ಸದ್ದು ಮಾಡ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್ ನಟನ ಮದ್ವೆ ಫೋಟೋಸ್; ಯಾರೀ ಜೋಡಿ ಹೇಳಿ?
ಪಂಚೆ, ಶಲ್ಯ ಜೊತೆಗೆ ಹಣೆ ಮೇಲೆ ಮೂರು ನಾಮ ಹಾಕಿದ ಹುಡುಗ, ಕೆಂಪು ಸೀರೆಯಲ್ಲಿ ಸಿಂಪಲ್ ಆಗಿ ರೆಡಿಯಾಗಿರುವ ವಧು. ಇಬ್ಬರ ಮುಖದಲ್ಲೂ ಹೊಸ ಜೀವನದ ಹುಮ್ಮಸ್ಸು. ಯಾರು ಈ ದಂಪತಿಗಳು ಗೆಸ್ ಮಾಡಿ.

ಸೋಶಿಯಲ್ ಮೀಡಿಯಾದಲ್ಲಿ (Social media) ಈ ಜೋಡಿಗಳ ಮದುವೆ ಫೋಟೋ ಮತ್ತೆ ಸದ್ದು ಮಾಡ್ತಿದೆ. ಇವರ ಮದುವೆ ಆಗಿ ಏಳು ವರ್ಷ ಆಗೋದಿದೆ. ಆದ್ರೆ ಫೋಟೋ ಈವಾಗ ಸದ್ದು ಮಾಡ್ತಿದೆ. ಇದರಲ್ಲಿರುವ ವರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಟ, ವಧು ಖ್ಯಾತಿ ಕನ್ನಡ ನಟಿ.
ಯಾರು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರಬೇಕು ಅಲ್ವಾ? ಹೌದು ಇವರು ಬೇರ್ಯಾರು ಅಲ್ಲ, ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕ ತಾಂಡವ್ ಸೂರ್ಯವಂಶಿ. ಅಂದ್ರೆ ಸುದರ್ಶನ್ ರಂಗಪ್ರಸಾದ್. ಇವರು ಈ ಸೀರಿಯಲ್ ನಾಯಕನೂ ಹೌದು, ವಿಲನ್ ಕೂಡ ಹೌದು. ಮತ್ತು ಅವರ ಪತ್ನಿ ಸಂಗಿತಾ ಭಟ್. ಈ ಜೋಡಿಗಳ ಮದ್ವೆ ಫೋಟೊ ಇದೀಗ ಸದ್ದು ಮಾಡ್ತಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi serial) ಭಾಗ್ಯಳ ಬೆನ್ನ ಹಿಂದೆ ಕತ್ತಿ ಮಸೆಯುವ ಬುದ್ಧಿಯುಳ್ಳ, ಮದುವೆಯಾಗಿ 15 ವರ್ಷ ಆಗಿದ್ರೂ ಇನ್ನೊಬ್ಬಳನ್ನು ಪ್ರೀತಿಸಿ, ಅವಳ ಜೊತೆ ಮದುವೆಯ ಪ್ಲ್ಯಾನ್ ಮಾಡ್ತಿರೋ ತಾಂಡವ್ ನಿಜ ಜೀವನದಲ್ಲಿ ತನ್ನ ಪಾತ್ರಕ್ಕೆ ಪಕ್ಕಾ ವಿರುದ್ಧವಾಗಿದ್ದಾರೆ. ಪ್ರೀತಿಸಿ ಮದುವೆಯಾದ ಇವರಿಗೆ ಹೆಂಡ್ತಿ ಅಂದ್ರೆ ಪ್ರಾಣ. ಹಾಗಾಗಿ ಮದ್ವೆಯಾಗಿ ಹಲವು ವರ್ಷ ಆದ್ರೂ ಇನ್ನೂ ಹೊಸ ಜೋಡಿಗಳಂತೆ ಕಾಣ್ತಾರೆ ಇಬ್ಬರು.
ಸಂಗೀತಾ ಮತ್ತು ಸುದರ್ಶನ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮದ್ವೆಗೂ ಮುಂಚೆ ಮೂರು ವರ್ಷ ಪ್ರೀತಿಸಿದ್ದ ಈ ಜೋಡಿ ಮನೆಯವರ ಒತ್ತಾಯದ ಮೇರೆಗೆ ಬೇಗನೆ ಸಪ್ತಪದಿ ತುಳಿದಿದ್ದರು. ಹಾಗಾಗಿಯೇ ಮನೆಯಲ್ಲಿಯೇ ಕುಟುಂಬದವರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸುದರ್ಶನ್ ಬಗ್ಗೆ ಹೇಳೋದಾದ್ರೆ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್, ಒಂದು ತಂಡ ಕಟ್ಟಿಕೊಂಡು ವೀಕೆಂಡ್‌ಗಳಲ್ಲಿ ಸ್ಟಾಂಪ್ ಅಪ್ ಕಾಮಿಡಿ (stand up comedian) ಮಾಡುತ್ತಿದ್ದರು. ನಂತರ ಇವರು ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ಭಾಗ್ಯಲಕ್ಷ್ಮೀ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ರು. ಆದರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ನಂತರ ಕಾಮಿಡಿಗೆ ಸಮಯ ಸಿಗುತ್ತಿಲ್ಲವಂತೆ.
ನಟನೆಯಲ್ಲಿ ಸುದರ್ಶನ್ ಗೆ ಸೀನಿಯರ್ ಆಗಿರುವ ಪತ್ನಿ ಸಂಗೀತಾ ಭಟ್ (Sangeetha Bhat) ಬಳಿ, ಇವರು ನಟನೆ ಬಗ್ಗೆ ಟಿಪ್ಸ್ ಕೇಳ್ತಾರಂತೆ. ಸಂಗೀತಾ ಭಟ್ ಬಗ್ಗೆ ಹೇಳೋದಾದ್ರೆ ಇವರು ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದರು. ನಟನೆಯಿಂದ ಲಾಂಗ್ ಬ್ರೇಕ್ ಪಡೆದಿದ್ದ ಸಂಗೀತ ಇದೀಗ ಮತ್ತೆ ರೂಪಾಂತರ, 48 ಹವರ್ಸ್ ಸಿನಿಮಾಗಳ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.