MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಒಂದು ಹೊತ್ತು ಊಟಕ್ಕೂ ಕಷ್ಟ, ಈಗ ₹23 ಲಕ್ಷದ ಕಾರು; Instagram ಆದಾಯ ಬಿಚ್ಚಿಟ್ಟ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ

ಒಂದು ಹೊತ್ತು ಊಟಕ್ಕೂ ಕಷ್ಟ, ಈಗ ₹23 ಲಕ್ಷದ ಕಾರು; Instagram ಆದಾಯ ಬಿಚ್ಚಿಟ್ಟ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ

Instagramನಲ್ಲಿ ವಿಡಿಯೋ ಹಾಕಿದರೆ ಸಾಕು, ಲಕ್ಷ ಲಕ್ಷ ಹಣ ಸಂಪಾದಿಸಬಹುದು, ನಿಜಕ್ಕೂ Instagramನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ ಹಣ ಬರುತ್ತದೆಯೇ? ಜನಪ್ರಿಯ ಕನ್ನಡ ಕಂಟೆಂಟ್ ಕ್ರಿಯೇಟರ್ ದಂಪತಿ ತಾರೇಶ್-ಸ್ವಾತಿ ತಮ್ಮ ಅನುಭವದ ಮೂಲಕ ಉತ್ತರ ನೀಡಿದ್ದಾರೆ.

2 Min read
Author : Sushma Hegde
Published : Aug 09 2026, 09:54 AM IST
Share this Photo Gallery
  • FB
  • TW
  • Linkdin
  • Whatsapp
15
Instagramನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ ಹಣ ಬರುತ್ತದೆಯೇ?
Image Credit : Asianet News

Instagramನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ ಹಣ ಬರುತ್ತದೆಯೇ?

Instagramನಲ್ಲಿ ವಿಡಿಯೋ ಹಾಕಿದರೆ ಸಾಕು, ಲಕ್ಷ ಲಕ್ಷ ಹಣ ಸಂಪಾದಿಸಬಹುದು —ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾದಂತೆ ಯುವಜನರಲ್ಲಿ ಈ ರೀತಿಯ ಭಾವನೆ ಸಾಮಾನ್ಯವಾಗಿದೆ. ಆದರೆ ನಿಜಕ್ಕೂ Instagramನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ ಹಣ ಬರುತ್ತದೆಯೇ? ಲಕ್ಷಾಂತರ Views ಬಂದರೆ Instagram ನೇರವಾಗಿ ಹಣ ಪಾವತಿಸುತ್ತದೆಯೇ? ಕಂಟೆಂಟ್ ಕ್ರಿಯೇಟರ್ ಆಗಲು ಎಷ್ಟು ಹೂಡಿಕೆ ಬೇಕು? ಈ ಎಲ್ಲ ಪ್ರಶ್ನೆಗಳಿಗೆ ಜನಪ್ರಿಯ ಕನ್ನಡ ಕಂಟೆಂಟ್ ಕ್ರಿಯೇಟರ್ ದಂಪತಿ ತಾರೇಶ್-ಸ್ವಾತಿ ತಮ್ಮ ಅನುಭವದ ಮೂಲಕ ಉತ್ತರ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಶಸ್ಸು ಕಂಡಿರುವ ಈ ಜೋಡಿ, ತಾವು ಎದುರಿಸಿದ ಕಷ್ಟದ ದಿನಗಳಿಂದ ಹಿಡಿದು ಇಂದು ಪಡೆದಿರುವ ಯಶಸ್ಸಿನವರೆಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Instagram Views ಬಂದರೆ ಹಣ ಸಿಗುತ್ತಾ?

