ಬಿಗ್ ಬಾಸ್ ಮನೆಯಲ್ಲಿ ಈ ವಾರ ಮೀಡ್ ವೀಕ್ ಎಲಿಮಿನೇಶನ್, ಯಾರು ಔಟ್?
ಬಿಗ್ ಬಾಸ್ ಮನೆಯಲ್ಲಿ ಈ ವಾರ ಮೀಡ್ ವೀಕ್ ಎಲಿಮಿನೇಶನ್, ಯಾರು ಔಟ್? ಅನ್ನೋ ಕುತೂಹಲ ಹೆಚ್ಚಾಗಿದೆ. ವಾರದ ನಡುವೆ ಹೊರಹೋಗುತ್ತಿರುವ ಸ್ಪರ್ಧಿಯ ಹೆಸರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸ್ಪರ್ಧಿಗಳಿಗೆ ಕಠಿಣವಾಗುತ್ತಿದೆ ಬಿಗ್ ಬಾಸ್ ಆಟ
ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಂತಿಮ ಘಟ್ಟ ತಲುಪುತ್ತಿರುವ ಕಾರಣ ಪ್ರತಿ ಹಂತವೂ ಕಠಿಣವಾಗುತ್ತಿದೆ. ಸ್ಪರ್ಧಿಗಳಿಗೆ ಟಾಸ್ಕ್, ಜನರ ವೋಟಿಂಗ್ ಸೇರಿದಂತೆ ಎಲ್ಲವೂ ಅಷ್ಟೇ ಮುಖ್ಯವಾಗುತ್ತಿದೆ. ಇದರ ನಡುವೆ ಮತ್ತೊಂದು ಆಘಾತ ಎದುರಾಗುತ್ತಿದೆ. ಈ ವಾರದ ಮಧ್ಯದಲ್ಲೇ ಮಿಡ್ ವೀಕ್ ಎಲಿಮಿನೇಶನ್ ನಡೆಯುತ್ತಿದೆ.
ಈ ವಾರದ ಮಧ್ಯೆ ಒಬ್ಬರು ಔಟ್?
ಬಿಗ್ ಬಾಸ್ 19ನೇ ಆವೃತ್ತಿ ಅಂತಿಮ ಹಂತ ತಲುಪಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 19ನೇ ಆವೃತ್ತಿ ಫಿನಾಲೆ ಸಮೀಪ ತಲುಪಿದೆ. ಹೀಗಾಗಿ ಫಿನಾಲೆಗೂ ಮೊದಲು ಈ ವಾರ ಮಿಡ್ ವೀಕ್ ಎಲಿಮಿನೇಶನ್ ನಡೆಯಲಿದೆ. ಸದ್ಯ ಬಿಗ್ ಬಾಸ್ 19ರ ಆವೃತ್ತಿಯಲ್ಲಿ 6 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಒರ್ವ ಸ್ಪರ್ಧಿ ವಾರದ ನಡುವೆ ಎಲಿಮಿನೇಟ್ ಆಗಲಿದ್ದಾರೆ.
ಮನೆಯಲ್ಲಿರುವ 6 ಸ್ಪರ್ಧಿಗಳು
ಬಿಗ್ ಬಾಸ್ 19ರ ಮನೆಯಲ್ಲಿ ಸದ್ಯ ಪ್ರಣಿತ್ ಮೋರೆ, ತಾನ್ಯ ಮಿತ್ತಲ್, ಅಮಾಲ್ ಮಲಿಕ್ ಫರ್ಹಾನ ಭಟ್, ಮಾಲ್ತಿ ಚಹಾರ್ ಹಾಗೂ ಗೌರವ ಖನ್ನ. ಪೈಕಿ ಗೌರವ ಖನ್ನ ಈಗಾಗಲೇ ಫೈನಲಿಸ್ಟ್ ಆಗಿದ್ದಾರೆ. ಇನ್ನುಳಿದ ಐವರಲ್ಲಿ ಒಬ್ಬರು ವಾರದ ನಡುವೆ ಮನೆಯಿಂದ ಹೊರಹೋಗಲಿದ್ದಾರೆ.
ಜನರ ವೋಟ್ ಯಾರಿಗೆ?
ಈಗಾಗಲೇ ವೋಟಿಂಗ್ ಆರಂಭಗೊಂಡಿದ್ದು, ಅಮಾಲ್ ಮಲಿಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇತ್ತ ಪ್ರಣಿತ್ ಮೋರೆ ಹಾಗೂ ಫರ್ಹಾನ ಭಟ್‌ಗೂ ಉತ್ತಮ ವೋಟಿಂಗ್ ಲಭ್ಯವಾಗಿದೆ. ಆದರೆ ಮಾಲ್ತಿ ಚಹಾರ್ ಹಾಗೂ ತಾನ್ಯ ಮಿತ್ತಲ್ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಹಿಂದೆ ಬಿದ್ದಿದ್ದಾರೆ. ಆದರೆ ಈಗಲೇ ವೋಟಿಂಗ್ ಸಮಯ ಮುಗಿದಿಲ್ಲ ಹೀಗಾಗಿ ಸದ್ಯದ ವೋಟಿಂಗ್ ಟ್ರೆಂಡ್ ಅಂತಿಮ ಫಲಿತಾಂಶವಲ್ಲ.
ಜನರ ವೋಟ್ ಯಾರಿಗೆ?
ವರದಿಗಳು ಏನು ಹೇಳುತ್ತಿದೆ
ಮಾಲ್ತಿ ಚಹಾರ್ ಮಿಡ್ ವೀಕ್ ಎಲಿಮಿನೇಶನ್ ಮೂಲಕ ಹೊರಬರುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳುತ್ತಿದೆ. ಆದರೆ ಅಂತಿಮ ಕ್ಷಣದಲ್ಲಿ ಎಲ್ಲವೂ ಬದಲಾಗುವ ಸಾಧ್ಯತೆ ಇದೆ. ತಾನ್ಯ ಮಿತ್ತಲ್ ಹಾಗೂ ಮಾಲ್ತಿ ಚಹಾರ್ ಇಬ್ಬರು ಡೇಂಜರ್ ಝೋನ್‌ನಲ್ಲಿದ್ದಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.
ವರದಿಗಳು ಏನು ಹೇಳುತ್ತಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

