22 ವರ್ಷದ ಮಗಳಿರೋ ಈ ನಟಿಯನ್ನ ನೋಡಿದ್ರೆ ಈಗ್ಲೂ ಜನ ಫಿದಾ ಆಗೋದು ಗ್ಯಾರಂಟಿ
ಏಜಿಂಗ್ ಲೈಕ್ ಎ ಫೈನ್ ವೈನ್ (ageing like fine wine) ಅನ್ನೋ ನಾಲ್ನುಡಿ ನೀವು ಕೇಳಿರಬಹುದು. ಅದು ಹಿಂದಿ ಕಿರುತೆರೆಯ ಗ್ಲಾಮರಸ್ ನಟಿ ಶ್ವೇತಾ ತಿವಾರಿಗೆ ಹೇಳಿ ಮಾಡಿಸಿದಂತಿದೆ. ಅಂತಹ ಸೌಂದರ್ಯ ಹೊಂದಿರೋ ನಟಿಯ ಗ್ಲಾಮರ್, ಡಯಟ್, ಫಿಟ್ನೆಸ್ ಬಗ್ಗೆ ಸ್ವಲ್ಪ ಮಾತನಾಡೋಣ.
ಮುಖ್ಯವಾಗಿ ಹಿಂದಿ ಕಿರುತೆರೆಯಲ್ಲಿ (Hindi serial) ಜನಪ್ರಿಯತೆ ಪಡೆದಿರುವ ನಟಿ ಶ್ವೇತಾ ತಿವಾರಿ ಅವರ ಇನ್ ಸ್ಟಾಗ್ರಾಂ ಪೋಸ್ಟ್ ನೋಡಿದ್ರೆ, ಬಿಟ್ಟಕಣ್ಣು ಬಿಟ್ಟಂತೆ ಇರಬೇಕಾಗುತ್ತೆ. ಯಾಕಂದ್ರೆ ಇವರು ತನ್ನ ಸೌಂದರ್ಯವನ್ನು ತೋರಿಸುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಆಕರ್ಷಿಸಿದೆ.
42 ವರ್ಷದ ಶ್ವೇತಾ ತಿವಾರಿ (Shweta Tiwari) ಇಬ್ಬರು ಮಕ್ಕಳ ತಾಯಿಯೂ ಹೌದು. ಈಕೆ ತನ್ನ ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್ ಎರಡನ್ನೂ ಸಹ ಚೆನ್ನಾಗಿಯೇ ಮ್ಯಾನೇಜ್ ಮಾಡುತ್ತಿದ್ದಾರೆ, ಜೊತೆಗೆ ತನ್ನ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಸಹ ಇವರು ಹಿಂದೆ ಬಿದ್ದಿಲ್ಲ. ಅದನ್ನು ಇವರು ಸೋಶಿಯಲ್ ಮೀಡೀಯಾ ನೋಡಿದ್ರೇನೆ ತಿಳಿಯುತ್ತೆ.
ಶ್ವೇತಾ 2000ನೇ ಇಸವಿಯಲ್ಲಿ ಕಿರುತೆರೆಯನ್ನು ಆಳುತ್ತಿದ್ದರು. ಇವರು ನಟಿಸಿದ ‘ಕಸೌಟಿ ಜಿಂದಗೀ ಕೆ’ ಸೀರಿಯಲ್ ಎಷ್ಟೊಂದು ಹಿಟ್ ಆಗಿತ್ತು ಎಂದರೆ ಮನೆ ಮನೆಯಲ್ಲೂ ಇವರಿಗೊಬ್ಬ ಅಭಿಮಾನಿ ಹುಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಇವರು ಹಲವಾರು ರೀತಿಯ ದೈಹಿಕ ಬದಲಾವಣೆಗಳನ್ನು ಕಂಡಿದ್ದರು. ಮತ್ತೆ ವರ್ಕ್ ಔಟ್ ಡಯಟ್ ಮೂಲಕ ಇಂದಿಗೂ ಸಹ ಅದೇ ಚಾರ್ಮ್ ಉಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ (social media sensation) ಸೃಷ್ಟಿಸುತ್ತಿದ್ದಾರೆ ಈ ನಟಿ.
ಇತ್ತೀಚೆಗೆ, ತಿವಾರಿ ಅವರು ವೆಸ್ಟರ್ನ್ ವೇರ್ (western wear)ನಲ್ಲಿ ಸುಂದರವಾಗಿ ಕಾಣುತ್ತಿರುವ ಫೋಟೋ ಸೀರೀಸ್ ಪೋಸ್ಟ್ ಮಾಡಿದ್ದಾರೆ. ಕಂದು ಬಣ್ಣದ ಸ್ಟೈಲಿಶ್ ಉಡುಪನ್ನು ಧರಿಸಿರುವ ನಟಿ ಚಿತ್ರಗಳಲ್ಲಿ ಲೇಡಿ ಬಾಸ್ ನಂತೆ ಕಾಣುತ್ತಾರೆ. ಇವರು ತನ್ನ ಡ್ರೆಸ್ ಜೊತೆ ದೊಡ್ಡ ಕಿವಿಯೋಲೆಗಳು, ನ್ಯಾಚುರಲ್ ಹೇರ್ ಸ್ಟೈಲ್, ಪರ್ಫೆಕ್ಟ್ ಮೇಕಪ್ ಲುಕ್ ಜೊತೆ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ.
ಅದು ಸೀರೆಯಾಗಿರಲಿ ಅಥವಾ ಗೌನ್ ಅಥವಾ ಸಲ್ವಾರ್ ಸೂಟ್ ಆಗಿರಲಿ, ಇವರು ಪ್ರತಿಯೊಂದು ಔಟ್ ಫಿಟ್‌ನಲ್ಲೂ ಔಟ್ ಸ್ಟ್ಯಾಂಡಿಂಗ್ (out standing) ಆಗಿ ಕಾಣಿಸುತ್ತಾರೆ. ಪ್ರತಿಯೊಂದು ಡ್ರೆಸ್‌ಗಳನ್ನು ಇವರು ಕ್ಯಾರಿ ಮಾಡುತ್ತಿರುವ ರೀತಿ ಅದ್ಭುತ. ಇವರನ್ನು ನೋಡಿದ್ರೆ ಈಗಷ್ಟೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಯುವತಿಯ ತರ ಕಾಣುತ್ತಾರೆ.
ಶ್ವೇತಾ ತಿವಾರಿ 'ಹಮಾರ್ ಸೈಯಾನ್ ಹಿಂದೂಸ್ತಾನಿ', 'ಏ ಭಾವುಜಿ ಕೆ ಸಿಸ್ಟರ್', 'ಕಬ್ ಐಬು ಅಂಗನ್ವಾ ಹಮಾರ್' ಮತ್ತು 'ಸಬ್ಸೆ ಬಡಾ ರುಪೈಯಾ' ನಂತಹ ಹಲವಾರು ಹಿಟ್ ಭೋಜ್ಪುರಿ ಚಲನಚಿತ್ರಗಲ್ಲಿ ನಟಿಸಿದ್ದರೂ, ಹಿಮ್ದಿ ಕಿರುತೆರೆ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರು ಇನ್ಸ್ಟಾಗ್ರಾಂ ನಲ್ಲಿ 4 ಮಿಲಿಯನ್‌ಗೂ ಅಧಿಕ ಫಾಲೋಯರ್ಸ್ ಇದ್ದಾರೆ.
22 ವರ್ಷದ ಮಗಳಿರೋ ಈ ನಟಿಯನ್ನು ನೋಡಿದ್ರೆ ಈಗ್ಲೂ ಜನ ಫಿದಾ ಆಗೋದು ಗ್ಯಾರಂಟಿ. ಯಾಕಂದ್ರೆ ಅವರು ವಯಸ್ಸಾಗುತ್ತಿದ್ದಂತೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರು ಮಾಡಿಸುತ್ತಿರುವ ಪ್ರತಿಯೊಂದು ಫೋಟೋ ಶೂಟ್ ನೋಡಿದ್ರೆ ಇವರಿಗೆ 42 ವರ್ಷವಾಗಿದೆಯೇ? ಚಾನ್ಸೇ ಇಲ್ಲ ಎನ್ನುವಂತೆ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಶ್ವೇತಾ.