JD ಅಲ್ಲ ಕೇಡಿ, ಅಮೃತಧಾರೆ ಜೈದೇವ್ ಆಕ್ಟಿಂಗ್ ಗೆ ಪ್ರೇಕ್ಷಕರ ಬಹುಪರಾಕ್
ಅಮೃತಧಾರೆ ಧಾರಾವಾಹಿ ನಟ ಜೈದೇವ್ ಆಲಿಯಾಸ್ ರಾಣವ್ ಗೌಡ ವಿಲನ್ ಪಾತ್ರಕ್ಕೆ ಅಭಿಮಾನಿಗಳು ಬಹು ಪರಾಕ್ ಎಂದಿದ್ದಾರೆ. ಪಕ್ಕಾ ವಿಲನ್ ಎನ್ನುವಷ್ಟು ರಗಡ್ ಆಗಿ ನಟಿಸುತ್ತಿದ್ದಾರೆ ರಾಣವ್ ಗೌಡ.
ಝೀ ಕನ್ನಡದ ಅಮೃತಧಾರೆ ಧಾರಾವಾಹಿಯನ್ನ (Amruthadhare serial) ಇಷ್ಟಪಡೋರ ಸಂಖ್ಯೆ ಹೆಚ್ಚಾಗಿಯೇ ಇದೆ. ಫಾಸ್ಟ್ ಆಗಿ ಹೋಗುವಂತಹ ಕತೆಯನ್ನು ಜನರು ಇಷ್ಟಪಟ್ಟು ನೋಡ್ತಾರೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಸಹ ತುಂಬಾನೆ ರಿಯಲ್ ಆಗಿ ನಟಿಸುತ್ತಿದ್ದು, ಎಲ್ಲಾ ಪಾತ್ರಗಳಿಗೂ ಫಾಲೋವರ್ಸ್ ಜಾಸ್ತಿನೇ ಇದ್ದಾರೆ.
ಈ ಧಾರಾವಾಹಿಯಲ್ಲಿ ನಾಯಕಿ ಮತ್ತು ನಾಯಕನ ಪಾತ್ರಗಳು ಎಷ್ಟು ಮುಖ್ಯವಾಗಿದ್ಯೋ? ವಿಲನ್ ಗಳ ಪಾತ್ರವೂ ಅಷ್ಟೇ ಮುಖ್ಯ. ಹಾಗಂತ ಇದ್ರಲ್ಲಿ ಒಬ್ರೇ ವಿಲ್ಲನ್ ಇರೋದು ಅಲ್ಲ, ಶಕುಂತಲಾ ದೊಡ್ಡ ವಿಲನ್ ಆಗಿದ್ರೆ, ಅವರ ಅಣ್ಣ ಶಕುನಿ ಥರ ಫಿಟ್ಟಿಂಗ್ ಇಡೋದ್ರಲ್ಲಿ ಎತ್ತಿದ ಕೈ, ಇನ್ನು ಶಕುಂತಲಾ ಮಗ ಜೈದೇವ್ ಬಗ್ಗೆ ಕೇಳಬೇಕೆ? ಪಕ್ಕಾ ಕೇಡಿ ಜೈದೇವ್ (Jaidev).
ಮನೆಕೆಲಸದಾಕೆ ಮಲ್ಲಿಯನ್ನ ಪ್ರೀತಿಯ ಬಲೆಗೆ ಬೀಸಿ ಕೆಡಿಸಿ, ಆಮೇಲೆ ತಮ್ಮ ಪಾರ್ಥ ಇಷ್ಟಪಡ್ತಿದ್ದ ಅಪೇಕ್ಷಾ ಮೇಲೆ ಕಣ್ಣು ಹಾಕಿ, ಆಕೆಯನ್ನೆ ಮದುವೆಯಾಗೋದಕ್ಕೆ ರೆಡಿಯಾಗಿ, ಕೊನೆಗೆ ಮದುವೆ ದಿನ ಎಲ್ಲಾ ಉಲ್ಟಾ ಹೊಡೆದು ಮಲ್ಲಿಯನ್ನೆ ಮದುವೆಯಾಗುವ ಸಂದರ್ಭ ಸೃಷ್ಟಿಯಾಗಿತ್ತು. ಇಷ್ಟೆಲ್ಲಾ ಆದ್ಮೇಲೂ ತಾನು ಒಳ್ಳೆಯವನಂತೆ ಬಿಲ್ಡಪ್ ಕೊಡ್ತಿದ್ದಾನೆ ಜೈದೇವ್.
ಮುಗ್ಧೆಯಾಗಿರೋ ಮಲ್ಲಿಯನ್ನ ತನ್ನ ಮೋಡಿ ಮಾಡುವ ಮಾತುಗಳ ಮೂಲಕ ಮರಳು ಮಾಡುತ್ತಿರುವ ಜೈದೇವ್, ಆಕೆಯ ಮನಸ್ಸಲ್ಲೀಗ ಭೂಮಿಕಾ ವಿರುದ್ಧ ವಿಷದ ಬೀಜ ಬಿತ್ತೋ ಕೆಲಸ ಮಾಡ್ತಿದ್ದಾನೆ. ಇದರ ಜೊತೆಗೆ ಇನ್ನೊಂದೆಡೆ ಮತ್ತೆ ಮಲ್ಲಿ ಮೋಸ ಮಾಡಿ, ಇನ್ನೊಬ್ಬಳ ಜೊತೆ ಲವ್ವಿ ಡವ್ವಿ ಆಡ್ತಿದ್ದಾನೆ ಜೈದೇವ್.
