- Home
- Entertainment
- TV Talk
- ಆಸ್ಪತ್ರೆ ಬೆಡ್ ಮೇಲೆ ಅಮ್ಮ, ಮತ್ತೊಬ್ಬ ಮಹಿಳೆಯೊಂದಿಗೆ ಅಪ್ಪ.. ತೆಲುಗು ಕಿರುತೆರೆಯಲ್ಲಿ ಕನ್ನಡತಿ ಸೌಮ್ಯ ಕಣ್ಣೀರು!
ಆಸ್ಪತ್ರೆ ಬೆಡ್ ಮೇಲೆ ಅಮ್ಮ, ಮತ್ತೊಬ್ಬ ಮಹಿಳೆಯೊಂದಿಗೆ ಅಪ್ಪ.. ತೆಲುಗು ಕಿರುತೆರೆಯಲ್ಲಿ ಕನ್ನಡತಿ ಸೌಮ್ಯ ಕಣ್ಣೀರು!
ಕರ್ನಾಟಕದ ನಟಿ ಹಾಗೂ ನಿರೂಪಕಿ ಸೌಮ್ಯಾ ರಾವ್ ತೆಲುಗು ಕಿರುತೆರೆಯಲ್ಲಿ ಉತ್ತಮ ನಿರೂಪಕಿ ಆಗಿದ್ದಾರೆ. ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ನಿರೂಪಕಿ ಸೌಮ್ಯ ರಾವ್ ಇದೀಗ ಆಕೆಯ ತಂದೆ ಮಾಡಿದ ತಪ್ಪನ್ನು ಬಹಿರಂಗಪಡಿಸಿ ಕಣ್ಣೀರಿಟ್ಟಿದ್ದಾರೆ.

ಕನ್ನಡ ಕಿರುತೆರೆ ಮೂಲಕ ತೆಲುಗು ಕಿರುತೆರೆಗೆ ಹೋಗಿರುವ ನಟಿ ಹಾಗೂ ನಿರೂಪಕಿ ಸೌಮ್ಯ ರಾವ್ ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿಯಾಗಿ ಮಿಂಚಿದ್ದಾರೆ. ಕನ್ನಡದ ಈ ನಟಿ ಧಾರಾವಾಹಿಗಳ ಮೂಲಕ ವೃತ್ತಿ ಜೀವನ ಆರಂಭಿಸಿ ತೆಲುಗಿಗೆ ಹೋಗಿರುವ ಸೌಮ್ಯಾ, ಅನಸೂಯ ಹೊರನಡೆದ ನಂತರ ಆ ಸ್ಥಾನವನ್ನು ಸೌಮ್ಯ ರಾವ್ ಆಕ್ರಮಿಸಿಕೊಂಡಿದ್ದಾರೆ.
ಸೌಮ್ಯ ರಾವ್ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು. ತೆಲುಗು ಸ್ಪಷ್ಟವಾಗಿ ಬರದಿದ್ದರೂ ಕಷ್ಟಪಟ್ಟು ಕಲಿತು ಜನರನ್ನು ರಂಜಿಸಿದರು. ಇದರ ಜೊತೆಗೆ ಹೈಪರ್ ಆದಿಯೊಂದಿಗೆ ಅವರ ಸಂಭಾಷಣೆ, ಸ್ಕಿಟ್‌ಗಳು ಗಮನ ಸೆಳೆದವು. ಇತ್ತೀಚೆಗೆ ಸೌಮ್ಯ ರಾವ್ ಕ್ರೇಜ್ ಕಡಿಮೆಯಾಯಿತು. ಜಬರ್ದಸ್ತ್ ಎಂದರೆ ಮಸಾಲ, ಫನ್ ಕ್ರಿಯೇಟ್ ಮಾಡುವುದು, ಎಂಟರ್‌ಟೈನ್ ಮಾಡುವುದು. ಆದರೆ, ಸೌಮ್ಯ ರಾವ್ ಅಷ್ಟು ಆಕ್ಟಿವ್ ಆಗಿ ಮಾಡಲು ಸಾಧ್ಯವಾಗಲಿಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದರಿಂದ ಅವರನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ತಾನು ನಡೆಸಿಕೊಡುತ್ತಿದ್ದ ಜಬರ್ದಸ್ತ್ ಕಾರ್ಯಕ್ರಮದಲ್ಲಿ ಒಂದೆರಡು ಬಾರಿ ತನ್ನ ತಾಯಿಯನ್ನು ನೆನೆದು ಕಣ್ಣೀರಿಟ್ಟರು. ತನ್ನ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ತನ್ನ ಯಶಸ್ಸನ್ನು ಆಕೆ ನೋಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೀಗ ಮತ್ತೊಮ್ಮೆ ಸೌಮ್ಯ ರಾವ್ ಕಣ್ಣೀರಿಟ್ಟಿದ್ದಾರೆ.
