ಭಾಗ್ಯ ಲುಕ್ ಬದಲಾದ್ರು ತಾಂಡವ್ ಮನಸು ಬದಲಾಗಿಲ್ಲ...ಭಾಗ್ಯ ಲೈಫಲ್ಲಿ ಇನ್ನೊಬ್ಬ ಹೀರೋ ಎಂಟ್ರಿ ಆಗ್ಲಿ ಅಂತಿದ್ದಾರೆ ಜನ!
ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಆದರೆ ಭಾಗ್ಯ ಲುಕ್ ಬದಲಾದರೂ ತಾಂಡವ್ ಮನಸು ಬದಲಾಗಿಲ್ಲ. ವೀಕ್ಷಕರು ಹೇಳ್ತಿದ್ದಾರೆ ಭಾಗ್ಯಳ ಜೀವನದಲ್ಲಿ ಬೇರೊಬ್ಬನ ಎಂಟ್ರಿ ಆಗ್ಲಿ ಅಂತ.
ಭಾಗ್ಯ ಜೀವನದಲ್ಲಿ ಏಳು ಬೀಳುಗಳು ನಡೆಯುತ್ತಿದೆ. ಮನೆಯಲ್ಲಿ ಎಲ್ಲರಿಗೂ ಶ್ರೇಷ್ಠಾ ಮದುವೆಯಾಗಲು ಹೊರಟಿರೋ ತರುಣ್ ಎನ್ನುವ ಹುಡುಗ ತಾಂಡವ್ ಅನ್ನೋದು ಗೊತ್ತಾಗಿದೆ. ಆದಾರೆ ಭಾಗ್ಯಳಿಗೆ (Bhagya) ಮಾತ್ರ ಅದು ತನ್ನ ಗಂಡ ಅನ್ನೋದು ಗೊತ್ತೆ ಆಗಿಲ್ಲ. ವಿಷಯವನ್ನು ಹೇಗಾದರೂ ಮಾಡಿ ತಿಳಿಯಲು ಹೊರಟಿರೋ ಭಾಗ್ಯಳನ್ನು ಪೂಜಾ ಮತ್ತು ಅತ್ತೆ ಕುಸುಮಾ ತಡೆದು ನಿಲ್ಲಿಸಿದ್ದು ಆಗಿದೆ.
ಈಗ ಹೇಗಾದರೂ ಮಾಡಿ ಮಗ ತಾಂಡವ್ ಗೆ ಭಾಗ್ಯ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾಳೆ ಕುಸುಮಾ. ಹಾಗಾಗಿ ಭಾಗ್ಯ ಲುಕ್ ಅನ್ನೇ ಬದಲಾಯಿಸಿದ್ದಾರೆ. ಯಾವಾಗ್ಲೂ ಜಡೆ ಕಟ್ಟಿ, ಯಾವುದೋ ಒಂದು ಹಳೆ ಸೀರೆಯುಡುವ ಭಾಗ್ಯ ಈಗ, ಓಪನ್ ಹೇರ್ ಬಿಟ್ಕೊಂಡು ಸಖತ್ ಸ್ಟೈಲಿಶ್ ಆಗಿದ್ದಾಳೆ.
ಮಕ್ಕಳೂ ಸೇರಿ, ಮನೆಯವರೆಲ್ಲರೂ ಭಾಗ್ಯ ಹೊಸ ಲುಕ್ ಗೆ ಮನ ಸೋತಿದ್ದಾರೆ. ಮೊದಲ ಬಾರಿಗೆ ಭಾಗ್ಯಳನ್ನೂ ಈ ಲುಕ್ ನಲ್ಲಿ ನೋಡಿದ ತಾಂಡವ್ ಕೂಡ ಒಂದು ಬಾರಿ ಕಳೆದು ಹೋಗಿದ್ದ, ಆದರೆ ಪೂಜಾ ತಮಾಷೆ ಮಾಡಿದಾಗ ಮಾತ್ರ, ತಾನು ಏನು ಮಾಡ್ತಿದ್ದೇನೆ ಅನ್ನೋದನ್ನ ಜ್ಞಾಪಿಸಿಕೊಂಡ ತಾಂಡವ್ ಭಾಗ್ಯಳಿಗೆ ಬಯ್ಯೋದಕ್ಕೆ ಶುರು ಮಾಡ್ತಾನೆ.
