ಬಿಗ್ ಬಾಸ್ ಮನೆಯಲ್ಲಿ 'ಎಲ್ಲ' ನಡೆದಿದೆ ಎಂದವಳ ಡ್ರೆಸ್ ನೋಡಿ ಕಂಗಾಲಾದ ನೆಟ್ಟಿಗರು!
ಒಟಿಟಿ ಮಾದರಿಯ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ..ಕ್ಯಾಮರಾದಲ್ಲಿ ತೋರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಬಾಂಬ್ ಸಿಡಿಸಿದ್ದ ಉರ್ಫಿ ಜಾವೇದ್ ಈಗ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ಆದರೆ ಇಲ್ಲಿ ಕಾರಣ ಬೇರೆ ಇದೆ.
ನನ್ನ ಚಿತ್ರ ಅಡಲ್ಟ್ ಸೈಟ್ ಒಂದರಲ್ಲಿ ಅಪ್‍ಲೋಡ್ ಆದಾಗ, ಕುಟುಂಬದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ನನ್ನನ್ನು ಪೋರ್ನ್ ಸ್ಟಾರ್ ಎಂದು ಬಿಂಬಿಸಿದ್ದರು ಎಂದು ನುಡಿದಿದ್ದರು.
ನಾನು ರಹಸ್ಯವಾಗಿ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಜನ ಭಾವಿಸುವ ಸ್ಥಿತಿ ನಿರ್ಮಾಣವಾಗಿತ್ತುಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ನೋವು ಅನುಭವಿಸಿದೆ ಎಂದಿದ್ದರು.
ನಾನು ಹಣ ಬಚ್ಚಿಟ್ಟಿದ್ದೇನೆ ಎಂದು ನನ್ನ ಸಂಬಂಧಿಗಳೆ ಬ್ಯಾಂಕ್ ಖಾತೆ ಪರಿಶೀಲಿಸಲು ಬಯಸಿದ್ದರು ಎಂಬ ವಿಚಾರವನ್ನು ಸಂದರ್ಶನವೊಂದರ ವೇಳೆ ಹೇಳಿದ್ದರು.
ನಾನು 11ನೇ ತರಗತಿಯಲ್ಲಿ ಕಲಿಯುತ್ತಿದ್ದೆ ಆಸಂದರ್ಭದಲ್ಲಿಯೇ ಸಂಕಷ್ಟ ಎದುರಿಸಬೇಕಾಯಿತು. ಈಗ ಇರುವಷ್ಟು ಚೈತನ್ಯ ಮತ್ತು ಶಕ್ತಿ ಇರಲಿಲ್ಲ ಎಂದು ಹೇಳಿದ್ದರು.
ಸುಮಾರು 2 ವರ್ಷ ಕಾಲ ಹಿಂಸೆ ಅನುಭವಿಸಿದೆ. ನನ್ನ ಬಗ್ಗೆ ಎಲ್ಲ ಕಡೆಯೂ ಕೆಟ್ಟ ಮಾತುಗಳೆ ಬಂದವು. ಒಂದು ಹಂತದಲ್ಲಿ ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸಹಜವಾಗಿಯೇ ಒಂದಷ್ಟು ಕ್ಯಾಮರಾಗಳು ಅವರನ್ನು ಹಿಂಬಾಲಿಸಿವೆ. ಈ ನಡುವೆ ಅವರು ಕಾಣಿಸಿಕೊಂಡ ಅವತಾರ ಟ್ರೋಲ್ ಗೆ ಆಹಾರವಾಗಿದೆ.