Instagramನಲ್ಲಿ ವಿಡಿಯೋಗೆ ಲಕ್ಷಾಂತರ Views ಬಂದ ಕೂಡಲೇ ನೇರವಾಗಿ ಹಣ ಸಿಗುತ್ತದೆ ಎಂಬುದು ಬಹುತೇಕ ಜನರಲ್ಲಿರುವ ತಪ್ಪು ಕಲ್ಪನೆ. ಕ್ರಿಯೇಟರ್‌ಗಳ ಪ್ರಮುಖ ಆದಾಯದ ಮೂಲಗಳಲ್ಲಿ ಬ್ರ್ಯಾಂಡ್ ಪ್ರಮೋಷನ್ ಕೂಡ ಒಂದು. ಫಾಲೋವರ್ಸ್, ವಿಡಿಯೋಗಳ ರೀಚ್, ಎಂಗೇಜ್‌ಮೆಂಟ್, ಕಂಟೆಂಟ್‌ನ ಸ್ವರೂಪ ಹಾಗೂ ಬ್ರ್ಯಾಂಡ್‌ಗಳ ಅವಶ್ಯಕತೆ ಆಧರಿಸಿ ಪ್ರಮೋಷನ್ ದರ ಬದಲಾಗುತ್ತದೆ. ಉದಾಹರಣೆಗೆ, 1 ಲಕ್ಷ ಫಾಲೋವರ್ಸ್ ಹೊಂದಿರುವ ಕ್ರಿಯೇಟರ್‌ಗೆ ಸಾಮಾನ್ಯ ಪ್ರಮೋಷನ್‌ಗೆ 2,000ರಿಂದ 5,000 ರೂಪಾಯಿವರೆಗೆ ಸಿಗಬಹುದು. ಕೆಲವು ಬ್ರ್ಯಾಂಡ್‌ಗಳು ಹಾಗೂ ಪ್ರಾಡಕ್ಟ್‌ಗಳ ಪ್ರಕಾರ ಈ ಮೊತ್ತ 15,000ರಿಂದ 20,000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು. ಆದರೆ ಬ್ರ್ಯಾಂಡ್ ನೀಡುವ ಸಂಪೂರ್ಣ ಮೊತ್ತವೂ ಕ್ರಿಯೇಟರ್ ಕೈಗೆ ಸೇರುವುದಿಲ್ಲ. ಏಜೆನ್ಸಿ ಅಥವಾ ಮಧ್ಯವರ್ತಿಗಳು ಇದ್ದರೆ ಅವರ ಕಮಿಷನ್ ಕಡಿತಗೊಂಡ ಬಳಿಕ ಉಳಿದ ಹಣ ಕ್ರಿಯೇಟರ್‌ಗೆ ಸಿಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರೆಸಾರ್ಟ್ ಪ್ರಮೋಷನ್‌ಗೆ ಹಣದ ಬದಲು ಫ್ರೀ ಸ್ಟೇ
Image Credit : Asianet News

ರೆಸಾರ್ಟ್ ಪ್ರಮೋಷನ್‌ಗೆ ಹಣದ ಬದಲು ಫ್ರೀ ಸ್ಟೇ

ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳಿಗೆ ರೆಸಾರ್ಟ್, ಹೋಟೆಲ್ ಪ್ರಮೋಷನ್‌ಗಳ ಆಫರ್‌ಗಳು ಕೂಡ ಬರುತ್ತವೆ. ಆದರೆ ಇಂತಹ ಪ್ರಮೋಷನ್‌ಗಳಿಗೆ ಪ್ರತಿಬಾರಿಯೂ ನಗದು ಹಣ ಸಿಗುತ್ತದೆ ಎಂದುಕೊಳ್ಳಬೇಕಿಲ್ಲ. ಕೆಲವು ಸಂದರ್ಭಗಳಲ್ಲಿ ಕ್ರಿಯೇಟರ್‌ಗಳಿಗೆ ಉಚಿತ ವಸತಿ, ಆಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದರ ಬದಲಾಗಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆ ಸ್ಥಳದ ಬಗ್ಗೆ ಕಂಟೆಂಟ್ ಹಂಚಿಕೊಳ್ಳುತ್ತಾರೆ.

