ಎಲ್ಹೋದ್ರು ಈ ಸೀರಿಯಲ್ ನಟಿಯರು, ಮತ್ತೆ ಬರಲಿ ಅಂತಿದ್ದಾರೆ ಫ್ಯಾನ್ಸ್!
ಒಂದು ಕಾಲದಲ್ಲಿ ಕನ್ನಡ ಸೀರಿಯಲ್ ಜಗತ್ತನ್ನೇ ಆವರಿಸಿಕೊಂಡಿದ್ದ ನಟಿಯರು, ನಂತರ ಸದ್ದಿಲ್ಲದೆ ಕನ್ನಡ ಸೀರಿಯಲ್ ಪ್ರಪಂಚದಿಂದ ಮರೆಯಾದರು. ಇಂದಿಗೂ ಸಹ ಅಭಿಮಾನಿಗಳು ಅವರನ್ನು ಸೀರಿಯಲ್ ಗಳಲ್ಲಿ ಮಿಸ್ ಮಾಡ್ತಿದ್ದಾರೆ. ಆ ನಟಿಯರು ಯಾರು ಅನ್ನೋದನ್ನು ನೋಡೋಣ.

ದೀಪಿಕಾ ದಾಸ್ (Deepika Das)
ನಾಗಿಣಿ ಸೀರಿಯಲ್ ಮೂಲಕ ಮನೆಮಾತಗಿದ್ದ ದೀಪಿಕಾ ದಾಸ್, ಮತ್ತೆ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅಂತರಪಟ ಸೀರಿಯಲ್‌ನಲ್ಲಿ ಒಂದೆರಡು ಎಪಿಸೋಡ್‌ಗಳಲ್ಲಿ ಕಾಣಿಸಿ, ಮತ್ತೆ ಮರೆಯಾದರು. ಬಿಗ್ ಬಾಸ್ ಮೂಲಕ ಜನರಿಗೆ ಹತ್ತಿರವಾಗಿದ್ದರೂ ಸೀರಿಯಲ್‌ಗಳಲ್ಲಿ ಅವರನ್ನು ಜನ ಇಂದಿಗೂ ಮಿಸ್ ಮಾಡ್ತಿದ್ದಾರೆ.
ಅಮೂಲ್ಯ ಗೌಡ (Amulya Gowda)
ಕಮಲಿ ಸೀರಿಯಲ್ ಮೂಲಕ ಕ್ಯಾತಿ ಪಡೆದ ನಟಿ ಅಮೂಲ್ಯ ಗೌಡ. ತಮ್ಮ ಮುಗ್ಧ ಅಭಿನಯ ಮತ್ತು ಸೌಂದರ್ಯದಿಂದಲೇ ಇವರು ಜನ ಮನ ಗೆದ್ದಿದ್ದರು. ಆದರೆ ಕಮಲಿ ಸೀರಿಯಲ್ ಬಳಿಕ ಇವರು ಮತ್ತೆ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು ಸಹ, ಜನರು ಸೀರಿಯಲ್‌ಗಳಲ್ಲಿ ಇವರನ್ನ ಮಿಸ್ ಮಾಡ್ತಿದ್ದಾರೆ.
ಶ್ವೇತಾ ಆರ್ ಪ್ರಸಾದ್ (Shwetha R Prasad)
ಶ್ರೀರಸ್ತು ಶುಭಮಸ್ತು ಮತ್ತು ರಾಧ ರಮಣದಂತಹ ಜನಪ್ರಿಯ ಸೀರಿಯಲ್ ಗಳಲ್ಲಿ ಅದ್ಭುತವಾಗಿ ನಟಿಸಿ, ಕರ್ನಾಟಕದ ಫೆವರಿಟ್ ನಟಿಯಾಗಿದ್ದ ಶ್ವೇತಾ ಆರ್ ಪ್ರಸಾದ್, ತಮ್ಮ ಮೂಲ ಹೆಸರಿಗಿಂತ ರಾಧಾ ಮಿಸ್ ಆಗಿಯೇ ಜನಪ್ರಿಯತೆ ಪಡೆದಿದ್ದರು. ಆದರೆ ಸದ್ಯ ಅವರು ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಮತ್ತೆ ಯಾವಾಗ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಚೈತ್ರಾ ರಾವ್ (Chaitra Rao)
ಜೋಡಿ ಹಕ್ಕಿ ಸೀರಿಯಲ್‌ನಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿ ಚೈತ್ರಾ ರಾವ್, ಬಳಿಕ ತೆರೆ ಮೇಲೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದು ಕಡಿಮೆಯೇ. ಸದ್ಯ ಚೈತ್ರಾ ರಾವ್ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.
