Social Media ಬಳಸದೆ ಜೀವನದಲ್ಲಿ ಸಂತೋಷವಾಗಿದ್ದೆ: ನಟಿ Renu Desai
ದೊಡ್ಡ ಬ್ರೇಕ್ ತೆಗೆದುಕೊಂಡು ಮತ್ತೆ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಮಾಡಿ ತಮಿಳು ನಟಿ.
ಜನಪ್ರಿಯ ತೆಲುಗು ಕಿರುತೆರೆ ನಟಿ ರೇಣು ದೇಸಾಯಿ (Renu Desai) ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡು, ಮತ್ತೆ ಹಿಂದಿರುಗಿದ್ದಾರೆ. ಸೋಷಿಯಲ್ ಡಿಟಾಕ್ಸ್ ಬಗ್ಗೆ ಬರೆದುಕೊಂಡಿದ್ದಾರೆ.
'ಅಂತರವಿದ್ದರೆ ಹೃದಯವನ್ನು ಮೆಚ್ಚುವಂತೆ ಮಾಡುತ್ತಾ? ನನಗೆ ಗೊತ್ತಿರಲಿಲ್ಲ ಸೋಷಿಯಲ್ ಮೀಡಿಯಾ (Social Media) ಇಲ್ಲದೇ, ನಾನು ಆರಾಮ್ ಆಗಿರುವೆ ಹಾಗೂ ಸಂತೋಷವಾಗಿರುವೆ ಎಂದು. ನನ್ನ ಪ್ರೀತಿ ಅಭಿಮಾನಿಗಳನ್ನು ಮಿಸ್ ಮಾಡಿಕೊಂಡೆ,' ಎಂದು ಬರೆದುಕೊಂಡಿದ್ದಾರೆ.
ಕಳೆದ ತಿಂಗಳ ರೇಣು ಮತ್ತು ಪುತ್ರ ಅಕಿರಾಗೆ ಕೊರೋನಾ ಸೋಂಕು (Covid19) ತಗುಲಿತ್ತು. ಅದೇ ಅವರು ಬ್ರೇಕ್ ತೆಗೆದುಕೊಳ್ಳುವುದಕ್ಕೆ ಕಾರಣ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
'ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆದರೂ, ಅಕಿರಾ ಮತ್ತು ನನಗೆ ಕೊರೋನಾ ಪಾಸಿಟಿವ್ ಆಗಿದೆ. ಸಣ್ಣ ಪುಟ್ಟ ಲಕ್ಷಣ ಕಾಣಿಸಿಕೊಂಡಿತ್ತು. ನಾವು ಚೇತರಿಸಿಕೊಳ್ಳುತ್ತಿದ್ದೇವೆ,' ಎಂದು ರೇಣು ಜನವರಿಯಲ್ಲಿ ಬರೆದುಕೊಂಡಿದ್ದರು.
'ಕೊರೋನಾ ಮೂರನೇ ಅಲೆಯನ್ನು ದಯವಿಟ್ಟು ಗಂಭೀರವಾಗಿ ಪರಿಗಣಿಸಿ. ತಪ್ಪದೇ ಮಾಸ್ಕ್ (Mask) ಧರಿಸಿ. ನಾನು ಎರಡು ವ್ಯಾಕ್ಸಿನ್ ಹಾಕಿಸಿಕೊಂಡಿರುವೆ. ಅಕಿರಾ ಈ ವಾರ ಹಾಕಿಸಿಕೊಳ್ಳಬೇಕಿತ್ತು,' ಎಂದು ಹೇಳಿದ್ದಾರೆ.
ರೇಣು ಹೆಸರಿನಲ್ಲಿ ಫೇಕ್ ಟ್ಟಿಟರ್ ಖಾತೆ ತೆರೆಯಲಾಗಿತ್ತು. ನನ್ನ ಹೆಸರಿನಲ್ಲಿ ಯಾರೋ ಖಾತೆ ತೆರೆದು Fraud ಮಾಡುತ್ತಿದ್ದಾರೆ, ಎಂದು ನಟಿ ತಿಳಿಸಿದ್ದರು.
ಡ್ರಾಮಾ ಜ್ಯೂನಿಯರ್ಸ್ ಸೀಸನ್ 5ರ (Drama Juniors) ತೀರ್ಪುಗಾತಿಯಾಗಿ ರೇಣು ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಪುತ್ರಿ ಆರ್ಯ ಇದೀಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.