- Home
- Entertainment
- TV Talk
- ಕರ್ವಾ ಚೌತ್ ಬಳಿಕ ಗಂಡನ ಜೊತೆ ಹ್ಯಾಪಿ ಮೂಡಲ್ಲಿ Vaishnavi Gowda… ಏನೋ ಗುಡ್ ನ್ಯೂಸ್ ಇದೆಯಾ?
ಕರ್ವಾ ಚೌತ್ ಬಳಿಕ ಗಂಡನ ಜೊತೆ ಹ್ಯಾಪಿ ಮೂಡಲ್ಲಿ Vaishnavi Gowda… ಏನೋ ಗುಡ್ ನ್ಯೂಸ್ ಇದೆಯಾ?
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ಇತ್ತೀಚೆಗೆ ಮದುವೆಯಾದ ನಂತರದ ಮೊದಲ ಕರ್ವಾ ಚೌತ್ ಆಚರಣೆ ಮಾಡಿದ್ದರು. ಇದೀಗ ಗಂಡನ ಜೊತೆಗಿನ ತುಂಬಾನೆ ಮುದ್ದಾದ, ಫೋಟೊಗಳನ್ನು ನಟಿ ಹಂಚಿಕೊಂಡಿದ್ದು, ಏನಾದ್ರೂ ಗುಡ್ ನ್ಯೂಸ್ ಕೊಡಲಿದ್ದಾರೆಯೇ ವೈಷ್ಣವಿ ಗೌಡ.

ವೈಷ್ಣವಿ ಗೌಡ
ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ, ಇತ್ತೀಚೆಗಷ್ಟೇ ತಮ್ಮ ಪತಿಯ ಒಳಿತಿಗಾಗಿ ಕರ್ವಾ ಚೌತ್ ವೃತವನ್ನು ಆಚರಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ಜೊತೆಗಿನ ಮುದ್ದಾದ ಫೋಟೊ ಪೋಸ್ಟ್ ಮಾಡಿದ್ದಾರೆ.
ಜೋಡಿ ನಂ 1 ಎಂದ ಜನತೆ
ಇದೀಗ ವೈಷ್ಣವಿ ಗಂಡ ಅನುಕೂಲ್ ಮಿಶ್ರಾ ಜೊತೆಗಿನ ಒಂದಷ್ಟು ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡಿದ್ದು, ಜನ ಈ ಮುದ್ದಾದ ಜೋಡಿಯನ್ನು ನೋಡಿ ಜೋಡಿ ನಂ 1, ಸೂಪರ್ ಜೋಡಿ, ಮುದ್ದಾದ ಜೋಡಿ ಎನ್ನುತ್ತಿದ್ದಾರೆ.
ಗುಡ್ ನ್ಯೂಸ್ ಕೊಡ್ತಿದ್ದಾರ ನಟಿ?
ಫೋಟೊಗಳನ್ನು ನೋಡಿ ಜನ ಗುಡ್ ನ್ಯೂಸ್ ಇದೆಯೇ ಎಂದು ಕೇಳ್ತಿದ್ದಾರೆ. ಆದರೆ ನಟಿ ನಟನೆಗೆ ಕಂ ಬ್ಯಾಕ್ ಮಾಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೀರಿಯಲ್ ನಿಂದ ದೂರ ಇದ್ದರೂ ನಟಿ ಸದ್ಯ ವೆಬ್ ಸೀರೀಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ವೆಬ್ ಸೀರೀಸ್ ನಲ್ಲಿ ವೈಷ್ಣವಿ
ಇದೀಗ ಸೋಶಿಯಲ್ ಮೀಡಿಯಾದಲಿ ವೆಬ್ ಸಿರೀಸ್ ಗಳ ಅಬ್ಬರ ಜೋರಾಗಿದೆ. ಅನೇಕ ಸಿರೀಯಲ್ ಕಲಾವಿದರು ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ವೈಷ್ಣವಿ ಗೌಡ ಕೂಡ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಪ್ರೀತಮ್ ಗುಬ್ಬಿ ನಿರ್ದೇಶನದ ಕಥೆಯಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಆದರೆ ಅದು ಯಾವಾಗ ಪ್ರಸಾರವಾಗಲಿದೆ ಅನ್ನೋದು ತಿಳಿದು ಬಂದಿಲ್ಲ.
ಈವರೆಗೂ ಮಾಡದ ಪಾತ್ರದಲ್ಲಿ ವೈಷ್ಣವಿ
ಈ ಹೊಸದಾದ ವೆಬ್ ಸೀರೀಸ್ ನಲ್ಲಿ ವೈಷ್ಣವಿ ಈವರೆಗೂ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದೇನೆ ಎಂದು ಹೇಳಿದ್ದರು. ಇದರ ಜೊತೆ ಶೂಟಿಂಗ್ ವಿಡೀಯೋ ಒಂದನ್ನು ಶೇರ್ ಮಾಡಿ, ಸ್ಕಂದ ಅಶೋಕ್ ಜೊತೆ ನಟಿಸುತ್ತಿರುವುದಾಗಿ ತಿಳಿಸಿದ್ದರು ವೈಷ್ಣವಿ ಗೌಡ.
ವೈಷ್ಣವಿ ಗೌಡ ದಾಂಪತ್ಯ ಜೀವನ
ಸೀತಾ ರಾಮ ಶೂಟಿಂಗ್ ನಡೆಯುತ್ತಿರುವಾಗಲೇ ವೈಷ್ಣವಿ ಗೌಡ ಏರ್ ಫೋರ್ಸ್ ನಲ್ಲಿ ಕಾರ್ಯನಿರ್ವಹಿಸುವ ಅನುಕೂಲ್ ಮಿಶ್ರಾ ಜೊತೆ ಏಪ್ರಿಲ್ 14 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೀರಿಯಲ್ ಕೊನೆಯಾಗುತ್ತಿದ್ದಂತೆ, ಈ ವರ್ಷ ಜೂನ್ 4 ರಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ.
ಕಾಶ್ಮೀರ, ಮನಾಲಿಯಲ್ಲಿ ಹನಿಮೂನ್
ವೈಷ್ಣವಿ ಗೌಡ ಕಾಶ್ಮೀರ, ಮನಾಲಿಯಲ್ಲಿ ಹನಿಮೂನ್ ಮಾಡಿದ್ದರು. ಗಂಡನ ಜೊತೆಗೂ ಸಹ ಒಂದಷ್ಟು ರೀಲ್ಸ್ ಮಾಡಿದ್ದರೂ ಕೂಡ. ಅಷ್ಟೇ ಅಲ್ಲ ಇತ್ತೀಚೆಗೆ ನವರಾತ್ರಿ ಸಂದರ್ಭದಲ್ಲಿ ತಮ್ಮ ಪತಿ ಜೊತೆ ಮಂಗಳೂರಿಗೂ ಭೇಟಿ ಕೊಟ್ಟು, ಅಲ್ಲಿನ ಹುಲಿವೇಷ, ಶಾರದಾ ಮಾತೆ ದರ್ಶನ ಪಡೆದು, ಮಂಗಳೂರಿನ ಊಟ ಸವೆದಿದ್ದರು.