ಗೂಬೆಗೆ ಬಣ್ಣ ಬಳಿದ್ರೆ, ಅದೇನೂ ನವಿಲಾಗೋದಿಲ್ಲ, ನಾನೇನು ಇವಳನ್ನ ನೋಡಿ ಕಳೆದು ಹೋಗಿಲ್ಲ. ಇದೆಲ್ಲಾ ಏನು ಶೋಕಿ, ಸುಮ್ನೆ ಇರೋ ಕೆಲಸ ಮಾಡೋದಕ್ಕೆ ಆಗಲ್ವಾ? ನಾಲ್ಕು ದೋಸೆ ಮಾಡೋದಕ್ಕೆ ಹೀಗೆಲ್ಲಾ ಮಾಡ್ಬೇಕಾ ಅಂತ ಕೇಳಿದ್ದಾನೆ. ಬಾಯಿಮುಚ್ಚಿಸಲು ಹೋದ ಅಮ್ಮನ ವಿರುದ್ಧ ತಿರುಗಿ ಮಾತನಾಡಿದ್ದಾನೆ ತಾಂಡವ್. ಇದರಿಂದ ಭಾಗ್ಯ ಸೇರಿ ಮನೆಮಂದಿಗೆಲ್ಲಾ ಬೇಸರವಾಗಿದೆ.
ಇದನ್ನೆಲ್ಲಾ ನೋಡಿ ವೀಕ್ಷಕರೂ ಕೂಡ ಅಯ್ಯೋ ಎಂದಿದ್ದು, ಭಾಗ್ಯ ಲೈಫ್ ಅಲ್ಲಿ ಇನ್ನೊಬ್ಬ ಬರಬೇಕು , ಮತ್ತೊಬ್ಬ ನಾಯಕನ ಎಂಟ್ರಿ ಆದಾಗ ಮಾತ್ರ ಈ ತಾಂಡವ್ ಗೆ ಬುದ್ದಿ ಬರೋದು. ಅಲ್ಲಿವರೆಗೆ ಅವನ ಬುದ್ದಿ ಬದಲಾಗಲ್ಲ. ಮದ್ವೆಯಾಗಿ ಎರಡು ಮಕ್ಕಳಾದ್ರೂ ಇಷ್ಟ ಇಲ್ಲ ಅಂತ ಹೇಳ್ತಾನಲ್ಲ ಇವನಿಗೆ ಏನ್ ಹೇಳೋದು ಅಂದಿದ್ದಾರೆ.
ಇನ್ನೂ ಕೆಲವರು ಭಾಗ್ಯ ಬದಲಾಗಿದ್ದು ಸರಿಯಲ್ಲ ಎಂದು ಹೇಳಿ ಆದಕ್ಕೆ ಹೇಳುವುದು...ಕೆಲವರಿಗಾಗಿ ನಾವು ಬದಲಾಗಬಾರದು ಅಂತ. ನಮ್ಮ ಬೆಲೆ ತಿಳಿಯದವರ ಮುಂದೆ, ಯಾವತ್ತೂ ನಮ್ಮತನವನ್ನು ಕಳೆದುಕೊಳ್ಳಲೇ ಬಾರದು ಭಾಗ್ಯಕ್ಕ ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಮತ್ತೊಬ್ಬರು ತಾಂಡವ ಗೂ ಲಕ್ಷ್ಮಿ ನಿವಾಸ ಜಯಂತ್ ಗು ನೀರು ಇಲ್ಲದ ಜಾಗದಲ್ಲಿ ಅಂದ್ರೆ ಮರಳು ಗಾಡಿನಲ್ಲಿ ಬಿಡಬೇಕು ಅಂದಿದ್ದಾರೆ.
ಮತ್ತೆ ಕೆಲವರು ಈ ತಾಂಡವ್ ನರಿ ಬುದ್ದಿ ಸದ್ಯಕ್ಕೆ ಬದಲಾಗೋದಿಲ್ಲ .ಭಾಗ್ಯನೆ ಇಲ್ಲಿ ಬದಲಾಗಿ ಗಂಡನನ್ನ ತಿರಸ್ಕರಿಸಬೇಕು ಅವಾಗ ಇವನಿಗೆ ಬುದ್ಧಿ ಬರುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಭಾಗ್ಯನ ಜೊತೆ ಇನ್ನೊಬ್ಬ ಬಂದು ಫ್ರೆಂಡ್ಲಿಯಾಗಿ ಇದ್ದಾಗ ತಾಂಡವ್ ತನ್ನಷ್ಟಕ್ಕೆ ತಾನೇ ಬದಲಾಗುತ್ತಾನೆ. ಇವನು ಶ್ರೇಷ್ಠ ಜೊತೆ ಇರ್ತಾನೆ ಹಾಗೆ ಭಾಗ್ಯನೂ ಇನ್ನೊಬ್ಬರ ಜೊತೇಲಿದ್ದಾಗ ಅರ್ಥ ಆಗುತ್ತೆ ಎಂದಿದ್ದಾರೆ.