಿದೆ.
ಜೂನ್ ತಿಂಗಳಲ್ಲಿ ಮದುವೆ
ಇದೇ ವರ್ಷ ಜೂನ್ ತಿಂಗಳಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದ್ದು, ಕಿರುತೆರೆಯ ನಟ-ನಟಿಯರು ಆಗಮಿಸಿದ್ದರು.
ಸಂಬಂಧ ಕೂಡಿ ಬಂದದ್ದು ಹೀಗೆ
ಅನುಕೂಲ್ ಮಿಶ್ರಾ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂಡೀಗಢದವರು. ಮ್ಯಾಟ್ರಿಮೋನಿ ಮೂಲಕ ಇವರಿಬ್ಬರ ಪರಿಚಯ ಆಗಿ ಮದುವೆಯಾಗಿತ್ತು. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ನಟಿ ವೈಷ್ಣವಿ ಗೌಡ ಹಲವಾರು ಬಾರಿ ಸಂದರ್ಶನದಲ್ಲಿ ತಿಳಿಸಿದ್ದಾರೆ.