ಪಲ್ಲವಿ ಗೌಡ (Pallavi Gowda)
ಕನ್ನಡ, ತೆಲುಗು, ಮಲಯಾಲಂ ಕಿರುತೆರೆಯಲ್ಲಿ ಮಿಂಚುತ್ತಿರುವ ಪಲ್ಲವಿ ಗೌಡ ಅವರನ್ನು ಕನ್ನಡ ಸೀರಿಯಲ್ ಪ್ರೇಕ್ಷಕರು ನಿಜವಾಗಿಯೂ ಮಿಸ್ ಮಾಡ್ತಿದ್ದಾರೆ. ಪಲ್ಲವಿ ಮನೆಯೊಂದು ಮೂರು ಬಾಗಿಲು, ಗಾಳಿಪಟ, ಸೇವಂತಿ ಸೀರಿಯಲ್‌ನಲ್ಲಿ ನಟಿಸಿದ್ದರು. ಇವರ ಸೇವಂತಿ ಪಾತ್ರವನ್ನು ಜನ ಇನ್ನೂ ಮಿಸ್ ಮಾಡ್ತಿದ್ದಾರೆ
ಕಾವ್ಯಾ ಗೌಡ (Kavya Gowda)
ಮೀರಾ ಮಾಧವ, ಗಾಂಧಾರಿ, ಮತ್ತು ರಾಧಾ ರಮಣ ಸೀರಿಯಲ್‌ನಲ್ಲಿ, ಜೊತೆಗೆ ತೆಲುಗು ಸೀರಿಯಲ್‌ಗಳಲ್ಲೂ ನಟಿಸಿ ಜನರ ಮನಸೂರೆಗೊಂಡಿದ್ದ ನಟಿ ಕಾವ್ಯಾ ಗೌಡ, ನಂತರ ಕಿರುತೆರೆಯಿಂದ ದೂರ ಉಳಿದಿದ್ದರು. ಇದೀಗ ಮದುವೆ ಆಗಿ, ತಮ್ಮ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾವ್ಯಾ ಫೋಟೋ ಶೂಟ್ ಮಾಡುತ್ತಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ.
ಕವಿತಾ ಗೌಡ (Kavitha Gowda)
ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಮತ್ತು ವಿದ್ಯಾ ವಿನಾಯಕ ಸೀರಿಯಲ್‌ನಲ್ಲಿ ನಟಿಸಿದ ಜನರ ನೆಚ್ಚಿನ ಚಿನ್ನು ಹೆಚ್ಚಾಗಿ ತಮಿಳು ಸೀರಿಯಲ್ ಮೂಲಕವೇ ಫೇಮಸ್. ನಂತರ ಇವರು ಕನ್ನಡ ಬಿಗ್‌ಬಾಸ್‌ನಲ್ಲೂ ಟಾಪ್ 3 ಕಂಟೆಸ್ಟಂಟ್ ಆಗಿದ್ದರು. ಆದರೆ ಲಕ್ಷ್ಮೀ ಬಾರಮ್ಮದಲ್ಲಿ ಗ್ರಾಮದ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡ ಚಿನ್ನುವನ್ನು ಜನರು ತುಂಬಾನೆ ಮಿಸ್ ಮಾಡ್ತಿದ್ದಾರೆ.