ಫಾರಿನ್ ಹುಡುಗನನ್ನು ಮದುವೆಯಾಗುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ (Sidharth Malhotra and Kiara Advani) ಅವರಂತೆ ನಟಿ ಕಮ್ ರಾಜಕಾರಣಿ ಸ್ಮೃತಿ ಇರಾನಿ ( Smriti Irani) ಅವರ ಪುತ್ರಿ ಶನೆಲ್ ಇರಾನಿ (Shanel Irani) ಮತ್ತು ಅರ್ಜುನ್ ಭಲ್ಲಾ ಕೂಡ ರಾಜಸ್ಥಾನದಲ್ಲಿ ಮದುವೆಯಾಗಲಿದ್ದಾರೆ. ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿಮ್ಸಾರ್ ಕೋಟೆಯಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ. ಅಷ್ಟಕ್ಕೂ ಸ್ಮೃತಿ ಇರಾನಿ ಅವರ ಪುತ್ರಿ ಕಯ ಹಿಡಿಯಲಿರುವ ಹುಡುಗ ಯಾರು?

ಕೇಂದ್ರ ಸಚಿವೆ ಮತ್ತು ಟಿವಿ ನಟಿ ಸ್ಮೃತಿ ಇರಾನಿ ಅವರ ಪುತ್ರಿ ಶನೆಲ್ ಇರಾನಿ ಅವರು ತಮ್ಮ ಭಾವಿ ಪತಿ ಅರ್ಜುನ್ ಭಲ್ಲಾ ಅವರೊಂದಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಇಬ್ಬರೂ ನಿಶ್ಚಿತಾರ್ಥದ ವಿಧಿವಿಧಾನಗಳನ್ನು ನೆರವೇರಿಸಿದ್ದರು.
ಇದರ ನಡುವೆ ಶನೆಲ್ ಮತ್ತು ಆಕೆಯ ನಿಶ್ಚಿತ ವರ ಅರ್ಜುನ್ ಭಲ್ಲಾ ಬಗ್ಗೆ ಅಂತರ್ಜಾಲದಲ್ಲಿ ನಿರಂತರ ಹುಡುಕಾಟ ನಡೆಯುತ್ತಿದೆ. ಅಷ್ಷಕ್ಕೂ ಸ್ಮೃತಿಯ ಭಾವಿ ಅಳಿಯ ಯಾರು, ಏನು ಮಾಡುತ್ತಾರೆ ಗೊತ್ತಾ?
ಸ್ಮೃತಿ ಇರಾನಿ ಅವರ ಅಳಿಯ ಅರ್ಜುನ್ ಕೆನಡಾದಲ್ಲಿ ನೆಲೆಸಿದ್ದಾರೆ. ಶೆನಲ್ ಅವರ ಭಾವಿ ಪತಿ ಅರ್ಜುನ್ ಭಲ್ಲಾ ಭಾರತೀಯರಲ್ಲ. ಕೆನಡಾದ ಟೊರೊಂಟೊದಲ್ಲಿ ಜನಿಸಿದ ಅರ್ಜುನ್ ತನ್ನ ಕುಟುಂಬದೊಂದಿಗೆ ಅಲ್ಲಿ ವಾಸಿಸುತ್ತಾರೆ.
ಹಲವು ಸಿನಿ ಸೆಲಬ್ರೆಟಿಗಳಂತೆ ಸ್ಮೃತಿ ಇರಾನಿ ಅವರ ಪುತ್ರಿ ಶನೆಲ್ ಇರಾನಿ ಮತ್ತು ಅರ್ಜುನ್ ಭಲ್ಲಾ ಕೂಡ ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ. ನಾಗೌರ್ ಜಿಲ್ಲೆಯ 500 ವರ್ಷಗಳಷ್ಟು ಹಳೆಯ ಖಿಮ್ಸಾರ್ ಕೋಟೆಯಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ.
ಈಗಾಗಲೇ ಮದುವೆಯ ಪೂರ್ವ ವಿಧಿಗಳಾದ ಮೆಹಂದಿ,ಸಂಗೀತ್ ಮತ್ತು ಹಳ್ದಿ ಕಾರ್ಯಕ್ರಮಗಳು ಮುಗಿದಿದ್ದು. ಇಂದು ಜೋಡಿ ಸಪ್ತಪದಿ ತುಳಿಯಲಿದ್ದಾರೆ. ರಾಜಸ್ಥಾನದಲ್ಲಿ ನಡೆಯಲಿರುವ ಈ ರಾಯಲ್ ವೆಡ್ಡಿಂಗ್‌ಗೆ ಮನರಂಜನಾ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.