ಎದುರು ಮಾತ್ರ ಬಟ್ಟೆ, ಹಿಂದೆ ಬಟ್ಟೇನೇ ಇಲ್ಲ,,! ಇದೆಂಥಾ ಡ್ರೆಸ್ ?
- ಬಿಗ್‌ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್‌ನ ಹೊಸ ಸ್ಟೈಲ್
- ಎಕ್ಸ್‌ಪೋಸ್ ಮಾಡೋದ್ರಲ್ಲೇ ಸ್ಟ್ರೈಲ್ ಹುಡುಕ್ತಾರೆ ಈ ನಟಿ
- ಬೆತ್ತಲೆ ಬೆನ್ನು ತೋರಿಸಿ ಪೋಸ್ ಕೊಟ್ಟಿದ್ದು ಹೀಗೆ
ಬಿಗ್ ಬಾಸ್ ಒಟಿಟಿಯ ಮನೆಯಲ್ಲಿ ಉರ್ಫಿ ಜಾವೇದ್ ಭಾರೀ ಸೌಂಡ್ ಮಾಡದೇ ಇರಬಹುದು. ಆದರೆ ಮನೆಯಿಂದ ಹೊರಗೆ ಬಂದ ಮೇಲಂತೂ ಭಾರೀ ಸುದ್ದಿ ಮಾಡ್ತಿದ್ದಾರೆ. ಅದೂ ಅವರ ಡ್ರೆಸ್‌ಗಳಿಂದಲೇ.
ಇತ್ತೀಚೆಗೆ ಉರ್ಫಿ ಲೋಖಂಡ್‌ವಾಲಾದಲ್ಲಿ ಹೊಳೆಯುವ ಬೀಜ್ ಡ್ರೆಸ್ ಧರಿಸಿದ್ದರು. ಆಸಕ್ತಿಕರ ಅಂಶವೆಂದರೆ ಇದಕ್ಕೆ ಒಂಚೂರು ಬೆನ್ನಲ್ಲಿ ಬಟ್ಟೆ ಇಲ್ಲ. ಬೆನ್ನಿಲ್ಲದ ಉಡುಪಾಗಿದ್ದರೂ ಎದುರುಭಾಗ ಮುಚ್ಚಿಕೊಂಡಿರುವುದರ ಜೊತೆಗೆ ತಲೆಯ ಮೇಲೂ ಕವರ್ ಆಗುವಂತಿದೆ
ಕೆಲವೊಮ್ಮೆ ಮುಂಭಾಗದಿಂದ, ಕೆಲವೊಮ್ಮೆ ಹಿಂಭಾಗದಿಂದ ನೀವು ಏನನ್ನು ತೋರಿಸಲು ಬಯಸುತ್ತೀರಿ ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಅವಳ ಧಾರ್ಮಿಕ ನಡವಳಿಕೆಗೆ ಇದು ಹೇಗೆ ಸರಿಹೊಂದುವುದಿಲ್ಲ ಎಂದು ಪ್ರತಿಕ್ರಿಯಿಸಿದ ಮಂದಿಯೂ ಇದ್ದರು.
ಮುಸ್ಲಿಮರ ಹೆಸರಿಗೇ ನೀವು ಕಳಂಕ ಎಂದೂ ಹೇಳಿದ್ದಾರೆ. ಇವರೇನು ಫತ್ಪಾ ಹೊರಡಿಸಿಯೇ ಬಿಡಬೇಕು ಎನ್ನುವ ಪ್ರಯತ್ನದಲ್ಲಿರುವಂತೆ ಕಾಣುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ
ಚಮತ್ಕಾರಿ ಮತ್ತು ಆಕರ್ಷಕವಾದ ಉಡುಪನ್ನು ಧರಿಸಿದ ಉರ್ಫಿಯನ್ನು ಟ್ರೋಲ್ ಮಾಡುವುದು ಇದೇ ಮೊದಲಲ್ಲ. ಮೊದಲು, ಸಾಕ್ಸ್‌ನಿಂದ ಮಾಡಿದ ಕ್ರಾಪ್ ಟಾಪ್ ಧರಿಸಿ ಮತ್ತು ಟೀಶರ್ಟ್ ಅನ್ನು ಅರ್ಧಕ್ಕೆ ಕತ್ತರಿಸಿದ್ದಕ್ಕಾಗಿ ಟ್ರೋಲ್ ಆಗಿದ್ದರು.