ಇತ್ತೀಚಿನ ಕಾರ್ಯಕ್ರಮದಲ್ಲಿ ಅವರು ಮತ್ತೊಮ್ಮೆ ತಾಯಿಯನ್ನು ನೆನಪಿಸಿಕೊಂಡರು. ಎಲ್ಲರೆದುರು ಭಾವುಕರಾದರು. ಅಮ್ಮ ಅಲ್ಲ ನನ್ನ ಮಗಳು ಎಂದು ಹೇಳಿದರು. ಅಮ್ಮನೊಂದಿಗೆ ಚೆನ್ನಾಗಿ ಫೋಟೋ ಕೂಡ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಮ್ಮ ಚೆನ್ನಾಗಿದ್ದಾಗ ನನ್ನ ಬಳಿ ಫೋನ್ ಇರಲಿಲ್ಲ, ಕ್ಯಾಮೆರಾ ಇರಲಿಲ್ಲ. ಆದರೆ ಆಕೆ ಆಸ್ಪತ್ರೆ ಬೆಡ್ ಮೇಲೆ ಇದ್ದಾಗ ಕ್ಯಾಮೆರಾ ಇತ್ತು, ಫೋನ್‌ಗಳಿದ್ದವು. ಆದರೆ ಒಳ್ಳೆಯ ಫೋಟೋಗಳಿಲ್ಲ ಎಂದು ಸೌಮ್ಯ ರಾವ್ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ಸೌಮ್ಯ ರಾವ್‌ಗೆ, ಅಪ್ಪನ ಬಗ್ಗೆ ಎಂದಿಗೂ ಏಕೆ ಮಾತನಾಡಿಲ್ಲ ಎಂದು ನಿರೂಪಕಿ ರಶ್ಮಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಅಪ್ಪನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳಲು ಏನೂ ಇಲ್ಲ. ಅವರು ದೊಡ್ಡವರಲ್ಲ. ನಮ್ಮಮ್ಮ ಆಸ್ಪತ್ರೆ ಬೆಡ್ ಮೇಲೆ ಇದ್ದಾಗ, ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು ಎಂದು ಹೇಳಿದರು. ಆಕೆಯ ಮಾತುಗಳು ಕಾರ್ಯಕ್ರಮದಲ್ಲಿದ್ದ ಎಲ್ಲರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದವು.
ಇತ್ತೀಚೆಗೆ ಸೌಮ್ಯ ರಾವ್ 'ಶ್ರೀದೇವಿ ಡ್ರಾಮಾ ಕಂಪನಿ' ಹೋಳಿ ವಿಶೇಷ ಸಂಚಿಕೆಯನ್ನು ಮಾಡಿದರು. ಇದರಲ್ಲಿ ಹೈಪರ್ ಆದಿ ಜೊತೆಗೆ ಜಬರ್ದಸ್ತ್ ಕಲಾವಿದರು, ಇತರ ಟಿವಿ ಕಲಾವಿದರು ಕೂಡ ಭಾಗವಹಿಸಿದ್ದರು. ಇದಕ್ಕೆ ಸೌಮ್ಯ ರಾವ್ ಕೂಡ ಬಂದಿದ್ದರು. ಇದರಲ್ಲಿ ತನ್ನ ತಾಯಿಯ ಪ್ರಸ್ತಾಪ ಬಂದಾಗ ಆಕೆ ಹೀಗೆ ಭಾವುಕರಾದರು. ಪ್ರಸ್ತುತ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಎಲ್ಲರ ಗಮನ ಸೆಳೆಯುತ್ತಿದೆ.