ಕಪ್ಪು ಗೌನ್‌ನಲ್ಲಿ ರಾಣಿಯಂತೆ ಮಿಂಚಿದ ನಟಿ ವೈಷ್ಣವಿ ಗೌಡ: ನೀವು ಕಿರುತೆರೆ ಪರಮಸುಂದರಿ ಎಂದ ಫ್ಯಾನ್ಸ್!
ಕನ್ನಡ ಕಿರುತೆರೆಯ ನಟಿ ವೈಷ್ಣವಿ ಗೌಡ, ಕಪ್ಪು ಬಣ್ಣದ ಬ್ಯಾಕ್‌ಲೆಸ್ ಗೌನ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಗಗನ್ ಜೊತೆ ವೈಷ್ಣವಿ ಕಾಣಿಸಿಕೊಂಡಿದ್ದು, ಅವರ ಮದುವೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಕನ್ನಡ ಕಿರುತೆರೆಯ ಸುರಸುಂದರಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi Gowda), ಸದ್ಯ ಸೀತಾ ರಾಮ ಧಾರಾವಾಹಿಯ ಸೀತಾ ಆಗಿ ಜನ ಮನ ಗೆದ್ದಿದ್ದಾರೆ. ವೀಕ್ಷಕರ ಫೇವರಿಟ್ ನಟಿಯಾಗಿರುವ ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿದ್ದಾರೆ. ತಾವು ಯಾವುದೇ ಪಾಟರ್ಇ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಅದಕ್ಕೆಂದು ತಾನು ಸಿಂಗಾರ ಮಾಡಿಕೊಂಡ ಪೋಷಾಕಿನಲ್ಲಿ ಫೋಟೋಗಳನ್ನು ತೆಗಿಸಿ ಅದನ್ನು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳ ಮನ ತಣಿಸುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ತಮ್ಮ ಫೋಟೊ ಶೂಟ್, ವಿಡಿಯೋ, ರೀಲ್ಸ್, ಕಾಮಿಡಿ ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಇನ್ನೂ ಹತ್ತಿರ ಆಗುತ್ತಿದ್ದಾರೆ.
ಮಾಡರ್ನ್ ಡ್ರೆಸ್ ಗೂ ಸೈ, ಟ್ರೆಡಿಷನಲ್ ವೇರ್ ಗೂ ಸೈ ಎನ್ನುವ ವೈಷ್ಣವಿ, ಈ ಬಾರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಬಣ್ಣದ ಸುಂದರವಾದ ಬ್ಯಾಕ್ ಲೆಸ್ ಗೌನ್ ಧರಿಸಿ ಫೋಟೊ ಶೂಟ್ ಮಾಡಿಸಿದ್ದನ್ನ ಶೇರ್ ಮಾಡಿದ್ದಾರೆ. ಈ ಉಡುಪನ್ನು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಧರಿಸಿದ್ದಾಗಿದೆ. ಕಪ್ಪು ಬಣ್ಣ ಜಾಲರಿಯಂತಿರುವ ಗೌನ್ ನಲ್ಲಿ ವೈಷ್ಣವಿ ಗೌಡ ನಿಜವಾಗಿಯೂ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ತುಂಬಾನೆ ಮುದ್ದಾಗಿ ಕಾಣಿಸ್ತೀರ ಅಂತ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರು ವೈಷ್ಣವಿ ನೀವು ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರ. ಈ ಸ್ಟೈಲ್, ಈ ಡ್ರೆಸ್ ನಿಮಗೆ ಪರ್ಫೆಕ್ಟ್ ಆಗಿ ಕಾಣಿಸುತ್ತೆ. ನೀವು ಮಿಲ್ಕಿ ಬ್ಯೂಟಿ ಎನ್ನುವುದಕ್ಕೆ ಈ ಫೋಟೋ ಶೂಟ್ ತಾಜಾ ಉದಾಹರಣೆ ಆಗಿದೆ. ನಿಮ್ಮ ಹುಡುಗ ಈ ಫೋಟೊ ನೋಡಿದ್ರೆ ಪಕ್ಕಾ ಫಿದಾ, ಯಾಕಿಷ್ಟು ಚಂದ ನೀವು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ನೂರಾರು ಅಭಿಮಾನಿಗಳು ಹಾರ್ಟ್ ಇಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ವೈಷ್ಣವಿ ಗೌಡ ವಿಡಿಯೋಗಳು, ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಹೆಚ್ಚಿನ ಜನ ನಟಿಯನ್ನ ಕೇಳೋದೆ ಯಾವಾಗ ಮದ್ವೆ ಆಗ್ತೀರಿ ಅಂತ. ಯಾಕಂದ್ರೆ ವಯಸ್ಸು 32 ಆದ್ರೂ ಇನ್ನೂ ಸಿಂಗಲ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀತಾರಾಮನ ಆನ್ ಸ್ಕ್ರೀನ್ ನಲ್ಲಿ ನೋಡಿ ಖುಷಿ ಪಡೋ ಅಭಿಮಾನಿಗಳು, ಆಫ್ ಸ್ಕ್ರೀನ್ ನಲ್ಲೂ ಗಗನ್ ಮತ್ತು ವೈಷ್ಣವಿ ಜೋಡಿಯಾದರೆ ತುಂಬಾನೆ ಚೆನ್ನಾಗಿರುತ್ತೆ ಎನ್ನುತ್ತಿದ್ದಾರೆ.