1K ಫಾಲೋವರ್ಸ್ ಇದ್ದರೂ ಹಣ ಗಳಿಸಬಹುದು

ನನ್ನ ಬಳಿ ಫಾಲೋವರ್ಸ್ ಕಡಿಮೆ, ಹಾಗಾಗಿ ಹಣ ಗಳಿಸಲು ಸಾಧ್ಯವಿಲ್ಲ ಎನ್ನುವುದು ಹೊಸ ಕ್ರಿಯೇಟರ್‌ಗಳ ಮತ್ತೊಂದು ತಪ್ಪು ಕಲ್ಪನೆ. ಫಾಲೋವರ್ಸ್ ಸಂಖ್ಯೆ ಕಡಿಮೆ ಇದ್ದರೂ Affiliate Marketing ಮೂಲಕ ಆದಾಯ ಗಳಿಸುವ ಅವಕಾಶವಿದೆ. Wishlinkನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಕ್ರಿಯೇಟರ್‌ಗಳು ತಾವು ಬಳಸುವ ಅಥವಾ ಧರಿಸುವ ಉತ್ಪನ್ನಗಳ ಲಿಂಕ್ ಹಂಚಿಕೊಳ್ಳಬಹುದು. ಉದಾಹರಣೆಗೆ, ವಿಡಿಯೋದಲ್ಲಿ ಧರಿಸಿರುವ ಬಟ್ಟೆ ಅಥವಾ ಬಳಸುತ್ತಿರುವ ಟ್ರೆಂಡಿಂಗ್ ಪ್ರಾಡಕ್ಟ್‌ನ ಲಿಂಕ್ ಅನ್ನು ಶೇರ್ ಮಾಡಬಹುದು. ವೀಕ್ಷಕರು ಆ ಲಿಂಕ್ ಮೂಲಕ ಉತ್ಪನ್ನ ಖರೀದಿಸಿದರೆ ಕ್ರಿಯೇಟರ್‌ಗೆ ಕಮಿಷನ್ ಸಿಗುತ್ತದೆ. ಕೆಲವು ಸಂದರ್ಭಗಳಲ್ಲಿ ಉತ್ಪನ್ನದ ಮಾರಾಟದ ಮೇಲೆ 7%ವರೆಗೆ ಕಮಿಷನ್ ದೊರೆಯಬಹುದು. ಕಂಟೆಂಟ್‌ಗೆ ಉತ್ತಮ ರೀಚ್ ಸಿಕ್ಕರೆ ಆರಂಭಿಕ ಹಂತದಲ್ಲೇ ತಿಂಗಳಿಗೆ 10,000ರಿಂದ 20,000 ರೂಪಾಯಿವರೆಗೆ ಗಳಿಸುವ ಅವಕಾಶವೂ ಇರಬಹುದು.

35
ಕಂಟೆಂಟ್ ಕ್ರಿಯೇಷನ್‌ಗೆ ದುಬಾರಿ ಕ್ಯಾಮೆರಾ ಬೇಕಾ?
Image Credit : Asianet News

ಕಂಟೆಂಟ್ ಕ್ರಿಯೇಷನ್‌ಗೆ ದುಬಾರಿ ಕ್ಯಾಮೆರಾ ಬೇಕಾ?

ಹೊಸಬರು ಕಂಟೆಂಟ್ ಕ್ರಿಯೇಷನ್ ಆರಂಭಿಸುವ ಮುನ್ನವೇ ದುಬಾರಿ ಕ್ಯಾಮೆರಾ, ಲೈಟಿಂಗ್ ಸೆಟ್‌ಅಪ್ ಸೇರಿದಂತೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ತಾರೇಶ್-ಸ್ವಾತಿ ಹೇಳುವಂತೆ, ಆರಂಭದಲ್ಲೇ ದೊಡ್ಡ ಮೊತ್ತ ಹೂಡಿಕೆ ಮಾಡುವ ಅಗತ್ಯವಿಲ್ಲ. ಒಂದು ಉತ್ತಮ ಸ್ಮಾರ್ಟ್‌ಫೋನ್, ಸುಮಾರು ರೂಪಾಯಿ 800ರ ಟ್ರೈಪಾಡ್ ಹಾಗೂ ಮೈಕ್ ಇದ್ದರೆ ಆರಂಭಿಸಲು ಸಾಕಾಗಬಹುದು. ಮೊದಲು ಕಂಟೆಂಟ್‌ನ ಗುಣಮಟ್ಟ, ಕಥೆ ಹೇಳುವ ಶೈಲಿ ಹಾಗೂ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ.

