ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶ್ವೇತಾ ಚೆಂಗಪ್ಪ: ಮಾಡರ್ನ್ ಡ್ರೆಸ್ಸಲ್ಲಿರೋ ನಟಿ ಅಂದಕ್ಕೆ ಸೋತ ಫ್ಯಾನ್ಸ್
ನಟಿ, ನಿರೂಪಕಿಯಾಗಿ ಮಿಂಚುತ್ತಿರುವ ಮಡಿಕೇರಿಯ ಬೆಡಗಿ ಶ್ವೇತಾ ಚೆಂಗಪ್ಪ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿ ಸಂಭ್ರಮಿಸಿದ್ದಾರೆ.
ಕನ್ನಡ, ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಯಾಗಿ, ನಿರೂಪಕಿಯಾಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ಶ್ವೇತಾ ಚೆಂಗಪ್ಪ (Shwetha Changappa), ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಥೈಲ್ಯಾಂಡ್ ಗೆ ತೆರಳಿ ಎಂಜಾಯ್ ಮಾಡ್ತಿದ್ದಾರೆ.
ಪ್ರತಿವರ್ಷ ತಮ್ಮ ಆನಿವರ್ಸರಿ ದಿನ ಶ್ವೇತಾ ತಮ್ಮ ಪತಿ, ಮಗ ಮತ್ತು ಫ್ಯಾಮಿಲಿ ಜೊತೆ ದೇಶ ವಿದೇಶಗಳಿಗೆ ತೆರಳಿ ಅಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು (wedding anniversary) ಸಂಭ್ರಮಿಸುತ್ತಾರೆ.
ಈ ಬಾರಿ ಥೈಲ್ಯಾಂಡ್ ಗೆ ತೆರಳಿರುವ ಶ್ವೇತಾ ಅಲ್ಲಿನ ದ್ವೀಪವೊಂದರಲ್ಲಿ ಸುಡು ಬಿಸಿಲಿನಲ್ಲಿ ಎಂಜಾಯ್ ಮಾಡುತ್ತಿದ್ದು, ತಮ್ಮ ಪತಿಯ ಜೊತೆಗಿರುವ ಮುದ್ದಾದ ಫೋಟೋವೊಂದನ್ನು ನಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಗಂಡನಿಗೆ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ.
ಪತಿ ಕಿರಣ್ ಅಪ್ಪಚ್ಚು ವೈಟ್ ಆಂಡ್ ವೈಟ್ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರೆ, ಶ್ವೇತಾ ಬಿಳಿ ಬಣ್ಣದ ಮಿನಿ ಸ್ಕರ್ಟ್, ಕ್ರಾಪ್ ಟಾಪ್ ಧರಿಸಿ, ಕಣ್ಣಿಗೊಂದು ಕಪ್ಪು ಗಾಗಲ್ಸ್ ಧರಿಸಿ ಮಿಂಚಿದ್ದಾರೆ. ಈ ಅವತಾರದಲ್ಲಿ ತುಂಬಾನೆ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣುವ ಶ್ವೇತಾ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶ್ವೇತಾ ತಮ್ಮ ಫೋಟೋ ಜೊತೆಗೆ ಹ್ಯಾಪಿ ಆನಿವರ್ಸರಿ ಟು ಅಸ್, ನಾನು ಭೇಟಿ ಮಾಡಿದ ವ್ಯಕ್ತಿಗಳಲ್ಲಿ ತುಂಬಾ ವಿನಮ್ರವಾಗಿರೋ (humble person) ವ್ಯಕ್ತಿ ನೀವು, ಎಲ್ಲದಕ್ಕೂ ಥ್ಯಾಂಕ್ಯೂ, ಲೋಡ್ಸ್ ಆಫ್ ಲವ್ ಎಂದು ಬರೆದುಕೊಂಡು ತಮ್ಮ ಪ್ರೀತಿಯನ್ನು ತಿಳಿಸಿದ್ದಾರೆ.
ಈ ಮುದ್ದಾದ ಜೋಡಿಗೆ ಕಿರುತೆರೆ ಸ್ನೇಹಿತರು, ಅಭಿಮಾನಿಗಳು ಸೇರಿ ಹಲವರು ಶುಭ ಕೋರಿದ್ದಾರೆ. ಇನ್ನೂ ಹಲವರು ಶ್ವೇತಾ ಅಂದವನ್ನು ಹೊಗಳಿದ್ದಾರೆ. ನೀವಿನ್ನು ಸ್ಕೂಲ್ ಗೆ ಹೋಗೊ ಹುಡುಗಿ ತರ ಇದ್ದೀರಿ. ಇಬ್ಬರ ಜೋಡಿ ತುಂಬಾನೆ ಚೆನ್ನಾಗಿದೆ. ಯಾವಾಗ್ಲೂ ಖುಷಿಯಾಗಿರಿ ಎಂದೆಲ್ಲಾ ಹಾರೈಸಿದ್ದಾರೆ.
2003 ರಲ್ಲಿ ಕಾದಂಬರಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಚೆಂಗಪ್ಪ, ನಂತರ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಸಿನಿಮಾಗಳಲ್ಲೂ ಶ್ವೇತಾ ಅಭಿನಯಿಸಿದ್ದಾರೆ. ಬಿಗ್ ಬಾಸ್ ಸೀಸನ್ 2 ರಲ್ಲೂ ಭಾಗಿಯಾಗಿದ್ದರು. ಇನ್ನು ನಿರೂಪಕಿಯಾಗಿರೂ ಶ್ವೇತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.