ವೈಷ್ಣವಿಯ ಧಾರಾವಾಹಿ ಬಗ್ಗೆ ಹೇಳುವುದಾದರೆ ಸೀತಾ ರಾಮ ಧಾರಾವಾಹಿಯಲ್ಲಿ (Sita Rama serial) ಸಿಹಿಯ ಮುದ್ದಿನ ಸೀತಮ್ಮನಾಗಿ ನಟಿಸುತ್ತಿರುವ ವೈಷ್ಣವಿ ಗೌಡ, ಸದ್ಯಕ್ಕಂತೂ ತನ್ನ ಮಗಳು ಎಲ್ಲಿ ತನ್ನ ಕೈತಪ್ಪಿ ಹೋಗುತ್ತಾಳೋ ಎನ್ನುವ ಚಿಂತೆಯಲ್ಲಿದ್ದಾರೆ. ಮೇಘಶ್ಯಾಮ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಮಗು ಪಡೆಯೋದಕ್ಕೆ ಪ್ರಯತ್ನಿಸಿದ್ದು, ಈಗ ಮಗುವಿನ ಹುಡುಕಾಟವೂ ಅಂತಿಮವಾಗಿದೆ. ಇದೀಗ ಸ್ವತಃ ಸಿಹಿ ತಮ್ಮ ಮಗಳೆಂದು ಗೊತ್ತಾಗಿದ್ದು, ಈಗ ಸಿಹಿಯನ್ನು ಕಾನೂನಾನತ್ಮಕವಾಗಿ ಪಡೆಯಲು ಮುಂದಾಗಿದ್ದಾರೆ. ಇದೀಗ ಶ್ಯಾಮ್‌ಗೆ ರಾಮ್ ಕೂಡ ಮಗು ಹುಡುಕಲು ಸಹಾಯ ಮಾಡಿದ್ದು, ಸಿಹಿಯೇ ತಮ್ಮ ಮಗಳು ಎಂದು ಶ್ಯಾಮನಿಗೆ ತಿಳಿದ ನಂತರ ರಾಮನೇ ತನಗೆ ಮೋಸ ಮಾಡಿದ್ದಾನೆಂದು ತಿಳಿದು ಸ್ನೇಹವನ್ನೂ ಕಡಿದುಕೊಳ್ಳಲು ಮುಂದಾಗಿದ್ದಾನೆ. ಆದರೆ, ಇದೀಗ ಸಿಹಿಗೆ ಕಾರು ಅಪಘಾತ ಆಗಿದ್ದು, ಯಾರ ಮಡಿಲಿಗೆ ಸೇರುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ. ಆದರೆ, ಸಿಹಿ ಸೀತಾಳಿಗೆ ಸೇರಬೇಕು ಎನ್ನುವುದು ವೀಕ್ಷಕರ ಆಶಯವಾಗಿದೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದ ನಿಮಿತ್ತ ಗಗನ್ ಮತ್ತು ವೈಷ್ಣವಿ ಗೌಡ ಅವರನ್ನು ಜೋಡಿಯಾಗಿ ಕೂರಿಸಿ ನಡೆಸಿದ ಕಿರು ಸಂದರ್ಶನದಲ್ಲಿ ಮುಕ್ತವಾಗಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸೀತಾಳಿಗೆ ಸಕಲೇಶಪುರಕ್ಕೆ ರಾಮ್ ಟ್ರಿಪ್ ಹೋದಾಗ ಮಳೆ ಬಂದ್ರೆ ಯಾವ ಹಾಡು ಹಾಡ್ತೀರಿ ಎಂದಾಗ ಸೀತಾ ಪಾತ್ರಧಾರಿ ವೈಷ್ಣವಿ ಅನಿಸುತಿದೆ ಯಾಕೋ ಇಂದು ... ನೀನೇನೇ ನನ್ನವನೆಂದು ಎಂದಿದ್ದಾರೆ. ಅದಕ್ಕೆ ರಾಮ್ ಪಾತ್ರಧಾರಿ ಗಗನ್, ಒಹೊಹೊ ನನ್ನ ಎದೆ ಮೇಲೆ ಕಾಲು ಇಟ್ಟಹಾಗಾಯ್ತು ಎಂದು ತಮಾಷೆ ಮಾಡಿದ್ದಾರೆ. ಆಗ ರಾಮ್‌ಗೆ ಸೀತಾಗೆ ಇನ್ನೊಂದು ಸಾರಿ ಸೀರೆ ಉಡಿಸುವ ಸನ್ನಿವೇಶ ಬಂದ್ರೆ ಯಾವ ಹಾಡು ಹಾಡ್ತೀರಿ ಎಂದಾಗ ಗಗನ್ ಉಡಿಸುವೆ ಜಗದ ಸೀರೆಯಾ ಎಂದು ಕೆಟ್ಟ ದನಿಯಲ್ಲಿ ಹಾಡಿ ಎಲ್ಲರನ್ನೂ ನಗಿಸಿದ್ದಾರೆ. ಕೊನೆಗೆ, ಸೀತಾ ಎಲ್ಲರನ್ನೂ ಬಿಟ್ಟು ದೂರ ಹೋಗ್ಲೇಬೇಕು ಎಂದು ಬಂದಾಗ ಸೀತಾ ರಾಮ್ನ ಮಿಸ್ ಮಾಡಿಕೊರ್ಳ್ತಿದ್ದಾಳೆ, ಹೋಗೋಕೆ ಇಷ್ಟ ಇಲ್ಲ. ಆಗ ರಾಮ್ ಯಾವ ಹಾಡು ಹೇಳ್ತಾನೆ ಎಂದಾಗ ಗಗನ್ ಅವರು, ನನ್ನನ್ನು ಬಿಟ್ಹೋಗ್ಬೇಡಾ ಎಂದು ಹೇಳಿದ್ದಾರೆ.
ವೈಷ್ಣವಿಯೇ ಗಗನ್ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ತಮ್ಮ ಹೊಸ ವಿಡಿಯೋ ಶೇರ್ ಮಾಡಿದ್ದ ವೈಷ್ಣವಿ, ನಿಮ್ಮ ಈಗಿನ ಇಷ್ಟದ ಹಾಡು ಯಾವುದು? ಒಂದೆರಡು ಲೈನ್ ಹೇಳಿ ಎಂದಾಗ, ವೈಷ್ಣವಿ ಮಚಾಲೋ ಮಚಾಲೋ ಹೆಂಗೌಳೆ ನಿಮ್ ಡವ್ ಎಂದಿದ್ದರು. ಇಷ್ಟದ ಜಂಕ್ ಫುಡ್ ಪಾನೀಪುರಿ ಎಂದಿದ್ದಾರೆ. ನಟಿಯಾಗದೇ ಇದ್ದರೆ ಡಾನ್ಸರ್ ಆಗುತ್ತಿದ್ದೆ ಎಂದಿದ್ದರು. ಎಲ್ಲಿಯಾದರೂ ಹೋಗಬೇಕು ಎನ್ನುವುದಾದರೆ ಎಲ್ಲಿಗೆ ಹೋಗುವಿರಿ ಕೇಳಿದ ಪ್ರಶ್ನೆಗೆ ಮಂತ್ರಾಲಯ ಎಂದಿದ್ದರು.
ಮುಂದುವರೆದು ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್ ಜೊತೆ ಎಂದಿದ್ದರು. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದಾರೆ. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್ ಅವ್ರು ವನಜಾಕ್ಷಿ ಎಂದಿದ್ದರು. ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದರು. ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂದಿದ್ದರು.