ಬಿಗ್ ಬಾಸ್ ಮನೆಯಲ್ಲಿ 'ಎಲ್ಲ' ನಡೆದಿದೆ ಎಂದವಳ ಡ್ರೆಸ್ ನೋಡಿ ಕಂಗಾಲಾದ ನೆಟ್ಟಿಗರು!
ವಿಮಾನ ನಿಲ್ದಾಣದಲ್ಲಿ ಗುಂಡಿಯೇ ಇಲ್ಲದ ಜೀನ್ಸ್ ಧರಿಸಿದ್ದರು. ಮತ್ತೊಮ್ಮೆ ತನ್ನ ಗುಲಾಬಿ ಬಣ್ಣದ ಬ್ರಾ ಮೇಲೆ ಚಿಕ್ಕ ಡೆನಿಮ್ ಜಾಕೆಟ್ ಧರಿಸಿದ್ದರು. ಅವಎ ಈ ಏರ್ಪೋರ್ಟ್ ಲುಕ್ ಸಾಕಷ್ಟು ವೈರಲ್ ಆಗಿತ್ತು.
ಬಿಗ್ ಬಾಸ್ ಒಟಿಟಿಯ ನಂತರ, ಉರ್ಫಿ ಜಾವೇದ್ ಅಖ್ತರ್ ಅವರ ಮೊಮ್ಮಗಳು ಎಂದು ಸುದ್ದಿಯಾದರು. ಆದರೆ ಸಂದರ್ಶನದಲ್ಲಿ ಆಕೆ ತನಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ನನ್ನ ಸಂಪೂರ್ಣ ಹೆಸರು ಉರ್ಫಿ ಜಾವೇದ್ ಎಂಬ ಕಾರಣಕ್ಕಾಗಿ ಜನರು ಕಥೆ ಕಟ್ಟುತ್ತಿದ್ದಾರೆ. ಆದರೆ ಅವರು ನನ್ನೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಇವೆಲ್ಲವೂ ಕೇವಲ ಆತನನ್ನು ಟ್ರೋಲ್ ಮಾಡಲು, ನನ್ನ ಉಡುಪಿನ ವಿವಾದವನ್ನು ಅವರೊಂದಿಗೆ ಲಿಂಕ್ ಮಾಡಲು ಮಾಡಲಾಗಿದೆ ಎಂದಿದ್ದರು.
ಆದರೆ ಅದು ಹೇಗೆ ಪ್ರಸ್ತುತ? ಅವರ ಸ್ವಂತ ಮೊಮ್ಮಗಳು ತನ್ನ ಆಯ್ಕೆಯ ಯಾವುದನ್ನಾದರೂ ಧರಿಸಿದರೂ ಅದರಲ್ಲಿ ತಪ್ಪೇನಿದೆ? ಅದಕ್ಕೆ ಆತ ಏಕೆ ಹೊಣೆಗಾರನಾಗಿದ್ದಾನೆ ಎಂದೂ ಪ್ರಶ್ನಿಸಿದ್ದಾರೆ.
ಜಾವೇದ್ ಅಖ್ತರ್ ಅವರ ಪತ್ನಿ ಶಬಾನಾ ಅಜ್ಮಿ ಕೂಡ ಉರ್ಫಿ ಅವರಿಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಶಬಾನಾ ಅವಳು ನಮಗೆ ಯಾವುದೇ ರೀತಿಯ ಸಂಬಂಧಿಕಳಲ್ಲ. ಸುಳ್ಳು ಹರಡುವುದನ್ನು ನಿಲ್ಲಿಸಿ ಎಂದು ಬರೆದಿದ್ದಾರೆ.