45
ಕೆಲಸ ಬಿಟ್ಟು ಸೋಶಿಯಲ್ ಮೀಡಿಯಾಗೆ ಬರಬೇಡಿ
Image Credit : Asianet News

ಕೆಲಸ ಬಿಟ್ಟು ಸೋಶಿಯಲ್ ಮೀಡಿಯಾಗೆ ಬರಬೇಡಿ

ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ವಿಡಿಯೋಗಳನ್ನು ನೋಡಿ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಷನ್‌ಗೆ ಧುಮುಕುವುದು ಅಪಾಯಕಾರಿ ನಿರ್ಧಾರವಾಗಬಹುದು. ಮೊದಲು ಕೈಯಲ್ಲೊಂದು ಸ್ಥಿರ ಆದಾಯದ ಮೂಲವಿಟ್ಟುಕೊಂಡು, ಪಾರ್ಟ್‌ಟೈಮ್ ಆಗಿ ಕಂಟೆಂಟ್ ಕ್ರಿಯೇಷನ್ ಆರಂಭಿಸುವುದು ಉತ್ತಮ ಎಂಬುದು ಅವರ ಸಲಹೆ. ಕಂಟೆಂಟ್‌ನಿಂದ ನಿರಂತರ ಆದಾಯ ಬರಲು ಆರಂಭಿಸಿದ ನಂತರವೇ ಅದನ್ನು ಫುಲ್‌ಟೈಮ್ ವೃತ್ತಿಯನ್ನಾಗಿ ಪರಿಗಣಿಸಬಹುದು.

55
ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವುದೆಲ್ಲ ಸತ್ಯವಲ್ಲ
Image Credit : Asianet News

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವುದೆಲ್ಲ ಸತ್ಯವಲ್ಲ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು Challenge, Comment Challenge ಅಥವಾ Promotion Strategy ನೈಜವಾಗಿರುತ್ತದೆ ಎಂದು ನಂಬಬಾರದು. ವೀಕ್ಷಣೆ ಮತ್ತು ಎಂಗೇಜ್‌ಮೆಂಟ್ ಹೆಚ್ಚಿಸಲು ಕೆಲವೊಮ್ಮೆ ಸ್ಕ್ರಿಪ್ಟೆಡ್ ಕಂಟೆಂಟ್ ಮತ್ತು ಹೈಪ್ ಕ್ರಿಯೇಟ್ ಮಾಡುವ ತಂತ್ರಗಳನ್ನು ಬಳಸಲಾಗುತ್ತದೆ. ಹೀಗಾಗಿ Instagramನಲ್ಲಿ ಕಾಣಿಸುವ ಯಶಸ್ಸನ್ನು ನೋಡಿ ಅದೇ ರೀತಿಯಲ್ಲಿ ತಕ್ಷಣ ಹಣ ಸಂಪಾದಿಸಬಹುದು ಎಂದುಕೊಳ್ಳುವುದು ಸರಿಯಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಯೂಟ್ಯೂಬರ್
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
Latest Videos
Recommended Stories
Recommended image1
ಸೀರಿಯಲ್‌‌ನಲ್ಲಿ ನಟಿಸೋ ಆಸೆಯಿಂದ 900 ಕಿ.ಮೀ ಪ್ರಯಾಣಿಸಿದ ಅಪ್ರಾಪ್ತ, ಮಿಸ್ಸಿಂಗ್ ಹುಡುಗ ಏನಾದ?
Recommended image2
Shravani Subramanya Serial ಮುಗಿಯುತ್ತಲೇ ಆ ಹುಡುಗಿಯ ನೆನಪು ಶೇರ್​ ಮಾಡಿದ ಸುಬ್ಬು
Recommended image3
ಮುದುಕ-ಮುದುಕಿಯಾದ ಅಮೂಲ್ಯ ಗೌಡ & ನಿರಂಜನ್; ರಿಷಿ ಸರ್ ಎಷ್ಟು ರೊಮ್ಯಾಂಟಿಕ್ ಅಲ್ಲವಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved