- Home
- Entertainment
- TV Talk
- ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ ಬಿಗ್ ಬಾಸ್ ಬೆಡಗಿ ಸೋನು ಗೌಡ… ಹುಡುಗ ದರ್ಶನ್ ಅಭಿಮಾನಿ?!
ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ ಬಿಗ್ ಬಾಸ್ ಬೆಡಗಿ ಸೋನು ಗೌಡ… ಹುಡುಗ ದರ್ಶನ್ ಅಭಿಮಾನಿ?!
ಸೋಶಿಯಲ್ ಮೀಡಿಯಾ ಇನ್’ಫ್ಲುಯನ್ಸರ್ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕವೇ ಸದ್ದು ಮಾಡುತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಗ್ಗೆ ಇದೀಗ ಹೊಸದೊಂದು ವಿಷಯ ವೈರಲ್ ಆಗ್ತಿದೆ. ಈ ಸುದ್ದಿ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ (Social Media) ತಮ್ಮ ವಿವಿಧ ಡ್ಯಾನ್ಸ್ ರೀಲ್ಸ್ ಹಾಗೂ ಪ್ರೊಮೋಷನ್ ಗಳನ್ನು ಮಾಡುತ್ತಲೇ ಸುದ್ದಿಯಾದವರು ಸೋನು ಗೌಡ. ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಜೊತೆಗೆ ಅಭಿಮಾನಿಗಳ ಬಳಗವನ್ನು ಸಹ ಹೆಚ್ಚಿಸಿಕೊಂಡರು.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸೋನು ಗೌಡ, ಬರೋಬ್ಬರಿ 1.1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳ ಮೂಲಕವೇ ಸದ್ದು ಮಾಡ್ತಿರ್ತಾರೆ. ಅದರ ಜೊತೆಗೆ ಪರ್ಸನಲ್ ಲೈಫ್ ಬಗ್ಗೆ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಏನಂದ್ರೆ ಬಿಗ್ ಬಾಸ್ ಮಾಜಿ ಸ್ಪರ್ಧಿ (Bigg Boss Contestant)ಸೋನು ಗೌಡ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅಷ್ಟೇ ಅಲ್ಲ ಇವರು ಮದುವೆಯಾಗುತ್ತಿರುವ ಹುಡುಗ ದರ್ಶನ್ ತೂಗುದೀಪ್ ಅಭಿಮಾನಿ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಯಾವುದೋ ಒಂದು ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸೋನು ಗೌಡ ಹಾಗೂ ಹುಡುಗನ ಫೋಟೊಗಳನ್ನು ಹಂಚಿಕೊಂಡಿದ್ದು, ಇದು ಸದ್ಯ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಸೋನು ಗೌಡ ಇಲ್ಲಿವರೆಗೂ ಏನೂ ಮಾಹಿತಿ ಕೊಟ್ಟಿಲ್ಲ. ಹಾಗಾಗಿ ಈ ಸುದ್ದಿ ನಿಜ ಹೌದೇ? ಅಲ್ಲವೇ ಎನ್ನುವ ಕುರಿತು ಯಾವುದೇ ಸ್ಪಷ್ಟನೆ ಇಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳ ಮದುವೆ ಸುದ್ದಿ ಹರಿದಾಡುತ್ತಲೇ ಇರುತ್ತೆ. ಆದರೆ ಎಲ್ಲವೂ ನಿಜವಾಗಿರಬೇಕಾಗಿಲ್ಲ. ಹಾಗೆಯೇ ಸೋನು ಗೌಡ ಮದುವೆ ಸುದ್ದಿ ಕೂಡ ಸುಳ್ಳಾಗಿರಬಹುದು ಎನ್ನಲಾಗುತ್ತಿದೆ. ಅಥವಾ ನಿಜವಾಗಿಯೇ ಸೋನು ಮದುವೆಯಾಗಲಿದ್ದಾರೆಯೇ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.