ಬೋಲ್ಡ್ ಲುಕ್ಕಲ್ಲಿ ಕಾಣಿಸಿಕೊಂಡ ಸರಿಗಮಪ ಲಿಟಲ್ ಚಾಂಪ್ಸ್ ಅಂಕಿತಾ ಕುಂಡು
ಸರಿಗಮಪ ಲಿಟಲ್ ಚಾಂಪ್ಸ್ ಮೂಲಕ ಜನಮನ ಗೆದ್ದಿದ್ದ, ಬೆಂಗಾಲಿ ಮೂಲದ ಕರ್ನಾಟಕದ ಹುಡುಗಿ ಅಂಕಿತಾ ಕುಂಡು ಹೊಸ ಫೋಟೋ ಶೂಟ್ ಮಾಡಿಸಿದ್ದು, ವೈರಲ್ ಆಅಗುತ್ತಿದೆ.
ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ (saregamapa little champs) ರಿಯಾಲಿಟಿ ಶೋ ಮೂಲಕ ಮಿಂಚಿದ್ದ ಗಾಯಕಿ ಅಂಕಿತಾ ಕುಂಡು, ತಮ್ಮ ಸುಮಧುರ ಕಂಠದ ಮೂಲಕ ಕರುನಾಡಿನಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.
ಅಮಿತಾಬ್ ಕುಂಡು ಮತ್ತು ಸುರಶ್ರೀ ಕುಂಡು ಪುತ್ರಿಯಾಗಿರುವ ಅಂಕಿತಾ ಕುಂಡು ಮೂಲತಃ ಬೆಂಗಾಳಿ ಕುಟುಂಬದವರು. ಇವರು ಹುಟ್ಟಿದ್ದು ದೆಹಲಿಯಲ್ಲಿ, ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ. ಸರಿಗಮಪ ಮೂಲಕ ಕನ್ನಡ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕನ್ನಡವೇ ಬಾರದ ಇವರು, ಮುಂದೆ ಕನ್ನಡದ ಅದೆಷ್ಟೋ ಗೀತೆಗಳಿಗೆ ಜೀವ ತುಂಬಿ ಹಾಡಿ ಮನೆಮಾತಾದರು.
2015 ರಲ್ಲಿ ಝೀ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಭಾಗವಹಿಸಿದ ಇವರು ಮೊದಲ ರನ್ನರ್ ಅಪ್ (runner up) ಆಗಿದ್ದರು. ಇದಲ್ಲದೆ 2017 ರಲ್ಲಿ ಕಲರ್ಸ್ ಟಿವಿಯಲ್ಲಿ ಪ್ರಸಾರವಾದ ರೈಸಿಂಗ್ ಸ್ಟಾರ್ ನಲ್ಲೂ ಭಾಗವಹಿಸಿದ್ದರು.
ಸೋಶಿಯಲ್ ಮೀಡೀಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿರುವ ಅಂಕಿತಾ ಕುಂಡು, ತಮ್ಮ ಫೋಟೋಗಳು, ಹೊಸ ಹೊಸ ಹಾಡುಗಳು, ಆಲ್ಬಂ ಸಾಂಗ್ ಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ರಾಜ್ಯದ ವಿವಿಧೆಡೆಗಳಲ್ಲಿ ಇವರು ಹಲವಾರು ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ.
ಅಂಕಿತಾ ಅಪ್ಪುಗೆ, ಜಗತ್ ಕಿಲಾಡಿ, 5ಜಿ ಎಂಬ ಆಲ್ಬಂ ಸಾಂಗ್ ಗಳನ್ನು ಸಹ ಹಾಡಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾದಲ್ಲೂ ಇವರು ಹಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಅವರು ಮಾಹಿತಿ ನೀಡುತ್ತಿರುತ್ತಾರೆ.
ಅಂಕಿತಾ ಲುಕ್ ಸಂಪೂರ್ಣ ಚೆಂಜ್ ಆಗಿದ್ದು, ಬಾಬ್ ಕಟ್ ಮಾಡಿಸಿಕೊಂಡು, ಟಾಮ್ ಬಾಯ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂಕಿತಾ ಸದ್ಯ ಫೋಟೋ ಶೇರ್ ಮಾಡಿದ್ದು, ಬೋಲ್ಡ್ ಫೋಟೊ ಶೂಟ್ ನೋಡಿ ನೆಟ್ಟಿಗರೇ ಶಾಖ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಬ್ಲ್ಯಾಕ್, ಹೈ ಸ್ಲಿಟ್ ಗೌನ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಮತ್ತೆ ಕ್ರಾಪ್ ಟಾಪ್ ಧರಿಸಿ ಫೋಟೋ ಶೇರ್ ಮಾಡಿದ್ದು, ಯಾಕ್ ತಾಯಿ ಶಾರದೆ ಆಗಿದ್ದೋಳು ಡಿಸ್ಕೊ ಶಾಂತಿ ತರ ಆಡ್ತಿದೀಯಾ ಎಂದು ಕಾಮೆಂಟ್ ಮಾಡಿದ್ದಾರೆ.