ತನ್ನ ಮಾತುಗಳ ಮೂಲಕವೆ ಮೋಡಿ ಮಾಡುವ, ತನ್ನ ಕೆಲಸ ಸಾಧಿಸೋಕೆ ಏನು ಬೇಕಾದ್ರೂ ಮಾಡೋ, ಸ್ವಂತ ತಮ್ಮನನ್ನೇ ಸಾಯಿಸೋಕೆ ರೆಡಿ ಇರುವಂತಹ ಜೈದೇವ್ ಪಾತ್ರಕ್ಕೆ ಜೀವತುಂಬುತ್ತಿರುವ ನಟ ರಾಣವ್ ಗೌಡ (Raanav Gowda). ಇವರ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.
ರಾಣವ್ ಪಾತ್ರವನ್ನು ಹೊಗಳಿರುವ ಪ್ರೇಕ್ಷಕರು ಜೈದೇವ್ ನಟನೆ ಎಕ್ಸ್ಟ್ರಾ ಆರ್ಡಿನರಿ (extraordinary acting) ಎಂದಿದ್ದಾರೆ. ಅಷ್ಟೇ ಅಲ್ಲ ನೀವು ಜೆಡಿ ಅಲ್ಲ, ಕೇಡಿ ಕಣೋ, ಏನ್ ಆಕ್ಟಿಂಗ್ ಗುರು ಇವರದು ಜೈ ದೇವ್ ಅಲ್ಲ ರಾವಣ ಇವ್ರು, ಇವರ ವಾಯ್ಸ್, ಡೈಲಾಗ್ ಡೆಲಿವರಿ, ಎಕ್ಸ್ ಪ್ರೆಶನ್ ಎಲ್ಲವೂ ಅದ್ಭುತವಾಗಿರುತ್ತೆ ಎಂದಿದ್ದಾರೆ.
ಒಟ್ಟಲ್ಲಿ ಜೈದೇವ್ ಅಭಿನಯಕ್ಕೆ ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡಿದ್ದು ಜೈದೇವ್ ಒಳ್ಳೆಯ ನಟ, ಆಕ್ಟಿಂಗ್ ಬೆಂಕಿ, ಅತ್ಯುತ್ತಮ ನಟನೆ ಜೆಡಿ. ನೀನು ಸ್ಯಾಂಡಲ್‌ವುಡ್‌ನಲ್ಲಿ ವಿಲನ್ ಪಾತ್ರಕ್ಕೆ ಸೂಕ್ತ ವ್ಯಕ್ತಿ, ನೀವು ಸಿನಿಮಾದಲ್ಲಿ ನಟಿಸಿ ಅಂತಾನೂ ಸಲಹೆ ನೀಡ್ತಿದ್ದಾರೆ ಜನ.
ರಾಣವ್’ಗೆ ಇದೇನೂ ಹೊಸ ಸೀರಿಯಲ್ ಅಲ್ಲ, ಈಗಾಗಲೇ ಕನ್ನದ ಕಿರುತೆರೆಯಲ್ಲಿ (kannada serial) ಹಲವು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ನಟ. ಜೀವನದಿ, ರಾಜಕುಮಾರಿ, ವರಲಕ್ಷ್ಮೀ ಸ್ಟೋರ್ಸ್, ಮತ್ತೆ ವಸಂತ, ಕನ್ಯಾದಾನ ಧಾರಾವಾಹಿಗಳಲ್ಲೂ ಇವರು ನಟಿಸಿದ್ದರು.
ಬಾಲನಟನಾಗಿ (child artist) ಕಿರುತೆರೆಗೆ ಎಂಟ್ರಿ ಕೊಟ್ಟ ರಾಣವ್ ಗೌಡ, ಸುಧಾರಾಣಿ ಜೊತೆ ತುಳಸಿ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ ರಾಣವ್, ಇಂಜಿನಿಯಂರಿಂಗ್ ಓದಿದ್ದು, ಅದನ್ನೂ ಅರ್ಧಕ್ಕೆ ಬಿಟ್ಟು ಮತ್ತೆ ನಟನಾಗಿ ಸೀರಿಯಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಮೃತಧಾರೆಯಲ್ಲಿ ನೆಗೆಟಿವ್ ಶೇಡ್ ನಲ್ಲಿ (negative shade) ಭರ್ಜರಿಯಾಗಿ ಮಿಂಚುತ್ತಿರುವ ರಾಣವ್, ಈಗಾಗಲೇ ವಿರಾಟ್, ಮತ್ತೆ ಬಾ ಉಪೇಂದ್ರ ಮತ್ತು ಶ್ರೀಕಂಠ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮೃತಧಾರೆ ಬಗ್ಗೆ ಹೇಳೋದಾದ್ರೆ ಅಪೇಕ್ಷ ಮತ್ತು ಪಾರ್ಥನಿಗೆ ಕೊಲ್ಲೋದಕ್ಕೆ ಮುಂದಾಗಿದ್ದ ಜೈದೇವ್, ಗೌತಮ್ ದಿವಾನ್ ಕೈಯಲ್ಲಿ ಸಿಕ್ಕಿ ಬೀಳ್ತಾನ ಅನ್ನೋದನ್ನ ಕಾದು ನೋಡಬೇಕಾಗಿದೆ.